SUDDIKSHANA KANNADA NEWS/ DAVANAGERE/ DATE:01-06-2023
ದಾವಣಗೆರೆ(DAVANAGERE): ಹರಿಹರ (HARIHARA) ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಜಾತಿ ನಿಂದನೆ ಪ್ರಕರಣ ಎದುರಿಸುತ್ತಿದ್ದ ಶಾಸಕ ಬಿ. ಪಿ. ಹರೀಶ್ (B. P. HARISH)ಗೆ ನಿರೀಕ್ಷಣಾ ಜಾಮೀನು ದೊರೆತಿದೆ.
ಜಾತಿ ನಿಂದನೆ ಪ್ರಕರಣ ಎದುರಿಸುತ್ತಿದ್ದ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ (MLA B.P. HARISH) ಅವರಿಗೆ ದಾವಣಗೆರೆಯ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.
ಮಾದಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹರೀಶ್ (HARISH), ‘ಅಪ್ಪನಿಗೆ ಹುಟ್ಟಿದ ಮಾದಿಗರು ಮಾತ್ರ ಬಿಜೆಪಿಗೆ ಮತ ಹಾಕಿದ್ದಾರೆ’ ಎಂಬ ಹೇಳಿಕೆ ನೀಡಿದ್ದರು. ಮಾದಿಗ ಸಮುದಾಯದವರು ಬಿಜೆಪಿಗೆ ಮತ ಹಾಕಿಲ್ಲ. ಇಲ್ಲಿಗೆ ಯಾಕೆ ಬಂದಿದ್ದೀರಿ. ಇಲ್ಲಿಂದ ಹೋಗಿ ಎಂಬ ಮಾತು ಸೇರಿದಂತೆ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಹರೀಶ್ ವಿರುದ್ಧ ಜಾತಿ ನಿಂದನೆ ಆರೋಪದಡಿ ಹರಿಹರ (HARIHARA) ಪೊಲೀಸ್ (POLICE) ಠಾಣೆಯಲ್ಲಿ ಪ್ರಕರಮ ದಾಖಲಾಗಿತ್ತು.
ಮಾದಿಗ ಸಮುದಾಯವು ದೂರು (COMPLAINT) ಸಲ್ಲಿಕೆ ಮಾಡುವ ಜೊತೆಗೆ ಕಾನೂನು ಹೋರಾಟಕ್ಕೂ ಮುಂದಾಗಿತ್ತು. ಬಹಿರಂಗವಾಗಿಯೇ ಪತ್ರಿಕಾಗೋಷ್ಠಿ (PRESSMEET) ನಡೆಸಿ ಶಾಸಕರ ನಡೆಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ, ಪ್ರತಿಭಟನೆಯ ಹಂತಕ್ಕೂ ಹೋಗಿತ್ತು. ಮಾದಿಗ ಸಮುದಾಯಕ್ಕೆ ಬಿಜೆಪಿ ಸರ್ಕಾರ ಒಳಮೀಸಲಾತಿ ನೀಡಿದೆ. ಆದರೆ ಮಾದಿಗರು ಬಿಜೆಪಿಗೆ ಮತ ಹಾಕಿಲ್ಲವೆಂದು ಹರೀಶ್ ವಾಗ್ದಾಳಿ ನಡೆಸಿದ್ದರು. ಬಿ.ಪಿ.ಹರೀಶ್ (B. P. HARISH) ನೀಡಿದ್ದ ಅವಹೇಳನಕಾರಿ ಹೇಳಿಕೆ ವೈರಲ್ ಆಗಿತ್ತು. 7 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಹರೀಶ್ 5 ಬಾರಿ ಸೋತಿದ್ದರು. ಎರಡು ಬಾರಿ ಜಯ ಗಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಚಂಡ ಜಯಭೇರಿ ಬಾರಿಸಿದೆ. ಆದ್ರೆ, ಹರಿಹರ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ನೀಡಿದ್ದ ತೀವ್ರ ಪ್ರತಿರೋಧದ ನಡುವೆಯೂ ಬಿ. ಪಿ. ಹರೀಶ್ 4200 ಮತಗಳಿಗೂ ಹೆಚ್ಚು ಅಂತರದಿಂದ ಗೆಲುವು ಕಂಡಿದ್ದರು. ಆದ್ರೆ, ಮಾದಿಗ ಸಮುದಾಯದವರು ಬಂದಾಗ ಅವಹೇಳನಕಾರಿ ಹೇಳಿಕೆ ನೀಡಿ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದರು. ಆದ್ರೆ, ಈಗ ಜಾಮೀನು ದೊರೆತಿದ್ದು, ನೂತನ ಶಾಸಕರು ನಿಟ್ಟುಸಿರು ಬಿಡುವಂತಾಗಿದೆ.