ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಗಣೇಶ ಮೂರ್ತಿಗಳ ವಿಸರ್ಜನೆ: 21 ದಿನಗಳ ಅವಧಿ ನಿಗದಿ

On: August 21, 2025 10:44 AM
Follow Us:
ಗಣೇಶ
---Advertisement---

SUDDIKSHANA KANNADA NEWS/ DAVANAGERE/DATE:21_08_2025

ದಾವಣಗೆರೆ: ಜಿಲ್ಲೆಯ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಆಗಸ್ಟ್ 27 ರಿಂದ ಪ್ರಾರಂಭವಾಗುವ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಜಿಲ್ಲೆಯಲ್ಲಿ ಪ್ರತಿಷ್ಠಾಪಿಸಿ ವಿಸರ್ಜನೆ ಮಾಡುವ ಗಣೇಶ ಮೂರ್ತಿಗಳ ಅವಧಿಯನ್ನು ಆಗಸ್ಟ್ 27 ರಿಂದ ಸೆಪ್ಟೆಂಬರ್ 16 ರವರೆಗೆ (21 ದಿನಗಳವರೆಗೆ) ಮಾತ್ರ  ನಿಗಧಿ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ ಜಿ. ಎಂ. ಆದೇಶಿಸಿದ್ದಾರೆ.

READ ALSO THIS STORY: ನೀವು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಸಾಲ ಪಡೆಯಬಹುದೇ?

ಜಿಲ್ಲೆಯಲ್ಲಿ ಪ್ರತಿ ವರ್ಷ ಗಣೇಶಮೂರ್ತಿಗಳ ಪ್ರತಿಷ್ಠಾಪನೆ ಹೆಚ್ಚಳವಾಗುತ್ತಿದೆ. ಜೊತೆಗೆ ವಿಳಂಬವಾಗಿ ವಿಸರ್ಜನೆ ಮಾಡುವುದು, ಡಿ.ಜೆ ಬಳಕೆಯು ಹೆಚ್ಚುತ್ತಿದೆ. ಇದರಿಂದ ಮೆರವಣಿಗೆ ಮಾರ್ಗಗಳನ್ನು ನಿಗದಿಪಡಿಸುವುದು ಸಮಸ್ಯೆಯಾಗುತ್ತಿದೆ.

ವಿಸರ್ಜನೆ ವೇಳೆ ಹೆಚ್ಚು ಜನರನ್ನು ಸೇರಿಸಬೇಕೆಂದು ವಿಳಂಬ ಮಾಡುತ್ತಿರುವುದು, ವೈಯಕ್ತಿಕ ವಿವಾದ, ಮೂರ್ತಿ ವಿಸರ್ಜನೆಯಲ್ಲಿ ವೇಳೆ ಸಣ್ಣಪುಟ್ಟ ಗಲಾಟೆಗಳು ಆಗುತ್ತಿರುವುದು ಕಂಡು ಬರುತ್ತಿದೆ.

ನಿರಂತರ ವಿಸರ್ಜನಾ ಮೆರವಣಿಗೆಗಳು ನಡೆಯುವುದರಿಂದ ಶಾಲಾ ಮಕ್ಕಳ ವಿದ್ಯಾಭ್ಯಾಸ, ಅರ್ಧ ವಾರ್ಷಿಕ ಪರೀಕ್ಷೆಯ ವ್ಯಾಸಾಂಗಕ್ಕೆ ಅಡ್ಡಿ, ಸುಗಮ ಸಂಚಾರ ವ್ಯವಸ್ಥೆಗೆ ಅಡ್ಡಿ, ವಿವಾದಗಳು, ಸಾರ್ವಜನಿಕರ ಶಾಂತಿ, ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುತ್ತಿದೆ.

ನಿರಂತರವಾಗಿ ಅಧಿಕಾರಿ ಮತ್ತು ಸಿಬ್ಬಂದಿಗಳು ಬಂದೋಬಸ್ತ್ ನಲ್ಲಿ ನಿಯೋಜನೆಗೊಳ್ಳುವುದರಿಂದ ಠಾಣೆಗಳಲ್ಲಿ ನಿಯಮಿತವಾಗಿ ನಡೆಯಬೇಕಾಗಿರುವ ಇಲಾಖಾ ಕೆಲಸಗಳು, ಸಾರ್ವಜನಿಕ ಸೇವೆ, ತನಿಖಾಕಾರ್ಯ ಸಾರ್ವಜನಿಕರ ಸಮಸ್ಯೆ ಆಲಿಸುವುದು. ಕುಂದುಕೊರತೆಗಳು, ದೂರುಗಳ ವಿಚಾರಣೆ, ತನಿಖಾ ಕಾರ್ಯ ವಿಳಂಬವಾಗವುದಲ್ಲದೇ, ಇತರೆ ತುರ್ತು ಕಾನೂನು ಸುವ್ಯವಸ್ಥೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಳಂಬ ತಡೆಗಟ್ಟಲು ಗಣೇಶಮೂರ್ತಿ ವಿಸರ್ಜನೆಯನ್ನು ಗರಿಷ್ಠ 21 ದಿನಗಳಿಗೆ ನಿಗದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment