ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನ್ಯಾನೋ ಯೂರಿಯಾ ಬಳಸಿ, ಇಳುವರಿ ಹೆಚ್ಚಿಸಿ: ಡಿಸಿ ಜಿ. ಎಂ. ಗಂಗಾಧರಸ್ವಾಮಿ

On: August 1, 2025 5:38 PM
Follow Us:
ಯೂರಿಯಾ
---Advertisement---

ದಾವಣಗೆರೆ: ರೈತರು ಹೆಚ್ಚಾಗಿ ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೋ ಯೂರಿಯಾ ಬಳಸುವ ಮೂಲಕ ಇಳುವರಿ ಹೆಚ್ಚಿಸುವುದರ ಜೊತೆಗೆ ಬೆಳೆಗಳಿಗೆ ಕಾಡುವ ರೋಗ, ಕೀಟಬಾಧೆ ಕೊನೆಗಾಣಿಸಿ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

READ ALSO THIS STORY: BIG EXCLUSIVE: ಮಾಜಿ ಪ್ರಧಾನಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅತ್ಯಾಚಾರ ಕೇಸ್ ನಲ್ಲಿ ದೋಷಿ: ಮಾಜಿ ಸಂಸದನಿಗೆ ಶಾಕ್! 

ದಾವಣಗೆರೆ ತಾಲ್ಲೂಕಿನ ತುಂಬಿಗೆರೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕೃಷಿ ಇಲಾಖೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತುಂಬಿಗೆರೆ ಹಾಗೂ ಇಫೊಕೀ ಸಂಸ್ಥೆ ಹಾಗೂ ಹೆಬ್ಬಾಳು ಮಠದ
ಶ್ರೀ ಶ್ರೀ ಶ್ರೀ ಮಹಾಂತರುದ್ರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಲಾದ ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೋ ಯೂರಿಯಾ ಡ್ರೋನ್ ಮುಖಾಂತರ ಸಿಂಪರಣೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾನೋ ಯೂರಿಯಾ ಬೆಳೆಗಳಿಗೆ ಸಿಂಪರಣೆ ಮಾಡಿದ ನಾಲ್ಕು ತಾಸುಗಳಲ್ಲಿ ಹೀರಿಕೊಳ್ಳುವ ಸಾಮಥ್ರ್ಯವಿದ್ದು, ಶೇಕಡ 80ರಷ್ಟು ಬೆಳೆಗಳಿಗೆ ಸಿಗುತ್ತದೆ. ರೈತರು ಹೆಚ್ಚಾಗಿ ಹರಳು ರೂಪದ ಯೂರಿಯಾವನ್ನು ಬೆಳೆಗಳಿಗೆ ಹಾಕುವುದರಿಂದ ರೋಗ, ಕೀಟಬಾಧೆ ಹೆಚ್ಚಾಗುತ್ತದೆ. ಆದುದರಿಂದ ರೈತರು ನ್ಯಾನೋ ಯೂರಿಯಾ ಬಳಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಶ್ರೀ ಶ್ರೀ ಮಹಾಂತ ರುದ್ರ ಸ್ವಾಮಿಗಳವರು ಮಾತನಾಡಿ, ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೋ ಯೂರಿಯವನ್ನು ಮಠದ ಹದಿನಾಲ್ಕು ಎಕರೆ ಮೆಕ್ಕೆಜೋಳ ಬೆಳೆಗೆ ಈಗಾಗಲೇ ಸಿಂಪರಣೆ ಮಾಡಲಾಗಿದ್ದು, ಬೆಳೆಯು ಉತ್ಕ್ರಷ್ಟವಾಗಿ ಬೆಳೆದು ನಿಂತಿದೆ. ಆದುದರಿಂದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಮೆಕ್ಕೆಜೋಳ ಬೆಳೆಯಲ್ಲಿ ಮುಳ್ಳುಸಜ್ಜೆ ಹೆಚ್ಚಾಗಿದ್ದು, ರಾಗಿ, ತೊಗರಿ ಹಾಗೂ ಇತರೆ ಬೆಳೆ ಪರಿವರ್ತನೆ ಮಾಡಿ ಬೆಳೆಗಳನ್ನು ಬೆಳೆಯಬೇಕು. ಆಗ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಜಿಯಾವುಲ್ಲಾ ಮಾತನಾಡಿ, ಅತಿ ಹೆಚ್ಚಾಗಿ ಹರಳು ರೂಪದ ಯೂರಿಯಾ ಬೆಳೆಗಳಿಗೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಹಾಳಾಗಿ, ಜನಸಾಮಾನ್ಯರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿರುವುದು ಹಾಗೂ ಕ್ಯಾನ್ಸರ್ ಅಂತಹ ಮಾರಕ ರೋಗಗಳೂ ಕೂಡ ಉಲ್ಬಣಗೊಳ್ಳುತ್ತಿವೆ. ಜಾನುವಾರು, ಕುಡಿಯುವ ನೀರಿನ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದುದರಿಂದ ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೋ ಯೂರಿಯಾ ಬಳಕೆ ಮಾಡುಬೇಕು ಎಂದು ತಿಳಿಸಿದರು.

ಈ ವೇಳೆ ತುಂಬಿಗೆರೆ ಗ್ರಾಮದ ರೈತ ಎಸ್. ಎಸ್. ಕೆಂಚವೀರಪ್ಪ ಇವರ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳದ ಬೆಳೆಗೆ ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೋ ಯೂರಿಯಾ ಡ್ರೋನ್ ಮುಖಾಂತರ ಸಿಂಪರಣೆ ಆಂದೋಲನ ಪ್ರಾರಂಭಿಸಿ, ಡ್ರೋನ್ ಮುಖಾಂತರ ಮೆಕ್ಕೆಜೋಳ ಬೆಳೆಗೆ ನ್ಯಾನೋ ಯೂರಿಯಾ ಸಿಂಪರಣೆ ಮಾಡುವ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕರು ಎಸ್.ಅಶೋಕ್, ಸಹಾಯಕ ಕೃಷಿ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ, ತಹಶೀಲ್ದಾರ್ ಅಶ್ವಥ್, ಕೃಷಿ ಅಧಿಕಾರಿ ಆರ್.ಶ್ರೀನಿವಾಸ್, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಶಿವಣ್ಣ, ಕೃಷಿಕ ಸಮಾಜದ ಸದಸ್ಯರಾದ ಹೊನ್ನೂರು ಮುನಿಯಪ್ಪ, ನಾಗರಾಜ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಪಿ. ನುಲಿಯಚಂದಯ್ಯ, ಉಪಾಧ್ಯಕ್ಷ ಬಿ.ವಿ.ಶೀಲಾ ಹಾಗೂ ಹೆಚ್.ಬಿ. ಭೂಮೇಶ್ವರಪ್ಪ, ಅಣಜಿ ಚಂದ್ರಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಹೆಚ್.ವಿ. ರೇವಣಸಿದ್ದಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ಸದಸ್ಯರುಗಳು, ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Credit card

ಬಾಡಿಗೆ ಪಾವತಿಗೆ ಕ್ರೆಡಿಟ್ ಕಾರ್ಡ್ ಬಳಕೆ ಸರಿಯೋ ತಪ್ಪೇ: ಈ ಐದು ಅಂಶಗಳ ನೆನಪಿನಲ್ಲಿಟ್ಟುಕೊಳ್ಳಿ!

bank of baroda

ಬ್ಯಾಂಕ್ ಆಫ್ ಬರೋಡಾ ಸ್ಥಳೀಯ ಬ್ಯಾಂಕ್ ಅಧಿಕಾರಿ ನೇಮಕಾತಿ 2025: 2500 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ಅಡಿಕೆ

ಮಳೆ ಆಶ್ರಿತ ಪ್ರದೇಶದಲ್ಲಿ ಕೊಳವಿ ಬಾವಿ ನೀರಿನೊಂದಿಗೆ ಅಡಿಕೆ ಬೆಳೆಯುವುದರಿಂದ ಅಂತರ್ಜಲ ಮಟ್ಟ ಕುಸಿತ!

ಕಿರಣ್ ರಿಜಿಜು

ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಚರ್ಚೆಗೆ ಕೇಂದ್ರ ಸಿದ್ಧ, ಹಿಂಜರಿಯುವುದಿಲ್ಲ: ಕೇಂದ್ರ ಸಚಿವ ಕಿರಣ್ ರಿಜಿಜು

ಕೂಡಲ ಸಂಗಮ

ಭುಗಿಲೆದ್ದ ಕೂಡಲ ಸಂಗಮ ಪೀಠ ವಿವಾದದ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ ಹೆಚ್. ಎಸ್. ಶಿವಶಂಕರ್!

ದಾವಣಗೆರೆ

ಅಕ್ರಮ, ಹಗರಣಗಳ ತಾಣ ದಾವಣಗೆರೆ ನಿರ್ಮಿತಿ ಕೇಂದ್ರದ ಅಕ್ರಮ ನೇಮಕಾತಿಯಾಗಿರುವ 12 ಮಂದಿ ವಜಾಗೊಳಿಸದಿದ್ದರೆ ಕೋರ್ಟ್ ಗೆ: ಲೋಕಿಕೆರೆ ನಾಗರಾಜ್ ಎಚ್ಚರಿಕೆ!

Leave a Comment