Home ಉದ್ಯೋಗ ವಾರ್ತೆ HPCLನಲ್ಲಿ ಭರ್ಜರಿ ಉದ್ಯೋಗಾವಕಾಶ:ಫ್ರೆಶರ್ಸ್ ಹಾಗೂ ಅನುಭವಿಗಳಿಗೆ ಇಲ್ಲಿದೆ ಗೋಲ್ಡನ್ ಚಾನ್ಸ್, ತಿಂಗಳಿಗೆ ₹2.8 ಲಕ್ಷದವರೆಗೆ ಸಂಬಳ!
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

HPCLನಲ್ಲಿ ಭರ್ಜರಿ ಉದ್ಯೋಗಾವಕಾಶ:ಫ್ರೆಶರ್ಸ್ ಹಾಗೂ ಅನುಭವಿಗಳಿಗೆ ಇಲ್ಲಿದೆ ಗೋಲ್ಡನ್ ಚಾನ್ಸ್, ತಿಂಗಳಿಗೆ ₹2.8 ಲಕ್ಷದವರೆಗೆ ಸಂಬಳ!

Share
HPCL
Share

ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸುವರ್ಣಾವಕಾಶ.

ಭಾರತ ಸರ್ಕಾರದ ಪ್ರಮುಖ ಮಹಾರತ್ನ ಸಾರ್ವಜನಿಕ ವಲಯದ ಉದ್ಯಮವಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಫ್ರೆಶರ್ಸ್ ಹಾಗೂ ಅನುಭವಿ ವೃತ್ತಿಪರರಿಗಾಗಿ ವಿವಿಧ ತಾಂತ್ರಿಕ ಮತ್ತು ವ್ಯವಸ್ಥಾಪಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.

ಜೂನಿಯರ್ ಎಕ್ಸಿಕ್ಯೂಟಿವ್, ಅಸಿಸ್ಟೆಂಟ್ ಮ್ಯಾನೇಜರ್ ಸೇರಿದಂತೆ ಒಟ್ಟು 116 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ: ಜುಲೈ 01, 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 20, 2026

ಹುದ್ದೆಗಳ ವಿವರ ಮತ್ತು ವೇತನ: ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅನುಭವಿಗಳಿಗಷ್ಟೇ ಅಲ್ಲದೆ ಫ್ರೆಶರ್ಸ್‌ಗಳಿಗೂ ಅವಕಾಶ ನೀಡಲಾಗಿದೆ.

ಫ್ರೆಶರ್ಸ್ ಹುದ್ದೆಗಳು: ಜೂನಿಯರ್ ಎಕ್ಸಿಕ್ಯೂಟಿವ್ (ಕೆಮಿಕಲ್) – 37 ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ (ಫೈರ್ & ಸೇಫ್ಟಿ) – 17 ಹುದ್ದೆಗಳಿದ್ದು, ಇವುಗಳಿಗೆ ಮಾಸಿಕ ₹30,000 ರಿಂದ ₹1,20,000 ವರೆಗೆ ವೇತನ ಸಿಗಲಿದೆ.

ಅನುಭವಿ ವೃತ್ತಿಪರರ ಹುದ್ದೆಗಳು: ಸೀನಿಯರ್ ಆಫೀಸರ್ (ಸೇಲ್ಸ್), ಅಸಿಸ್ಟೆಂಟ್ ಮ್ಯಾನೇಜರ್ (ಪ್ರಾಜೆಕ್ಟ್ಸ್), ಮ್ಯಾನೇಜರ್ ಸೇರಿದಂತೆ ಹಲವು ಹುದ್ದೆಗಳಿದ್ದು, ಇವುಗಳಿಗೆ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಮಾಸಿಕ ₹60,000 ರಿಂದ ಗರಿಷ್ಠ ₹2,80,000 ರವರೆಗೆ ಆಕರ್ಷಕ ವೇತನ ಶ್ರೇಣಿ ಇರಲಿದೆ.

ಶೈಕ್ಷಣಿಕ ಅರ್ಹತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ (B.E / B.Tech), ಎಂಪಿಎ (MBA/PGDM), ಅಥವಾ ಅರ್ಥಶಾಸ್ತ್ರದಲ್ಲಿ (Economics) ಪದವಿ ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಚ್‌ಪಿಸಿಎಲ್‌ನ ಅಧಿಕೃತ ಜಾಲತಾಣವಾದ hindustanpetroleum.com ಗೆ ಭೇಟಿ ನೀಡಿ, ‘Careers’ ವಿಭಾಗದಲ್ಲಿ ಆನ್‌ಲೈನ್ ಮೂಲಕ ಜುಲೈ 20ರ ಒಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles