ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭಾರತದ ಬೃಹತ್ ಮೊತ್ತ: ಕಿವೀಸ್ ಬೌಲಿಂಗ್ ಧೂಳೀಪಟ: ಅಬ್ಬರಿಸಿ ಬೊಬ್ಬಿರಿದ ವಿರಾಟ್, ಶ್ರೇಯಸ್, ರಾಹುಲ್, ರೋಹಿತ್: ನ್ಯೂಜಿಲೆಂಡ್ ಗೆ 398 ರನ್ ಗಳ ಗುರಿ

On: November 15, 2023 12:31 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:15-11-2023

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ ಮನ್ ಗಳು ಅಬ್ಬರಿಸಿ ಬೊಬ್ಬಿರಿದರು. ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ. ಎಲ್. ರಾಹುಲ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ 50 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 397 ರನ್ ಗಳಿಸಿತು.

ರೋಹಿತ್ ಶರ್ಮಾ ಹಾಗೂ ಶುಭಮನ್ ಅಬ್ಬರದ ಆರಂಭಿಕ ಜೊತೆಯಾಟ ನೀಡಿದರು. ಮೊದಲ ವಿಕೆಟ್ ಗೆ ಬಿರುಸಿನ ಜೊತೆಯಾಟ ನೀಡಿದರಲ್ಲದೇ, ಆರಂಭದಲ್ಲಿಯೇ ಬೃಹತ್ ಮೊತ್ತ ಭಾರತ ಪೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎಂಬು ಸಾಬೀತಾಯಿತು.

ವೇಗದ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ 47 ರನ್ ಗಳಿಸಿ ಅರ್ಧಶತಕದಿಂದ ವಂಚಿತರಾದರು. ಆ ನಂತರ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ ಉತ್ತಮ ಜೊತೆಯಾಟ ನೀಡಿದರು. 80 ರನ್ ಗಳಿಸಿದ್ದ ವೇಳೆ ಅಸ್ವಸ್ಥರಾಗಿ ಶುಭಮನ್ ಗಿಲ್ ಸ್ವಯಂ ಕ್ರೀಡಾಂಗಣದಿಂದ ಹೊರ ನಡೆದರು.

ಆ ನಂತರ ಬಂದ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಆರಂಭದಲ್ಲಿ ನಿಧಾನಗತಿ ರನ್ ಪೇರಿಸಿದರೂ ಆ ನಂತರ ಅಬ್ಬರಿಸಲು ಶುರು ಮಾಡಿದರು. ವಿರಾಟ್ ಕೊಹ್ಲಿ 50 ನೇ ಶತಕ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದು ಹೊಸ ಇತಿಹಾಸ ಬರೆದರು. ಶ್ರೇಯಸ್ ಅಯ್ಯರ್ ಕಿವೀಸ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. 105 ರನ್ ಬಾರಿಸಿ ತಂಡದ ಮೊತ್ತ ಹೆಚ್ಚಾಗಲು ಕಾರಣರಾದರು.

ಕೊನೆಯಲ್ಲಿ ಸಿಕ್ಸರ್ ಗಳ ಮೂಲಕ ರಂಜಿಸಿದ ಕೆ. ಎಲ್. ರಾಹುಲ್ ಬಿರುಸಿನ ಆಟವಾಡಿ ತಂಡದ ಮೊತ್ತ 397 ರನ್ ಆಗಲು ಕಾರಣೀಭೂತರಲ್ಲಿ ಒಬ್ಬರಾದರು. ಸೂರ್ಯಕುಮಾರ್ ಯಾದವ್ ಕೇವಲ ಒಂದು ರನ್ ಗಳಿಸಿ ನಿರಾಸೆ ಮೂಡಿಸಿದರು. ಫೈನಲ್ ಪ್ರವೇಶಿಸಬೇಕಾದರೆ ನ್ಯೂಜಿಲೆಂಡ್ ತಂಡವು 398 ರನ್ ಗಳನ್ನು ಗಳಿಸಬೇಕಿದೆ. ಇದು ಸವಾಲಿನ ಮೊತ್ತ ಆಗಿದೆ. ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡವು ಉತ್ತಮ ರನ್ ಕಲೆಹಾಕಿದೆ. ಕಿವೀಸ್ ಬಳಗಕ್ಕೆ ಈ ಮೂಲಕ ಕಠಿಣ ರನ್ ಗಳ ಗುರಿಯನ್ನು ಟೀಂ ಇಂಡಿಯಾ ನೀಡಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment