ದಾವಣಗೆರೆ: ಹಿಂದೂಗಳಿಗೆ ಅನ್ಯಾಯವಾದರೆ ಬಿಡಲ್ಲ, ಧರಣಿ, ಸತ್ಯಾಗ್ರಹ ಮಾಡ್ತೇವೆ. ನ್ಯಾಯ ಬೇಕು ಅಷ್ಟೇ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಲೋಕಸಭೆ ಮಾಜಿ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ಅವರು ಎಚ್ಚರಿಕೆ ನೀಡಿದ್ದಾರೆ.
READ ALSO THIS STORY: EXCLUSIVE: ರಾಜ್ಯ ಸರ್ಕಾರದ ಗಣತಿ ಆಟ: ಶಿಕ್ಷಕರು, ಪಾಲಿಕೆ ನೌಕರರಿಗೆ ಬಂದಿದೆ ಜ್ವರ, ಜೊತೆಗೆ ಕೇಳೋರಿಲ್ಲ ಗೋಳಾಟ!
ಕಳೆದ ತಡರಾತ್ರಿಯಲ್ಲಿ ದಾವಣಗೆರೆ ನಗರದ ಕಾರ್ಲ್ ಮಾರ್ಕ್ಸ್ ನಗರದ ಯಮನೂರು ಗಂಗಮ್ಮ ಮತ್ತು ಕಸ್ತೂರಮ್ಮನವರ ಮನೆಯ ಮುಂಭಾಗ “ಐ ಲವ್ ಯು ಮಹಮ್ಮದ್” ಎನ್ನುವ ಫ್ಲೆಕ್ಸ್ ಅನ್ನು ಹಾಕಬೇಡಿ ಎನ್ನುವ ವಿಚಾರಕ್ಕೆ ಮಧ್ಯರಾತ್ರಿ 500ಕ್ಕೂ ಹೆಚ್ಚು ಜನ ಕಲ್ಲು, ದೊಣ್ಣೆಗಳನ್ನು ಹಿಡಿದು ಕಲ್ಲುಗಳನ್ನು ಮನೆಗಳ ಮೇಲೆ ತೂರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಭೆಯನ್ನೂ ಮಾಡಿದ್ದು ಇದನ್ನು ಖಂಡಿಸಿ ಗಲಭೆಯಾದ ಪ್ರದೇಶದ ಹಾನಿಯುಂಟಾದ ಮನೆಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನಾವು ಮುಸ್ಲಿಂರಿಗೆ ವಿರೋಧ ಅಲ್ಲ. ಕೇವಲ ಮೂರು ಮನೆಗಳ ಮೇಲೆ ಸಾವಿರಾರು ಮಂದಿ ಬಂದು ದಾಳಿ ಮಾಡಿದರೆ ಅರ್ಥವಿದೆಯಾ? ಎಂದು ಪ್ರಶ್ನಿಸಿದರು.
ಮನುಷ್ಯತ್ವ ಬೇಕಲ್ವಾ. ನಮ್ಮ ಸರ್ಕಾರವಿದ್ದಾಗ ಹಿಂದೂ ಮುಸ್ಲಿಂ ಗಲಾಟೆ ಆಯ್ತಾ. ಹಿಂದೂ ಮುಸ್ಲಿಂ ಅಣ್ಣ ತಮ್ಮಂದಿರ ರೀತಿ ಇದ್ದೇವೆ. ಈ ರೀತಿಯಾಗಿ ದೌರ್ಜನ್ಯ ಮಾಡಿದರೆ ಹಿಂದೂಗಳು ಸುಮ್ಮನೆ ಇರಲ್ಲ. ಇದು ಒಳ್ಳೆಯತನ ಅಲ್ಲ. ಎಲ್ಲವನ್ನೂ ಸಹಿಸಿಕೊಂಡು, ಸುಧಾರಿಸಿಕೊಂಡು
ಹೋಗಬೇಕು ಎಂದು ಡಾ. ಜಿ. ಎಂ. ಸಿದ್ದೇಶ್ವರ ಅವರು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಗಾಯಿತ್ರಿ ಸಿದ್ದೇಶ್ವರ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ರಾಜ್ಯ ಎಸ್.ಟಿ. ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷರಾದ ಶಿವಕುಮಾರ್ ರಾಜನಹಳ್ಳಿ, ಎ.ವೈ. ಪ್ರಕಾಶ್, ಮಾಜಿ ಮೇಯರ್ ವಸಂತಕುಮಾರ್, ರಮೇಶ್‌ನಾಯ್ಕ್, ವೀರೇಶ್ ದೊಗ್ಗಳ್ಳಿ, ಜಯಪ್ರಕಾಶ್, ಎಸ್.ಟಿ. ಯೋಗೇಶ್, ದುಗೇಶ್, ಶಿವು, ಗಣೇಶ್ ಹಾಗೂ ಇನ್ನೂ ಆನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.