SUDDIKSHANA KANNADA NEWS/ DAVANAGERE/ DATE:03-08-2024
ಮಡಿಕೇರಿ/ ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾಲಿ ಇರುವ 4455 ಕ್ಕೂ ಹೆಚ್ಚು ಪ್ರೊಬೇಶನರಿ ಆಫೀಸರ್ ಹಾಗೂ 896 ಕ್ಕೂ ಹೆಚ್ಚು ಸ್ಪೆಶಲಿಸ್ಟ್ ಆಫೀಸರ್ ಗಳ ಹುದ್ದೆಗಳ ನೇಮಕಾತಿಗೆ ಐ.ಬಿ.ಪಿ.ಎಸ್ ಸಂಸ್ಥೆ ಅರ್ಜಿ ಆಹ್ವಾನಿಸಿದೆ.
ಪದವೀಧರ ವಿದ್ಯಾಥರ್ಿಗಳು ಆಗಸ್ಟ್, 21 ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ https://www.ibps.in/ ವೀಕ್ಷಿಸಬಹುದಾಗಿದೆ.
ಈ ವರ್ಷದಲ್ಲಿ ಇಲ್ಲಿಯವರೆಗೆ 20,566 ಕ್ಕೂ ಹೆಚ್ಚಿನ ಬ್ಯಾಂಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಂತಾಗಿದೆ. ಪದವೀಧರ ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗಪಡಿಸಿಕೊಳ್ಳಬೇಕಾಗಿದೆ.
ಪ್ರಸ್ತುತ ವರ್ಷದಲ್ಲಿ ಈಗಾಗಲೇ ಎರಡು ಬ್ಯಾಚ್ಗಳಲ್ಲಿ ಬ್ಯಾಂಕ್ ನೇಮಕಾತಿ ಪರೀಕ್ಷೆಗಳಿಗೆ ಯಶಸ್ವಿಯಾಗಿ ತರಬೇತಿ ನೀಡಿರುವ ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಶನ್ ನಲ್ಲಿ
ಬ್ಯಾಂಕ್ ನೇಮಕಾತಿ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಆಗಸ್ಟ್, 8 ರಂದು ಉಚಿತ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಆಸಕ್ತ ಪದವೀಧರ ವಿದ್ಯಾರ್ಥಿಗಳು ಆಗಸ್ಟ್,07 ರೊಳಗೆ ಮೊಬೈಲ್ ಸಂಖ್ಯೆ 8660217739 ನ್ನು ಸಂಪರ್ಕಿಸಬಹುದು ಎಂದು ಹಾಸನ ಶಾಖೆಯ ಕೃಷಿಕ್ ಸರ್ವೋದಯ ಫೌಂಡೇಶನ್ ಕಾರ್ಯದರ್ಶಿ
ಅವರು ತಿಳಿಸಿದ್ದಾರೆ.