SUDDIKSHANA KANNADA NEWS/ DAVANAGERE/ DATE_11-07_2025
ದಾವಣಗೆರೆ: ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ವಿಲಕ್ಷಣ ಘಟನೆ ನಡೆದಿದ್ದು, ಪತಿ ಮತ್ತು ಪತ್ನಿ ನಡುವಿನ ಜಗಳ ತಾರಕಕ್ಕೇರಿದೆ. ಈ ವೇಳೆ ಪತಿಯು ಪತ್ನಿಯ ಮೂಗನ್ನು ಕಚ್ಚಿದ್ದು, ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
READ ALSO THIS STORY: ಭದ್ರಾ ಡ್ಯಾಂ (Bhadra Dam)ನಿಂದ ನೀರು ಬಿಡುಗಡೆ: ಜಲಾಶಯಕ್ಕೆ ಸಾರ್ವಜನಿಕರಿಗೆ ನಿಷೇಧ!
ಘಟನೆ ಹಿನ್ನೆಲೆ ಏನು..?
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದ ವಿಜಯ್ ಮತ್ತು ವಿದ್ಯಾ ಕಳೆದ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಹಣ ಪಡೆದು ವಾಪಸ್ ನೀಡದ ಹಾಗೂ ಕೈ ಸಾಲ ಮರುಪಾವತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಪತ್ನಿ ಮತ್ತು ಪತಿ ನಡುವೆ ಜಗಳ ಆಗುತಿತ್ತು. ಮದ್ಯ ವ್ಯಸನಿಯಾಗಿದ್ದ ವಿಜಯ್ ಮತ್ತು ವಿದ್ಯಾಳ ನಡುವೆ ಗಲಾಟೆ ಆಗಿದೆ. ಈ ಗಲಾಟೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ.
ಈ ವೇಳೆ ಸಿಟ್ಟಿಗೆದ್ದ ವಿಜಯ್ ಪತ್ನಿ ವಿದ್ಯಾಳ ಮೂಗಿಗೆ ರಕ್ತ ಸುರಿಯಂತೆ ಕಚ್ಚಿ ಗಾಯಗೊಳಿಸಿದ್ದಾನೆ. ಕೂಡಲೇ ಚನ್ನಗಿರಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಕರೆದುಕೊಂಡು
ಹೋಲಾಗಿದೆ. ಇನ್ನು ಪತಿ ವಿರುದ್ಧವೇ ವಿದ್ಯಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಮೂರು ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ.
ಶಿವಮೊಗ್ಗ ಸರ್ಕಾರಿ ಆಸ್ಪತ್ರೆ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾ ಪೊಲೀಸರಿಗೆ ನೀಡಿರುವ ದೂರನ್ನು ಚನ್ನಗಿರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.