ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅಂಚೆ ಇಲಾಖೆ ಗ್ರಾಹಕರಿಗೆ ಮಹತ್ವದ ಸೂಚನೆ: ಉದ್ಯಮ ಸಪ್ತಾಹದಲ್ಲಿ ಸಿಗಲಿದೆ ಹಲವು ಮಹತ್ವದ ಮಾಹಿತಿ

On: September 10, 2025 7:54 PM
Follow Us:
ಅಂಚೆ ಇಲಾಖೆ
---Advertisement---

SUDDIKSHANA KANNADA NEWS/ DAVANAGERE/DATE:10_09_2025

ದಾವಣಗೆರೆ: ಅಂಚೆ ಇಲಾಖೆಯು ದಿನಾಂಕ ಸೆ.8 ರಿಂದ 13 ರವರೆಗೆ ಅಂಚೆ ಉದ್ಯಮ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

READ ALSO THIS STORY: 8 ತಿಂಗಳಲ್ಲಿ 56 ಸೈಬರ್ ಕೇಸ್, ದಾವಣಗೆರೆಯಲ್ಲಿ ರೂ. 1 ಕೋಟಿಗೂ ಹೆಚ್ಚು ವಂಚನೆ: ಸೈಬರ್ ಅಪರಾಧ ಡಿವೈಎಸ್ಪಿ ನಾಗಪ್ಪ

ದೇಶದ ಮೂಲೆ ಮೂಲೆಗಳನ್ನು ಸಂಪರ್ಕಿಸಿ ಸ್ಪೀಡ್ ಪೋಸ್ಟ್ ಡಾಕ್ಯುಮೆಂಟ್, ಸ್ಪೀಡ್ ಪೋಸ್ಟ್ ಪಾರ್ಸೆಲ್, ಇಂಟನ್ಯಾಷನಲ್ ಸ್ಪೀಡ್ ಪೋಸ್ಟ್ ಗಳನ್ನು, ಬೃಹತ್ ಸಂಖ್ಯೆಯಲ್ಲಿ ಕಳಿಸುವ ಗ್ರಾಹಕರನ್ನು ಸಂಪರ್ಕಿಸಿ ನಮ್ಮ
ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಪ್ರಚಾರಗೊಳಿಸುವ ಯೋಜನೆಯಾಗಿರುತ್ತದೆ.

ಗ್ರಾಹಕರು ಕಡಿಮೆ ಬೆಲೆಯಲ್ಲಿ ದೇಶ ಹಾಗೂ ವಿದೇಶಗಳಿಗೆ ತಮ್ಮ ಪತ್ರಗಳನ್ನು ಮತ್ತು ಸರಕು ಸಾಮಗ್ರಿಗಳನ್ನು ಕಳುಹಿಸಬಹುದು. ಗ್ರಾಹಕರ ಆಫೀಸ್ ಅಥವಾ ಅವರ ವ್ಯವಹಾರಿಕ ಸ್ಥಳಗಳಿಗೆ ಬಂದು ಅಂಚೆಗಳನ್ನು ಸಂಗ್ರಹಿಸುವ ವ್ಯವಸ್ಥೆಯು ಸಹ ಇರುತ್ತದೆ. ಅಥವಾ ಗ್ರಾಹಕರೇ ಅದನ್ನು ಬುಕ್ ಮಾಡಿದರೆ, ಅದನ್ನು ಸಮೀಪದ ಅಂಚೆ ಕಚೇರಿಯವರು ಬಂದು ತೆಗೆದು ಕೊಂಡು ಹೋಗುವ ಸೌಲಭ್ಯವು ಇರುತ್ತದೆ.

ಬೃಹತ್ ಸಂಖ್ಯೆಗಳಲ್ಲಿ ಅಂಚೆ ಪತ್ರಗಳನ್ನು ಅಥವಾ ಸರಕು ಸಾಮಗ್ರಿಗಳನ್ನು ಕಳುಹಿಸುವ ಗ್ರಾಹಕರು ಈ ಸೌಲಭ್ಯಗಳನ್ನು ಉಪಯೋಗಿಸಿ ಸುರಕ್ಷಿತವಾಗಿ ತಮ್ಮ ಅಂಚೆಗಳನ್ನು ಸಮಯಕ್ಕೆ ಸರಿಯಾಗಿ ಕಳಿಹಿಸುವ ಈ ಅಂಚೆ ಸೇವೆಯನ್ನು ಪಡೆದು ಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ 8861126883 ಸಂತೋಷ್ ಬಿ. (ಮಾರುಕಟ್ಟೆ ಅಧಿಕಾರಿ) ಸಂಪರ್ಕಿಸಲು ಅಂಚೆ ವಿಭಾಗದ ಅಧೀಕ್ಷಕರಾದ ಚಂದ್ರಶೇಖರ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರಾಶಿ

ಬುಧವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2025: ಈ ರಾಶಿಯವರ ಯಾವುದೇ ಕೆಲಸ ಪ್ರಯತ್ನಿಸಿದರೂ ಕೈಗೂಡುತ್ತಿಲ್ಲ ಯಾಕೆ?

ಯುವತಿ

ದುರ್ಗಾಪುರ ಯುವತಿ ಮೇಲೆ ಅ*ತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದ ಸಹಪಾಠಿ ಸೆರೆ: ಬಂಧಿತರ ಸಂಖ್ಯೆ 6ಕ್ಕೇರಿಕೆ, ಸ್ಫೋಟಕ ಮಾಹಿತಿ ಬಯಲಿಗೆ!

ಚನ್ನಗಿರಿ

ಚನ್ನಗಿರಿ ಪಟ್ಟಣ ಸಮೀಪದ ಜೆ. ಹೆಚ್. ಪಟೇಲ್ ನಗರದಲ್ಲಿ ರಾತ್ರಿ ವೇಳೆ ಎಸ್ಪಿ ಭೇಟಿ: ಮನೆ ಗೋಡೆ ಮೇಲೆ ಉಮಾ ಪ್ರಶಾಂತ್ ಸ್ಟಿಕ್ಕರ್ ಅಂಟಿಸಿದ್ಯಾಕೆ?

ಧರ್ಮಸ್ಥಳ

ಕಾಂಗ್ರೆಸ್ ಜೊತೆ ಶಾಮೀಲಾಗಿಲ್ಲವಾದರೆ ಬಿಜೆಪಿ ಕಚೇರಿಗೆ ಬಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ: ಕೃಷ್ಣಮೂರ್ತಿ ಪವಾರ್ ಪಂಥಾಹ್ವಾನ

ವ್ಯಾಪಾರಿ

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಆತ್ಮ ನಿರ್ಭರ್ ಯೋಜನೆಯಡಿ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿ

ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಕೃತಕ ಬುದ್ದಿಮತ್ತೆ ಭವಿಷ್ಯದ ಕಾರ್ಯಪಡೆ ಕಾರ್ಯಾಗಾರ

Leave a Comment