SUDDIKSHANA KANNADA NEWS/ DAVANAGERE/ DATE:12-09-2024
ದಾವಣಗೆರೆ (Davanagere): ಐಎಎಸ್ ಕೋಚಿಂಗ್ ಸಿಗುವುದು ತುಂಬಾನೇ ಕಷ್ಟ. ಪೋಷಕರು ತನ್ನ ಮಕ್ಕಳು ಡಿಸಿ ಆಗಬೇಕು, ಎಸ್ಪಿ ಆಗಬೇಕು, ಇಲ್ಲದಿದ್ದರೆ ಕೆಪಿಎಸ್ ಸಿ ಪರೀಕ್ಷೆ ತೆಗೆದುಕೊಂಡು ಕನಿಷ್ಠ ಸರ್ಕಾರಿ ನೌಕರನಾಗಬೇಕು ಎಂಬ ಕನಸು ಕಂಡಿರುತ್ತಾರೆ. ಆದ್ರೆ, ಇದು ಈಡೇರುವುದು ಅಷ್ಟು ಸುಲಭವಲ್ಲ. ಇದಕ್ಕೆ ತರಬೇತಿ ಬೇಕು. ಆದ್ರೆ, ಬಡ, ಆರ್ಥಿಕವಾಗಿ ಹಿಂದುಳಿದ, ಗ್ರಾಮೀಣ ಪ್ರದೇಶದವರು, ಮಧ್ಯಮ ವರ್ಗದವರಿಗೆ ಗಗನಕುಸುಮ ಎಂಬಂತಾಗಿತ್ತು. ಆದ್ರೆ, ಇನ್ಸೈಟ್ಸ್ ಸಂಸ್ಥೆಯು ಈ ಕನಸು ಸಾಕಾರಗೊಳಿಸುವ ಯೋಜನೆ ಘೋಷಿಸಿದೆ.
ದಾವಣಗೆರೆ ಜಿಲ್ಲೆಗೆ ಮಾತ್ರ ಅನ್ವಯವಾಗಲಿದ್ದು, ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪ್ರತಿಭಾವಂತ, ಬಡ ವಿದ್ಯಾರ್ಥಿಗಳಿಗೆ ವರದಾನ.
Read Also This Story: SPECIAL STORY: ಜಿ. ಬಿ. ವಿನಯ್ ಕುಮಾರ್ ಗೆ ಟಾಪ್ 5 ಸೂಪರ್ ಸ್ಟಾರ್ ಎಜುಕೇಟರ್ ಗೌರವ: ರಾಷ್ಟ್ರಮಟ್ಟದಲ್ಲಾಯ್ತು ಸಂಚಲನ…!
ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹೊನ್ನಾಳಿ, ಮಾಯಕೊಂಡ, ಹೊನ್ನಾಳಿ, ಹರಿಹರ, ಹರಪನಹಳ್ಳಿ, ಜಗಳೂರು ತಾಲೂಕಿನ ಪ್ರತಿ 10 ವಿದ್ಯಾರ್ಥಿಗಳಿಗೆ ಉಚಿತವಾಗಿ ಐಎಎಸ್ ಕೋಚಿಂಗ್ ನೀಡುವುದಾಗಿ ಪ್ರಕಟಿಸಲಾಗಿದೆ. ಇದು ಕೇವಲ ದಾವಣಗೆರೆ ಜಿಲ್ಲೆಯವರಿಗೆ ಮಾತ್ರ.
ಫ್ರೀ ಕೋಚಿಂಗ್ ಪಡೆಯಲು ಏನು ಮಾಡಬೇಕು…?
ಪ್ರತಿ ತಾಲೂಕಿನ ತಲಾ ಹತ್ತು ತಾಲೂಕಿನ ವಿದ್ಯಾರ್ಥಿಗಳಿಗೆ ಈ ಕೋಚಿಂಗ್ ಫ್ರೀ ಆಗಿ ಸಿಗಲಿದೆ. ಅಂದ ಹಾಗೆ ಈ ಸೀಟು ಪಡೆಯುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಸ್ಕಾಲರ್ ಶಿಪ್ ಎಂದು ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಉತ್ತೀರ್ಣರಾಗಬೇಕು. ಆಬಳಿಕ ಅವಕಾಶ ದೊರೆಯಲಿದೆ. ಗ್ರಾಮೀಣ ಪ್ರದೇಶದ ಬಡ, ಆರ್ಥಿಕವಾಗಿ ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುವ ಮೂಲಕ ಹೊಸ ಕ್ರಾಂತಿಕಾರಕ ಹೆಜ್ಜೆ ಮುಂದಿಟ್ಟಿದೆ. ಗ್ರಾಮೀಣ ಪ್ರದೇಶದವರು ಐಎಎಸ್ ಆಗಿ ಉನ್ನತ ಹುದ್ದೆಗೇರಬೇಕೆಂಬ ಹೆಬ್ಬಯಕೆ ನನ್ನದು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಬಡ, ಪ್ರತಿಭಾವಂತ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಇದು ಆಗಬಾರದು. ಹಣವಿಲ್ಲ ಎಂಬ ಒಂದೇ ಕಾರಣಕ್ಕೆ ಅವಕಾಶ ಕಳೆದುಕೊಳ್ಳಬಾರದು ಎಂಬ ಸದುದ್ದೇಶ ನನ್ನದು. ಹಾಗಾಗಿ, ಅವರಿಗೆ ಉಚಿತವಾಗಿ ಕೋಚಿಂಗ್ ನೀಡಲಾಗುವುದು. ಮಧ್ಯ ಕರ್ನಾಟಕದಲ್ಲಿ ಇದು ಮೊದಲ ಪ್ರಯತ್ನ ಎಂದು ತಿಳಿಸಿದರು.
ನುಡಿದಂತೆ ನಡೆದ ಜಿಬಿವಿ:
ಇನ್ನು ಜಿ. ಬಿ. ವಿನಯ್ ಕುಮಾರ್ ಅವರು ಕಳೆದ ಲೋಕಸಭೆ ಚುನಾವಣೆ ವೇಳೆ ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿದ್ದರು. ಅಭೂತಪೂರ್ವ ಯಶಸ್ಸು ದೊರಕಿತ್ತು. ಜನರು ಮನೆಮಗನಂತೆ ಬರಮಾಡಿಕೊಂಡಿದ್ದರು. ಪ್ರೀತಿ, ವಿಶ್ವಾಸ ತೋರಿದ್ದರು. ಆದ್ರೆ, ಚುನಾವಣೆಯಲ್ಲಿ ಸೋತರು. ಚುನಾವಣೆಯಲ್ಲಿ ಗೆಲ್ಲದಿದ್ದರೂ ತಾನು ನೀಡಿದ ಭರವಸೆಯಂತೆ ಜಿಲ್ಲೆಯ 80 ವಿದ್ಯಾರ್ಥಿಗಳಿಗೆ ಉಚಿತವಾಗಿ ಐಎಎಸ್ ಕೋಚಿಂಗ್ ನೀಡಲು ನಿರ್ಧರಿಸಲಾಗಿದೆ. ಇಂಗ್ಲೀಷ್ ಭಾಷೆಯಲ್ಲಿ ತರಗತಿ ನಡೆಸಲಾಗುತ್ತದೆ ಎಂದು ಜಿ. ಬಿ. ವಿನಯ್ ಕುಮಾರ್ ಹೇಳಿದರು.
ಇಂಗ್ಲೀಷ್ ಬಾರದಿದ್ದರೆ….?
ಇನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರತಿಭಾವಂತ, ಬಡವರಾಗಿದ್ದು, ಇಂಗ್ಲೀಷ್ ಎಲ್ಲರಿಗೂ ಬರುವುದಿಲ್ಲ. ಹಾಗಾಗಿ, ವಿಶೇಷವಾಗಿ ಇಂಗ್ಲೀಷ್ ಭಾಷೆ ಕಲಿಯುವ ಕ್ಲಾಸ್ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಎಲ್ಲಾ ವರ್ಗದವರಿಗೂ ಆದ್ಯತೆ:
ಲೋಕಸಭೆ ಚುನಾವಣೆಗೆ ಮುನ್ನ ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಂಡಾಗ ದಾವಣಗೆರೆಯಲ್ಲಿ ಇನ್ಸೈಟ್ಸ್ ಸಂಸ್ಥೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದೆ. ಅದರಂತೆ ಆರಂಭ ಮಾಡಲಾಗುತ್ತಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದ 10 ವಿದ್ಯಾರ್ಥಿಗಳಂತೆ ಒಟ್ಟು ಜಿಲ್ಲೆಯ 80 ವಿದ್ಯಾರ್ಥಿಗಳಿಗೆ ಐಎಎಸ್ ಕೋಚಿಂಗ್ ನೀಡಲಾಗುವುದು. ಇದಕ್ಕಾಗಿ ಸ್ಕಾಲರ್ ಶಿಪ್ ಪರೀಕ್ಷೆ ನಡೆಸಿ ಆಯ್ಕೆ ನಡೆಸಲಾಗುವುದು. ಪಾಸ್ ಆದ ಬಡ, ಮಧ್ಯಮ, ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜಾತಿವರ್ಗದವರಿಗೆ ನೀಡಲಾಗುತ್ತದೆ. ಯಾವುದೇ ಶುಲ್ಕ ಪಡೆಯಲಾಗುವುದಿಲ್ಲ ಎಂದು ವಿವರಿಸಿದರು.
ಸೆಪ್ಟಂಬರ್ 30ರಿಂದ ಹೈಬ್ರೀಡ್ ಮಾದರಿಯಲ್ಲಿ ಐಎಎಸ್ ಕೋಚಿಂಗ್ ನೀಡಲಾಗುತ್ತದೆ. ವಿ40 ಯುವತಿಯರು, 40 ಯುವಕರಿಗೆ ಈ ತರಬೇತಿ ಮೊದಲ ಹಂತದಲ್ಲಿ ಉಚಿತವಾಗಿ ಕೋಚಿಂಗ್ ನೀಡಲಾಗುತ್ತದೆ. ಜಾತ್ಯಾತೀತವಾಗಿ ಆಯ್ಕೆ ನಡೆಯಲಿದೆ. ಬಿಪಿಎಲ್ ಕಾರ್ಡ್, ಮನೆ ಪರಿಸ್ಥಿತಿ, ಪಡೆದಿರುವ ಅಂಕ ಸೇರಿದಂತೆ ಎಲ್ಲಾ ಮಾನದಂಡಗಳನ್ನು ಗಮನಿಸಿ ವಿದ್ಯಾರ್ಥಿಗಳನ್ನು ಐಎಎಸ್ ಕೋಚಿಂಗ್ ಗೆ ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಮಾಜಮುಖಿ ಕಾರ್ಯ:
ಕೇವಲ ವ್ಯಾಪಾರೀಕರಣ ದೃಷ್ಟಿಯಿಂದ ಇನ್ಸೈಟ್ಸ್ ದಾವಣಗೆರೆ ಸಂಸ್ಥೆ ಕಾರ್ಯಾರಂಭ ಮಾಡಿಲ್ಲ. ಸಮಾಜಮುಖಿಯಾಗಿ ಅವಕಾಶ ಕಲ್ಪಿಸಿ ಯುವಪೀಳಿಗೆ ಜೀವನ ರೂಪಿಸಿಕೊಳ್ಳುವಂತ ಮಾರ್ಗ ಸೃಷ್ಟಿಸಲಾಗುವುದು ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ದಾವಣಗೆರೆ ಐಎಎಸ್ ಹಬ್ ಆಗಬೇಕು:
ದಾವಣಗೆರೆ ಮಧ್ಯಕರ್ನಾಟಕದ ಕೇಂದ್ರ ಬಿಂದು. ಈ ಭಾಗಗಳಿಂದ ಧಾರವಾಡಕ್ಕೆ ಇತ್ತೀಚಿನ ದಿನಗಳಲ್ಲಿ ಐಎಎಸ್ ಕೋಚಿಂಗ್ ಗೆ ಹೋಗುತ್ತಿದ್ದಾರೆ. ಆದಕಾರಣ ಇಲ್ಲಿಯೇ ಸೌಲಭ್ಯ ನೀಡಿದರೆ ಅನುಕೂಲವಾಗುತ್ತದೆ. ದಾವಣಗೆರೆಯನ್ನು ಐಎಎಸ್ ಹಬ್ ಮಾಡಬೇಕೆಂಬ ಗುರಿ ಹೊಂದಿದ್ದೇನೆ ಎಂದು ಜಿ. ಬಿ. ವಿನಯ್ ಕುಮಾರ್ ಹೇಳುತ್ತಾರೆ.
ಜಿ. ಬಿ. ವಿನಯ್ ಕುಮಾರ್ ಇನ್ಸೈಟ್ಸ್ ಸಂಸ್ಥೆ ಮೂಲಕ ಇಂಥದ್ದೊಂದು ದೊಡ್ಡ ಯೋಜನೆ ಘೋಷಣೆ ಮಾಡಿರುವುದರಿಂದ ಜಿಲ್ಲೆಯ ಗ್ರಾಮೀಣ ಭಾಗದ ಜನರ ಕನಸು ಚಿಗುರೊಡೆಯುವಂತೆ ಮಾಡಿದೆ. ಮಾತ್ರವಲ್ಲ, ತಮ್ಮ ಮಕ್ಕಳು ಐಎಎಸ್, ಐಪಿಎಸ್ ಆಗಿ ಗ್ರಾಮ ಮಾತ್ರವಲ್ಲ, ತಾಲೂಕು, ಜಿಲ್ಲೆ, ಇಡೀ ದೇಶಕ್ಕೆ ಹೆಸರು ತರುವಂತವರಾಗುತ್ತಾರೆ ಎಂಬ ನಂಬಿಕೆ ಬರುವಂತೆ ಮಾಡಿದ್ದಾರೆ. ವಿನಯ್ ಕುಮಾರ್ ಚುನಾವಣೆ ವೇಳೆ ಆಡಿದ್ದ ಮಾತಿನಂತೆ ನಡೆದುಕೊಂಡಿದ್ದಾರೆ. ಈ ಮೂಲಕ ವಿನಯ್ ಕುಮಾರ್ ನುಡಿದಂತೆ ನಡೆದಿದ್ದು, ಇಂಥ ಯುವ ನಾಯಕರ ಅವಶ್ಯಕತೆ ಇದೆ ಎಂಬ ಮಾತು ದಿನಕಳೆದಂತೆ ಬಲವಾಗಿ ಕೇಳಿ ಬರುತ್ತಿದೆ.