SUDDIKSHANA KANNADA NEWS/ DAVANAGERE/DATE:13_08_2025
ಹೊಳಲ್ಕೆರೆ: ತಾಲೂಕಿನ ಸ್ನೇಹ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳು ಪರೀಕ್ಷೆ ಎದುರಿಸುವುದು ಹೇಗೆ? ಶಿಕ್ಷಣದ ಕುರಿತಂತೆ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ: ಸ್ವಯಂ ಉದ್ಯೋಗ, ನೇರಸಾಲ, ಜಮೀನು ಖರೀದಿ ಸೇರಿ ವಿವಿಧ ನಿಗಮಗಳಲ್ಲಿ ಅರ್ಜಿ ಆಹ್ವಾನ: ಸೌಲಭ್ಯಕ್ಕೆ ಬೇಕು ಈ ದಾಖಲೆಗಳು!
ಪ್ರೇರಣ ಗುರು ಶಿಕ್ಷಣ ತಜ್ಞರು, ವಿಕಸನ ತರಬೇತುದಾರ ಆರ್. ಎ. ಚೇತನ್ ರಾವ್ ಮಾತನಾಡಿ, ಪರೀಕ್ಷೆ ಒಂದು ಅನಿವಾರ್ಯ ಪರಿಸ್ಥಿತಿ. ಶಿಕ್ಷಕರು, ಮಕ್ಕಳು ಪರೀಕ್ಷೆಗೆ ಹೇಗೆ ಸಿದ್ಧರಾಗಬೇಕು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಪರೀಕ್ಷೆ ಎಂದರೆ ನಮ್ಮ ಜ್ಞಾನ, ಕುಶಲತೆ. ಪರೀಕ್ಷೆ ಎಂದು ಹೆದರಿ ಕುಳಿತುಕೊಳ್ಳದೇ ಯಶಸ್ಸಿನ ಕಡೆಗೆ ಕರೆದೊಯ್ಯುವ ಅನುಭವ. ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕೇ ಹೊರತು ಕಬ್ಬಿಣದ ಕಡಲೆ ಎಂದುಕೊಳ್ಳಬಾರದು ಎಂದು ಹೇಳಿದರು.
‘ದಡ್ಡ ವಿದ್ಯಾರ್ಥಿ ಹುಟ್ಟಿಯೇ ಇಲ್ಲ’. ನಿಯಮ, ಸರಿ-ಸಮಯ ಪಾಲಿಸಿದರೆ ಯಾರು ಬೇಕಾದರೂ ಓದಬಹುದು. ಅಂಕ ಗಳಿಸಲೂ ಬಹುದು. ಓದುವ ಉತ್ಸಾಹ ಅಧ್ಯಯನ ಸೂತ್ರಗಳು ಏಕೆ ಓದಬೇಕು? ಏನು? ಎಷ್ಟು? ಹೇಗೆ ಬರೆಯಬೇಕು, ಏಕಾಗ್ರತೆ ನೆನಪು ನಿರಂತರ ಶ್ರಮ ಮೆದುಳಿನ ನಿರ್ವಹಣಾ ತಂತ್ರ, ಒತ್ತಡ, ಸಮಯ, ಆರೋಗ್ಯ ಸೇರಿದಂತೆ ಏನೆಲ್ಲಾ ನಿರ್ವಹಣೆ ಮಾಡಬೇಕೆಂಬುದನ್ನು ಸರಳವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಜೆ. ಎಸ್. ಮಂಜುನಾಥ್, ಕಾರ್ಯದರ್ಶಿಗಳಾದ ಜೆ. ಎಸ್. ವಸಂತ್, ಸಲಹೆಗಾರರಾದ ಛಾಯಾ ಮಂಜುನಾಥ್, ಪ್ರಾಂಶುಪಾಲರಾದ ವೇಣುಗೋಪಾಲ್ ಜಿ. ಸಿ. ಹಾಗೂ ಶಿಕ್ಷಕರು,
ಮಕ್ಕಳು ಹಾಜರಿದ್ದರು.