ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಪ್ರಿಯಾಂಕ್ ಖರ್ಗೆ ಎಷ್ಟು ರೌಡಿ ಅಡ್ಡಗಳಿಗೆ ಮಾಲೀಕರು? ಸಮಾಜಘಾತುಕರ ಜೊತೆಗಿನ ತಮ್ಮ ನಂಟು ಎಂಥದ್ದು?

On: July 14, 2025 7:20 PM
Follow Us:
ಪ್ರಿಯಾಂಕ್ ಖರ್ಗೆ
---Advertisement---

SUDDIKSHANA KANNADA NEWS/ DAVANAGERE/ DATE:14_07_2025

ಬೆಂಗಳೂರು: ಲೂಟಿಕೋರ ಕಾಂಗ್ರೆಸ್ ಸರ್ಕಾರದ ಕಪಟ ಕಪಾಟಿನಿಂದ ಒಂದೊಂದೇ ಅಸ್ಥಿಪಂಜರಗಳು ಉರುಳುತ್ತಿವೆ. ಸಚಿವ ಪ್ರಿಯಾಂಕ್ ಖರ್ಗೆ ಅವರೇ ಎಷ್ಟು ರೌಡಿ ಅಡ್ಡಗಳಿಗೆ ನೀವು ಮಾಲೀಕರು ಎಂದು ಬಿಜೆಪಿ ಕೆಂಡಕಾರಿದೆ.

ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮಾಜಘಾತುಕರು, ರೌಡಿಶೀಟರ್‌ಗಳನ್ನು ಹಿಂಬಾಲಕರನ್ನಾಗಿಸಿಕೊಂಡು ರಾಜಕೀಯವನ್ನು ಅಪರಾಧಿಕರಿಸುತ್ತಿರುವುದಕ್ಕೆ ಅವರ ಆಪ್ತ ಲಿಂಗರಾಜ ಕಣ್ಣಿ, ಮಾದಕದ್ರವ್ಯ ಅಕ್ರಮ ಸಾಗಣೆಯಡಿ ಸಿಕ್ಕಿಬಿದ್ದಿರುವುದೇ ಸಾಕ್ಷಿ. ನಿಷೇಧಿತ 120 ಕೊಡೆನೈನ್ ಸಿರಪ್‌ನೊಂದಿಗೆ ಮಹಾರಾಷ್ಟ್ರದ ಥಾಣೆಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದೆ.

ಗುತ್ತಿಗೆದಾರ ಸಚಿನ್‌ ಪಾಂಚಾಳ ಬಲಿಪಡೆದ ರಾಜು ಕಪನೂರು ಮತ್ತು ಗ್ಯಾಂಗ್‌, ಅಕ್ರಮದಲ್ಲಿ ಸಿಕ್ಕಿಬಿದ್ದ ಲಿಂಗರಾಜ ಕಣ್ಣಿ, ರೌಡಿ ಅಡ್ಡಗಳ ಹೆಡ್‌ಮಾಸ್ಟರ್‌ ಪ್ರಿಯಾಂಕ್ ಖರ್ಗೆ ಗರಡಿಯಲ್ಲಿ ಪಳಗಿದ ಪಾಪದ ಕೂಸುಗಳೇ.!? ಎಂದು
ಪ್ರಶ್ನಿಸಿದೆ.

ಖರ್ಗೆ ಅವರೇ, ಎಷ್ಟು ರೌಡಿ ಅಡ್ಡಗಳಿಗೆ ತಾವು ಮಾಲೀಕರಾಗಿದ್ದೀರಿ.? ಸಮಾಜಘಾತುಕರ ಜೊತೆಗಿನ ತಮ್ಮ ನಂಟು ಎಂಥದ್ದು? ಹಾಗೂ ಡ್ರಗ್‌ ಮುಕ್ತ ಕಲ್ಬುರ್ಗಿ ನಿರ್ಮಿಸುವ ಕನಸು ಎಲ್ಲಿಗೆ ಬಂದಿದೆ ತಿಳಿಸುವಿರಾ? ಎಂದಿದೆ.

ಒಂದು ಕಡೆ ಕಲಬುರಗಿಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದರೆ, ಇನ್ನೊಂದು ಕಡೆ ಮಿಸ್ಟರ್‌ ಖರ್ಗೆ ಅವರ ಆಪ್ತರು ಮಾತ್ರ ಯುವಕರು ಡ್ರಗ್ ಚಟಕ್ಕೆ ದಾಸರಾಗುವಂತೆ ಮಾಡುತ್ತಿದ್ದಾರೆಯೇ? ನಿಮ್ಮ ಆಪ್ತ ನಡೆಸುತ್ತಿರುವ ಡ್ರಗ್‌ ದಂಧೆಯಲ್ಲಿ ನಿಮ್ಮ ಪಾಲೆಷ್ಟು? ಎಂದು ಪ್ರಶ್ನಿಸಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment