ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನಾ ಮಾತನಾಡಲ್ಲ.. ನಾ ಮಾತನಾಡಲ್ಲ: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್!

On: August 7, 2025 2:43 PM
Follow Us:
Channagiri
---Advertisement---

SUDDIKSHANA KANNADA NEWS/ DAVANAGERE/DATE:07_08_2025

ದಾವಣಗೆರೆ: ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಮೂವರು ಶಾಸಕರು ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿದರೂ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ರಾಜ್ಯ ಕಾಂಗ್ರೆಸ್ ಬೆಳವಣಿಗೆ ಕುರಿತು ಮಾತನಾಡಲು ನಿರಾಕರಿಸಿದರು.

READ ALSO THIS STORY: ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ: ರೈತರಿಗೆ ಸತ್ಯ ತಿಳಿಸಲು ಕುಂದೂರಿನಲ್ಲಿ ಆ. 9ಕ್ಕೆ ರೈತರ ಬೃಹತ್ ಸಭೆ

ಪತ್ರಿಕಾಗೋಷ್ಠಿಯಲ್ಲಿದ್ದ ಶಿವಗಂಗಾ ಬಸವರಾಜ್ ಅವರಿಗೆ ಸಿಎಂ ಕುರಿತಂತೆ ಪ್ರಶ್ನೆ ಕೇಳುತ್ತಿದ್ದಂತೆ ನಾನು ಏನು ಮಾತನಾಡುವುದಿಲ್ಲ. ಈಗೇನೂ ಹೇಳುವುದಿಲ್ಲ ಎಂದಷ್ಟೇ ಹೇಳಿದರು.

ಆ ಬಳಿಕ ಸಿಎಂ ಸಿದ್ದರಾಮಯ್ಯರ ಜೊತೆಗಿನ ದಾವಣಗೆರೆ ಜಿಲ್ಲೆಯ ಶಾಸಕರ ಸಭೆ ಖುಷಿ ಕೊಟ್ಟಿದೆಯಾ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಶಿವಗಂಗಾ ಬಸವರಾಜ್ ಅವರು, ಕಾಂಗ್ರೆಸ್ ಹಿರಿಯರು ಹಾಗೂ ಹೊನ್ನಾಳಿ ಶಾಸಕರೂ ಆದ ಶಾಂತನಗೌಡ ಅವರಿಗೆ ಖುಷಿ ಕೊಟ್ಟಿದೆ ಎಂದ ಮೇಲೆ ನಮಗೂ ಖುಷಿ ಸಿಕ್ಕಂತೆ ಅಲ್ವಾ ಎಂದು ಮರು ಪ್ರಶ್ನೆ ಹಾಕಿದರು.

ಡಿಸಿಎಂ ಡಿ. ಕೆ. ಶಿವಕುಮಾರ್ ಅಕ್ಟೋಬರ್ ಇಲ್ಲವೇ ಡಿಸೆಂಬರ್ ತಿಂಗಳೊಳಗೆ ಸಿಎಂ ಆಗುತ್ತಾರೆ ಎಂದು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ಜಾಣ್ಮೆಯ ಉತ್ತರ
ನೀಡಿದರು.

ಎರಡೂವರೆ ವರ್ಷ ಅಧಿಕಾರ ಒಪ್ಪಂದ ಹಂಚಿಕೆಯಂತೆ ಡಿ. ಕೆ. ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ. ಆಗಿಯೇ ಆಗುತ್ತಾರೆ, ನೋಡ್ತಾ ಇರಿ ಎಂದು ಅನೇಕ ಬಾರಿ ಹೇಳಿದ್ದ ಶಿವಗಂಗಾ ಬಸವರಾಜ್ ಈ ವಿಚಾರ ಕುರಿತಂತೆ ಹೆಚ್ಚು ಪ್ರತ್ರಿಕ್ರಿಯೆ ನೀಡಲಿಲ್ಲ. ಇದು ಅಚ್ಚರಿಗೂ ಕಾರಣವಾಯಿತು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment