ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಧರ್ಮಸ್ಥಳ ಕೇಸ್: ಮೂವರ ಗುಂಪು ಬಂದಿತ್ತೆಂದು ಮುಸುಕುಧಾರಿ ಹೇಳಿದ್ದರೆ ಸತ್ಯ ಹೊರ ಬಂದೇಬರುತ್ತೆ: ಡಾ. ಜಿ. ಪರಮೇಶ್ವರ್

On: August 18, 2025 4:47 PM
Follow Us:
ಧರ್ಮಸ್ಥಳ
---Advertisement---

SUDDIKSHANA KANNADA NEWS/ DAVANAGERE/DATE:18_08_2025

ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂಬ ಆರೋಪ ಮಾಡಿ ದೇಶಾದ್ಯಂತ ಸುದ್ದಿಯಾಗಿರುವ ಮುಸುಕುಧಾರಿ ಎಸ್ಐಟಿ ವಿಚಾರಣೆ ವೇಳೆ ತಮಿಳುನಾಡಿನಲ್ಲಿ ನಾನಿದ್ದಾಗ ಮೂವರ ಗುಂಪು ಬಂದಿತ್ತು ಎಂಬ ಸ್ಫೋಟಕ ಮಾಹಿತಿ ನೀಡಿದ್ದರೆ ಅದರಲ್ಲಿಯೂ ಸತ್ಯ ಹೊರ ಬರುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

READ ALSO THIS STORY: ಧರ್ಮಸ್ಥಳ ಕೇಸ್ ಗೆ ಟ್ವಿಸ್ಟ್, ಮೂವರ ಗುಂಪು ನನಗೆ ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿತ್ತು: ಎಸ್ಐಟಿ ಮುಂದೆ ಮುಸುಕುಧಾರಿ ಸ್ಫೋಟಕ ಮಾಹಿತಿ!

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅಪರಿಚಿತ ವ್ಯಕ್ತಿ ಹೇಳಿರುವಂತೆ ತನಿಖೆ ನಡೆಸುತ್ತಿದ್ದೇವೆ. ಸತ್ಯ ಹೊರ ಬರಬೇಕಿದೆ. ಮಾಧ್ಯಮಗಳಲ್ಲಿ ಸುದ್ದಿ ಬಂದಂತೆ ಅಪರಿಚಿತನು ಎಸ್ಐಟಿ ಮುಂದೆ ಮೂವರ ಗುಂಪು ಬಂದಿತ್ತು, 2023ರಲ್ಲಿ ಕರೆದುಕೊಂಡು ಬಂದಿದ್ದಾರೆ ಎಂಬ ಕುರಿತಂತೆ ಸತ್ಯವಲ್ಲ. ಒಂದು ವೇಳೆ ಷಡ್ಯಂತ್ರ ಇದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಮುಸುಕುಧಾರಿ ಪಾತ್ರ ಇದ್ದರೆ ಆತನ ವಿರುದ್ದವೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

G. Parameshwara

ಯಾವುದೇ ಕಾರಣಕ್ಕೂ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾರೇ ತಪ್ಪು ಮಾಡಿರಲಿ, ಷಡ್ಯಂತ್ರ ರೂಪಿಸಿದ್ದರೂ ಸತ್ಯ ಹೊರ ಬಂದೇ ಬರುತ್ತದೆ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದರು.

ನಾನು ಗೃಹ ಸಚಿವನಾಗಿರುವವರೆಗೂ ಯಾವುದೇ ಕಾರಣಕ್ಕೂ ತನಿಖೆ ಹಳ್ಳ ಹಿಡಿಯಲು ಬಿಡುವುದಿಲ್ಲ. ಯಾರದ್ದೇ ತಪ್ಪಿರಲಿ. ಶವ ಹೂತು ಹಾಕಿದ್ದರೆ ಹೊರ ಬರಲಿ. ಇಲ್ಲದಿದ್ದರೆ ಧರ್ಮಸ್ಥಳಕ್ಕೆ ಮತ್ತಷ್ಟು ಒಳ್ಳೆಯ ಹೆಸರು
ಬರುತ್ತದೆ. ತನಿಖೆ ನಡೆಯುವಾಗ ಅಡ್ಡಿಪಡಿಸುವುದು ಬೇಡ. ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡುವುದು ಸೂಕ್ತವಲ್ಲ ಎಂದು ಪರಮೇಶ್ವರ್ ಗುಡುಗಿದರು.

ಶಾಸಕ ಸುನೀಲ್ ಕುಮಾರ್ ಮಾತನಾಡಿ ಸತ್ಯ, ನ್ಯಾಯಕ್ಕಿಂತ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಬೇಕೆಂಬ ಹುನ್ನಾರ ಇದೆ. ಎಸ್ ಐಟಿ ತನಿಖೆ ನಡೆಸುತ್ತಿದೆ. ಒಬ್ಬ ಮುಸುಕುಧಾರಿ ಮಾತ್ರವಲ್ಲ, ಈತನ ಹಿಂದೆ ಹಲವಾರು ಮುಸುಕುಧಾರಿಗಳು
ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಈ ವೇಳೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment