SUDDIKSHANA KANNADA NEWS/ DAVANAGERE/ DATE-26-06-2025
ದಾವಣಗೆರೆ (Davanagere): ಸಾಧು ಸಮಾಜದ ಹುಡುಗನ ಬೆಳವಣಿಗೆ ಸಹಿಸದೇ ಅಪಪ್ರಚಾರ ನಡೆಸಲಾಗುತ್ತದೆ. ಮುಂಬರುವ ಚುನಾವಣೆಯಲ್ಲಿ ಸಮಾಜದ ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ರೇಣುಕಾಚಾರ್ಯ ವಿರುದ್ಧ ಗುಡುಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಗೆಲ್ಲಿಸಿರುವ ಮತದಾರರು ಮೂರ್ಖರಲ್ಲ, ನೀವು ಮೂರ್ಖರು. ನಮ್ಮ ಸಮಾಜದ ಏಳಿಗೆ ಸಹಿಸುತ್ತಿಲ್ಲ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನಮ್ಮ ಸಮಾಜದವರಿಗೆ ರೇಣುಕಾಚಾರ್ಯ ನಾಟಕ ಗೊತ್ತಾಗುತ್ತಿಲ್ಲ. ನಮ್ಮ ಸಮಾಜದ ಹುಡುಗರನ್ನೇ ಬಳಸಿಕೊಂಡು ನನ್ನ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿಯನ್ನೂ ಓದಿ: ಎಂ. ಪಿ. ರೇಣುಕಾಚಾರ್ಯಗೆ ಬಸವರಾಜ್ ಶಿವಗಂಗಾ ಪಂಥಾಹ್ವಾನ: ನಾನು ಪ್ರಮಾಣಕ್ಕೆ ಸಿದ್ಧ, ನೀನೂ ಸಿದ್ಧನಾ?
ಶಾಂತನಗೌಡರ ಜಾಗದಲ್ಲಿ ನಾನಿದ್ದರೆ ಏನೂ ಎಂದು ನಾನು ತೋರಿಸುತ್ತಿದ್ದೆ. ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೀಯಾ. ಸಮಾಜ ನೋಡೇ ನೋಡುತ್ತೆ. ಸಮಾಜ ತಕ್ಕ ಪಾಠ ಕಲಿಸುತ್ತದೆ. ಲಾಟರಿ ಶಾಸಕ ಎಂದಿದ್ದೀಯಾ. ಕೊರೊನಾ ಸಂದರ್ಭದಲ್ಲಿ ಏನೇನೂ ಕೆಲಸ ಮಾಡಿದ್ದೇನೆ ಎಂಬುದು ಮಾಧ್ಯಮಗಳಲ್ಲಿ ಬಂದಿದೆ. ಸ್ವಂತ ದುಡ್ಡಲ್ಲಿ ಟೊಮೊಟೊ ಖರೀದಿ ಮಾಡಿ ರೈತರಿಗೆ ಉಚಿತವಾಗಿ ಹಂಚಿದ್ದೇನೆ. ಮೂರರಿಂದ ನಾಲ್ಕು ಆಂಬುಲೆನ್ಸ್ ಉಚಿತವಾಗಿ ನೀಡಿದ್ದೇನೆ. ದೇವರಹಳ್ಳಿ ಕೆರೆಗೆ ಸ್ವಂತ ಹಣದಲ್ಲಿ ನೀರು ತುಂಬಿಸಿದ್ದೇನೆ. ಆಗ ಯಾರು ಶಾಸಕರಿದ್ದರು? ಕರೆಂಟ್ ಕಟ್ ಮಾಡಿಸಿದ್ದರು. ಜನರೇಟರ್ ಇಟ್ಟು ನೀರು ತುಂಬಿಸಲು ಮುಂದಾಗ ಕರೆಂಟ್ ಕೊಟ್ಟು ಸಹಕಾರ ಕೊಟ್ಟರು. ನೀನು ಮಾತನಾಡಿದ ರೀತಿ ಗೆಲ್ಲಿಸಿಲ್ಲ ಎಂದು ತಿರುಗೇಟು ನೀಡಿದರು.
ರೇಣುಕಾಚಾರ್ಯ ಮಾಜಿ ಸಚಿವರು. ಸಮಾಜದಲ್ಲಿ ಸ್ವಾಮಿ, ಗುರುಗಳು ಎಂದು ಪಾದಪೂಜೆ ಮಾಡಿದ್ದೇವೆ. ರಾಜಕೀಯ ತೀಟೆಗೋಸ್ಕರ ಏನೋನೋ ಮಾತನಾಡಿದರೆ ಸುಮ್ಮನೆ ಕೂರಲ್ಲ ಆಗದು. ಟಿವಿಗಳನ್ನು ನೋಡಿದಾಕ್ಷಣ ಟೆಂಪ್ಟ್ ಆಗ್ತೀರಾ.
ಯಾವ ರೀತಿ ಮಾತನಾಡಿದ್ದೀರಾ ಎಂಬುದು ಎಲ್ಲರಿಗೂ ಗೊತ್ತು. ಸಮಾಧಾನವಾಗಿ ಮಾತನಾಡಿದ್ದು ಇದ್ದರೆ ತಿಳಿಸಿ ಎಂದು ಸವಾಲು ಹಾಕಿದರು.