SUDDIKSHANA KANNADA NEWS/ DAVANAGERE/ DATE:20-08-2023
ದಾವಣಗೆರೆ: ಅಮೆರಿಕಾದಲ್ಲಿ ಮೃತಪಟ್ಟ ಯೋಗೇಶ್ ಹೊನ್ನಾಳ ಕುಟುಂಬ (Family)ದವರ ಜೊತೆ ಮಾತನಾಡಿದ್ದೇನೆ. ಅವರ ಸಂಬಂಧಿಕರು ಅಮೆರಿಕಾದಲ್ಲಿ ನಡೆದ ಘಟನಾ ಸ್ಥಳದಿಂದ 1200 ಕಿಲೋಮೀಟರ್ ದೂರದಲ್ಲಿದ್ದು, ಅವರು ಸ್ಥಳಕ್ಕೆ ಹೋಗಿ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆಂದು ಕುಟುಂಬ(Family)ದವರು ಹೇಳಿದ್ದಾರೆ. ಇನ್ನು ಯಾವ ನಿರ್ಧಾರವನ್ನೂ ಕುಟುಂಬ(Family)ದವರು ಮಾಡಿಲ್ಲ. ಚರ್ಚೆ ನಡೆಸಿ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೃತದೇಹದ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನು ಯಾವುದೇ ಮಾತುಕತೆ ನಡೆದಿಲ್ಲ. ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ. ಇಂಥ ಘಟನೆ ನಡೆದಾಗ
ಮಾಹಿತಿ ಕೇಳುವುದು ಕೊಡುವುದು ಸಾಮಾನ್ಯ ಪ್ರಕ್ರಿಯೆ. ಹಾಗಾಗಿ ಜಿಲ್ಲಾಧಿಕಾರಿಗಳು ಅಮೆರಿಕಾದ ರಾಯಭಾರಿಗಳ ಜೊತೆ ವ್ಯವಹರಿಸಿದ್ದಾರೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ:
SUSPECT DEATH BIG EXCLUSIVE STORY: ಸಾವಿನ ಸುತ್ತ ಅನುಮಾನದ ಹುತ್ತ: ಅಮೆರಿಕಾದಲ್ಲಿ ಮೂವರು ಸಾವಿನ ಸುತ್ತ ಗಿರಕಿ ಹೊಡೆಯುತ್ತಿರುವ ಮೂರು ಕಾರಣಗಳು…!
ಕುಟುಂಬ(Family)ದ ಸದಸ್ಯರು ಕುಳಿತು ಮಾತನಾಡಿ ನಿರ್ಧಾರ ತಿಳಿಸುತ್ತೇವೆ ಎಂದಿದ್ದು, ಅಲ್ಲಿಯವರೆಗೆ ಏನನ್ನೂ ಹೇಳಲು ಆಗದು. ಸಾವನ್ನಪ್ಪಿ ಎರಡರಿಂದ ಮೂರು ದಿನಗಳು ಆದ ಮೇಲೆ ವಿಚಾರ ಗೊತ್ತಾಗಿದೆ. ಅಲ್ಲಿನ ಕಾನೂನು, ನಿಯಮಗಳ ಪ್ರಕಾರ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಸೂಸೈಡ್ ಅಥವಾ ಬೇರೆ ಕಾರಣ ಇದೆಯೋ ಎಂಬ ಬಗ್ಗೆ ಅಮೆರಿಕಾ ಪೊಲೀಸರು ತನಿಖೆ ನಡೆಸಬೇಕು. ಆ ಬಳಿಕವಷ್ಟೇ ಸ್ಪಷ್ಟತೆ ಗೊತ್ತಾಗಲಿದೆ ಎಂದರು.
ಇನ್ನು ಬಿಜೆಪಿ – ಜೆಡಿಎಸ್ ನ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೋ ಇಲ್ಲವೋ ಎಂಬ ಬಗ್ಗೆ ನನಗೇನೂ ಗೊತ್ತಿಲ್ಲ. ನನ್ನ ಹತ್ತಿರ ಈ ವಿಚಾರ ಯಾರೂ ಮಾತನಾಡಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರನ್ನೇ ಕೇಳಿ ಎಂದ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ದಾವಣಗೆರೆ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಸಂಬಂಧ ಮುಂದಿನ ವಾರ ಗೊತ್ತಾಗುತ್ತೆ. ಮಳೆ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.