ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹೊನ್ನಾಳಿ ಕಾಂಗ್ರೆಸ್ -ಬಿಜೆಪಿ ಗೆಲುವಿನ ಹಾವು ಏಣಿ ಆಟದ ಕದನ ಕಣ

On: April 28, 2023 11:43 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:28-04-2023

ದಾವಣಗೆರೆ (DAVANAGERE): ಹೊನ್ನಾಳಿ (HONNALI)- ನ್ಯಾಮತಿ ವಿಧಾನಸಭಾ ಕ್ಷೇತ್ರ ಸಾಕಷ್ಟು ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ. ಸದಾ ಸುದ್ದಿಯಲ್ಲಿರುವ ಶಾಸಕ ಎಂ. ಪಿ. ರೇಣುಕಾಚಾರ್ಯ ಸ್ಪರ್ಧೆ ಮಾಡಿರುವುದರಿಂದ ಎಲ್ಲರ ಗಮನ ಸೆಳೆದಿರುವ ಕದನ ನೆಲ. ಕಾಂಗ್ರೆಸ್ ನಿಂದ ಡಿ. ಜಿ. ಶಾಂತನಗೌಡರು ಸ್ಪರ್ಧೆ ಮಾಡಿದ್ದರೆ, ಜೆಡಿಎಸ್ (JDS) ಅಭ್ಯರ್ಥಿ ಬಿ. ಜಿ. ಶಿವಮೂರ್ತಿಗೌಡ ನಾಮಪತ್ರ ಪಡೆದಿರುವುದರಿಂದ ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಉಳಿದವರ ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕಿಲ್ಲ. 2018 ರಲ್ಲಿ ಬಿಜೆಪಿ(BJP)ಯ ಎಂ. ಪಿ. ರೇಣುಕಾಚಾರ್ಯ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (CONGRESS) ನ ಡಿ. ಜಿ. ಶಾಂತನಗೌಡ ಕೇವಲ 4233 ಮತಗಳ ಅಂತರದಿಂದ ಸೋಲು ಕಂಡಿದ್ದರು.

ಇಲ್ಲಿ 2018 ರಲ್ಲಿ ಭಾರತೀಯ ಜನತಾ ಪಾರ್ಟಿ(BHARATHEEYA JANATHA PARTY)ಯ ಎಂ ಪಿ ರೇಣುಕಾಚಾರ್ಯ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಯ ಡಿ ಜಿ ಶಾಂತನಗೌಡ 4233 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಇದಕ್ಕೂ ಮೊದಲು 2004, 2008ರಲ್ಲಿ ಶಾಸಕರಾಗಿದ್ದ ಎಂಪಿಆರ್, 2013ರಲ್ಲಿ ಕೆಜೆಪಿಯಿಂದ ಕಣಕ್ಕಿಳಿದು ಶಾಂತನಗೌಡರ ವಿರುದ್ಧ ಸೋತಿದ್ದರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರೇಣುಕಾಚಾರ್ಯ, ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಶಾಂತನಗೌಡರು ಸಹ ಇದು ನನ್ನ ಕೊನೆಯ ಚುನಾವಣೆ. ಮೂರನೇ ಬಾರಿ ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ.

1957 ರಲ್ಲಿ ಕಾಂಗ್ರೆಸ್ (CONGRESS) ನ ಎಚ್.ಎಸ್.ರುದ್ರಪ್ಪ, 1962ರಲ್ಲಿ ಪಿ ಎಸ್ ಪಿಯ ಡಿ.ಪರಮೇಶ್ವರಪ್ಪ, 1967ರಲ್ಲಿ ಕಾಂಗ್ರೆಸ್ ನ ಡಿ. ಪರಮೇಶ್ವರಪ್ಪ, 1972ರಲ್ಲಿ ಕಾಂಗ್ರೆಸ್ ನ ಹೆಚ್.ಬಿ.ಕಾಡಸಿದ್ದಪ್ಪ, 1978ರಲ್ಲಿ ಐಎನ್ ಸಿ (ಐ) ಹೆಚ್. ಬಿ. ಕಾಡಸಿದ್ದಪ್ಪ, 1983 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಡಿ.ಜಿ.ಬಸವನಗೌಡ, 1985ರಲ್ಲಿ ಜೆಎನ್ ಪಿಯಿಂದ ಡಿ. ಜಿ. ಬಸವನಗೌಡ, 1989ರಲ್ಲಿ ಕಾಂಗ್ರೆಸ್ ನ ಡಿ. ಬಿ. ಗಂಗಪ್ಪ, 1994ರಲ್ಲಿ ಕೆಸಿಪಿಯಿಂದ ಹೆಚ್. ಬಿ. ಕೃಷ್ಣಮೂರ್ತಿ, 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಡಿ. ಜಿ. ಶಾಂತನಗೌಡರು ಆಯ್ಕೆಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಗೆ ಒಳಪಟ್ಟಿದ್ದ ಹೊನ್ನಾಳಿ (HONNALI) ತಾಲೂಕು 1997ರಲ್ಲಿ ನೂತನ ದಾವಣಗೆರೆ (DAVANAGERE)ಜಿಲ್ಲೆಗೆ ಸೇರಿಸಲ್ಪಟ್ಟಿತು. ರೇಣುಕಾಚಾರ್ಯ ಅವರಿಗೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಆಶೀರ್ವಾದವೇ ಬಲ. ಮೂರು ಚುನಾವಣೆಗಳಲ್ಲಿಯೂ ಅವರ ಆಶೀರ್ವಾದದಿಂದಲೇ ಗೆದ್ದಿರುವುದು. ಈ ಕ್ಷೇತ್ರದಲ್ಲಿ ಶಾಂತನಗೌಡ (SHANTHANAGOWDA) ರ ಕುಟುಂಬದ ಪಾರುಪಥ್ಯವೂ ಇತ್ತು. ಪಕ್ಷೇತರರಾಗಿ ಕಣಕ್ಕಿಳಿದು ಡಿ. ಜಿ. ಬಸವನಗೌಡರು ಜಯ ಗಳಿಸಿದ್ದರು. ಜನರ ಹಣ ಕೊಟ್ಟು ಗೆಲ್ಲಿಸಿದ್ದರು. ಅದೇ ರೀತಿಯಲ್ಲಿ 1999 ರ ಚುನಾವಣೆಯಲ್ಲಿ ಡಿ. ಜಿ. ಶಾಂತನಗೌಡರಿಗೆ ಜನರೇ ಹಣ ಕೊಟ್ಟು ವಿಧಾನಸಭೆಗೆ ಕಳುಹಿಸಿದ್ದರು. ಆದ್ರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಕಮಲ ಅರಳುವಂತೆ ಮಾಡಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ. 2008ರಲ್ಲಿ ನಡೆದ ಎಲೆಕ್ಷನ್ (ELECTION) ನಲ್ಲಿ ಬಿಜೆಪಿಯೇ ಗೆದ್ದಿತ್ತು. ಬಿಜೆಪಿ ಪಕ್ಷ ಕೆಜೆಪಿ ಸೇರಿದ್ದ ರೇಣುಕಾಚಾರ್ಯರಿಗೆ ಶಾಂತನಗೌಡರು ಸೋಲಿನ ರುಚಿ ತೋರಿಸಿದ್ದರು. 2018ರಲ್ಲಿ ಮತ್ತೆ ಬಿಜೆಪಿ ಸೇರಿದ ರೇಣುಕಾಚಾರ್ಯ ಗೆದ್ದು ಬೀಗಿದರು.

ಕೊರೊನಾ ಸೇರಿದಂತೆ ಸದಾ ಕ್ಷೇತ್ರದಲ್ಲಿ ಸಂಚರಿಸಿರುವ ರೇಣುಕಾಚಾರ್ಯ ಎಲ್ಲರಿಗೂ ಚಿರಪರಿಚಿತ. ವಿವಾದ, ನೃತ್ಯ ಸೇರಿದಂತೆ ಸದಾ ಯಾವುದಾದರೂ ಒಂದು ಸುದ್ದಿಯಲ್ಲೇ ಇರುತ್ತಾರೆ. ಶಾಂತನಗೌಡರು ಸಹ ಈ ಬಾರಿ ಕ್ಷೇತ್ರಾದ್ಯಂತ ಸಂಚರಿಸಿದ್ದಾರೆ. ಪಕ್ಷೇತರರಾಗಿ ಗೆದ್ದಿದ್ದ ಶಾಂತನಗೌಡರು ರೇಣುಕಾಚಾರ್ಯರಿಗೆ ತೀವ್ರ ಪೈಪೋಟಿ ನೀಡಲಿದ್ದಾರೆ.

ಹೊನ್ನಾಳಿ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಾಬಲ್ಯ ಹೊಂದಿರುವ ಸಮುದಾಯಗಳೆಂದರೆ ವೀರಶೈವ ಲಿಂಗಾಯತ ಮತ್ತು ಕುರುಬ ಸಮಾಜ. ಈ ಎರಡೂ ಸಮಾಜದ ಮತಗಳು ಯಾರಿಗೆ ಬಿದ್ದರೂ ಗೆಲುವು ಖಚಿತ. ರೇಣುಕಾಚಾರ್ಯ ಅವರ ಸಮಾಜದ ಮತಗಳು ಇರುವುದು ಕೇವಲ 3,500 ಮತಗಳು ಮಾತ್ರ. ಆದರೂ ಕ್ಷೇತ್ರದ ಜನರೊಂದಿಗೆ ಒಡನಾಟ ಹೊಂದಿರುವ ರೇಣುಕಾಚಾರ್ಯರಿಗೆ ಎಲ್ಲಾ ಸಮುದಾಯದ ಮತಗಳು ಸಿಗುತ್ತವೆ. ಆ ಕಾರಣಕ್ಕಾಗಿ ಮೂರು ಬಾರಿ ಗೆದ್ದಿದ್ದಾರೆ. ಶಾಸಕರಾಗಿ ಗೆದ್ದ ದಿನದಿಂದಲೂ ಹೊನ್ನಾಳಿಗೆ ಬಂದರೆ ಕ್ಷೇತ್ರ ಪೂರ್ತಿ ಸಂಚರಿಸುತ್ತಾರೆ. ಸದಾ ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಲೇ ಇರುತ್ತಾರೆ. ಸಮಾಜದ ಪ್ರಾಬಲ್ಯ ಹೊಂದಿದ್ದರೂ ಶಾಂತನಗೌಡರು ರೇಣುಕಾಚಾರ್ಯ ವಿರುದ್ಧ ಸೋತಿದ್ದಾರೆ. ಇಲ್ಲಿ ಜಾತಿ ರಾಜಕಾರಣಕ್ಕಿಂತ ವ್ಯಕ್ತಿ ರಾಜಕಾರಣಕ್ಕೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಿದೆ.

ಬಹುಜನ ಸಮಾಜ ಪಕ್ಷದಿಂದ ಕುಂಕೋವ ಕೃಷ್ಣಪ್ಪ, ಆಮ್ ಆದ್ಮಿಯಿಂದ ಕೆ. ನರಸಿಂಹಪ್ಪ, ಬಿ. ಎ. ಗಣೇಶ್ ಉತ್ತಮ ಪ್ರಜಾಕೀಯ ಸೇರಿದಂತೆ ಇತರೆ ಅಭ್ಯರ್ಥಿಗಳು ಕಣದಲ್ಲಿದ್ದರೂ ಅಂಥಾ ಏನೂ ಪೈಪೋಟಿ ನೀಡುವುದಿಲ್ಲ. ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯುವ ಮೂಲಕ ಎಲ್ಲರ ಅಚ್ಚರಿಗೂ ಕಾರಣರಾಗಿದ್ದಾರೆ.

ಕ್ಷೇತ್ರದ ವಿಶೇಷತೆ:

ಪೂರ್ವದಲ್ಲಿ ಚನ್ನಗಿರಿ, ಉತ್ತರದಲ್ಲಿ ಹರಿಹರ, ದಾವಣಗೆರೆ ತಾಲೂಕುಗಳು, ಹಾವೇರಿ ಜಿಲ್ಲೆ, ಪಶ್ಚಿಮದಲ್ಲಿ ಶಿಕಾರಿಪುರ, ಧಾರವಾಡದ ಹಿರೇಕೆರೂರು, ಭದ್ರಾವತಿ, ದಕ್ಷಿಣದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಸುತ್ತುವರಿಯಲ್ಪಟ್ಟಿದೆ. ದಕ್ಷಿಣದಿಂದ ಉತ್ತರಕ್ಕೆ ಹಬ್ಬಿರುವ ಬೋಳು ಬೆಟ್ಟದ ಶ್ರೇಣಿಗಳಿವೆ. ಕುದುರೆಕೊಂಡದ ಬೆಟ್ಟದ ಸಾಲು ಹಾಗೂ ಸಣ್ಣಪುಟ್ಟ ಗುಡ್ಡಗಳಿವೆ.

ಹೊನ್ನಾಳಿ, ಚನ್ನಗಿರಿ ಮಳೆ ಕಡಿಮೆ ಆಗುವ ಪ್ರದೇಶಗಳು. ಮರಳು ಮಿಶ್ರಿತ ಕೆಂಪು ಮಣ್ಣು, ಮಧ್ಯಮ ಕಪ್ಪು ಮಣ್ಣು, ಜೇಡಿ, ಮರಳು ಮಿಶ್ರಿತ ಜೇಡಿಮಣ್ಣಿನ ಭೂಮಿಯಾಗಿದೆ. ಹವಾಗುಣ ಉತ್ತಮ. ಬಳಪದ ಕಲ್ಲು, ತಾಲೂಕಿನ ಈಶಾನ್ಯ ಮತ್ತು ವಾಯುವ್ಯದಲ್ಲಿ ಸುಣಕಲ್ಲು ದೊರೆಯುತ್ತದೆ. ಜೊತೆಗೆ ಬೆಣಚುಕಲ್ಲು ಹೊನ್ನಾಳಿ ಬೆಣಚುಕಲ್ಲೆಂದೇ ಹೆಸರಾಗಿದೆ. ತೆಳಪದರಿನ ಚಿನ್ನದ ನಿಕ್ಷೇಪವೂ ಇದೆ. ತುಂಗಾ ನದಿಯು ಈ ಮೂಲಕವೇ ಹಾದುಹೋಗುತ್ತದೆ. ರಾಜರು ಆಳಿದ ನಾಡು ಸಹ ಹೌದು.

ಮತದಾರರ ವಿವರ:

ಒಟ್ಟು ಮತದಾರರು; 1,99,9112

ಪುರುಷ ಮತದಾರರು : 99735

ಮಹಿಳಾ ಮತದಾರರು : 99204 ಮಹಿಳೆಯರು,

ಸೇವಾ ಮತದಾರರು : 69

80 ವರ್ಷ ಮೇಲ್ಪಟ್ಟ ಮತದಾರರು: 4186

ಮತಗಟ್ಟೆಗಳ ಸಂಖ್ಯೆ: 245

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment