ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ವಸತಿ ರಹಿತರ ಗುರುತಿಸಿ ಭೌತಿಕವಾಗಿ ಮಾಹಿತಿ ಸಂಗ್ರಹ: ಪಾಲಿಕೆ ಅಧಿಕಾರಿ, ಸಿಬ್ಬಂದಿ ಹಣ ಕೇಳಿದ್ರೆ ದೂರು ನೀಡಿ!

On: March 20, 2025 11:10 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:20-03-2025

ದಾವಣಗೆರೆ: ರಾಜೀವ್ ಗಾಂಧಿ ವಸತಿ ನಿಗಮ, ಮನೆ ವಸತಿ ಯೋಜನೆಗಳ ಅನುಸಾರ ವಸತಿ-ರಹಿತರನ್ನು ಗುರುತಿಸಿ ಮಾಹಿತಿಯನ್ನು ಭೌತಿಕವಾಗಿ ಸಂಗ್ರಹಿಸಿ ನಿಗದಿತ ನಮೂನೆಯಲ್ಲಿ ತುರ್ತಾಗಿ ವರದಿ ಸಲ್ಲಿಸಲು ಮಹಾನಗರಪಾಲಿಕೆಯ ಕರ ವಸೂಲಿಗಾರರು, ವಿಷಯ ನಿರ್ವಾಹಕರು, ಕಂದಾಯ ನಿರೀಕ್ಷಕರು ಹಾಗೂ ಪಾಲಿಕೆಯ ಇತರೆ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಲಾಗಿದೆ.

ಈ ಅಧಿಕಾರಿ, ನೌಕರರು ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ ಬೇಡಿಕೆ ಸಮೀಕ್ಷೆ ಸರ್ವೇ ಪ್ರಕಾರ 29379 ನಿವೇಶನ, ವಸತಿ ರಹಿತರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಆನ್‍ಲೈನ್ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿದ ಫಲಾನುಭವಿಗಳ ಮನೆ ಮನೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಫಲಾನುಭವಿಗಳು ಮಾಹಿತಿ ಮಾತ್ರ ನೀಡಬೇಕು. ಸರ್ಕಾರದ ಅಧಿಸೂಚನೆಯಂತೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದ್ದು, ಒಂದು ವೇಳೆ ಮಾಹಿತಿ ಜೊತೆಗೆ ಪಾಲಿಕೆಯ ಅಧಿಕಾರಿ, ನೌಕರರು ಹಾಗೂ ಯಾವುದೇ ಮಧ್ಯವರ್ತಿಗಳು ಹಣ ನೀಡುವಂತೆ ಬೇಡಿಕೆ ಇಟ್ಟರೆ, ಅಂತಹವರ ವಿರುದ್ಧ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ. ಒಂದು ವೇಳೆ ಫಲಾನುಭವಿಗಳು ಅಧಿಕಾರಿ, ನೌಕರರು, ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋದಲ್ಲಿ ಅದಕ್ಕೆ ಪಾಲಿಕೆಯು ಜವಾಬ್ದಾರರಾಗುವುದಿಲ್ಲ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಶಸ್ತ್ರಚಿಕಿತ್ಸೆ

90 ವರ್ಷದ ತಾತನಿಗೆ ಹೊಸ ಜೀವ: ರೋಬೋಟಿಕ್ ಶಸ್ತ್ರಚಿಕಿತ್ಸೆ ತಂದ ಹೊಸ ಆಶಾಕಿರಣ

ದಾವಣಗೆರೆ

ದಾವಣಗೆರೆಯ ವಿಶ್ವಬಂಧು ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಎಸ್. ಮರಳುಸಿದ್ದಯ್ಯ ವಿಧಿವಶ

ರಾಶಿ

ಬುಧವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2025: ಈ ರಾಶಿಯವರ ಯಾವುದೇ ಕೆಲಸ ಪ್ರಯತ್ನಿಸಿದರೂ ಕೈಗೂಡುತ್ತಿಲ್ಲ ಯಾಕೆ?

ಯುವತಿ

ದುರ್ಗಾಪುರ ಯುವತಿ ಮೇಲೆ ಅ*ತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದ ಸಹಪಾಠಿ ಸೆರೆ: ಬಂಧಿತರ ಸಂಖ್ಯೆ 6ಕ್ಕೇರಿಕೆ, ಸ್ಫೋಟಕ ಮಾಹಿತಿ ಬಯಲಿಗೆ!

ಚನ್ನಗಿರಿ

ಚನ್ನಗಿರಿ ಪಟ್ಟಣ ಸಮೀಪದ ಜೆ. ಹೆಚ್. ಪಟೇಲ್ ನಗರದಲ್ಲಿ ರಾತ್ರಿ ವೇಳೆ ಎಸ್ಪಿ ಭೇಟಿ: ಮನೆ ಗೋಡೆ ಮೇಲೆ ಉಮಾ ಪ್ರಶಾಂತ್ ಸ್ಟಿಕ್ಕರ್ ಅಂಟಿಸಿದ್ಯಾಕೆ?

ಧರ್ಮಸ್ಥಳ

ಕಾಂಗ್ರೆಸ್ ಜೊತೆ ಶಾಮೀಲಾಗಿಲ್ಲವಾದರೆ ಬಿಜೆಪಿ ಕಚೇರಿಗೆ ಬಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ: ಕೃಷ್ಣಮೂರ್ತಿ ಪವಾರ್ ಪಂಥಾಹ್ವಾನ

Leave a Comment