SUDDIKSHANA KANNADA NEWS/ DAVANAGERE/ DATE:13-03-2025
ದಾವಣಗೆರೆ: ಹೋಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಕಾಮದಹನವೂ ಜೋರಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.
ಕಾಮದಹನ ಮತ್ತು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಭಯಮುಕ್ತ ವಾತಾವರಣಕ್ಕೆ ದಾವಣಗೆರೆ ನಗರದಲ್ಲಿ 2 ತಂಡಗಳಲ್ಲಿ ಪೊಲಿಸ್ ಪಥ ಸಂಚಲನ ನಡೆಸಲಾಯಿತು.
ಮಟ್ಟಿಕಲ್ಲು, ವೆಂಕಟೆಶ್ವರ ವೃತ್ತ, ಅರಳಿಮರ ವೃತ್ತ, ಹಳೇಬೆತೂರು ರಸ್ತೆ, ಮದೀನ ಆಟೋ ಸ್ಟ್ಯಾಂಡ್ ಹಾಸಬಾವಿ ವೃತ್ತ, ಎಂ ಜಿ ರಸ್ತೆ ಕ್ರಾಸ್, ಬಸವರಾಜ ಪೇಟೆ, ಹಗೆದಿಬ್ಬ ವೃತ್ತ, ದುರ್ಗಾಂಬಿಕಾ ದೇವಸ್ಥಾನ ಹೊಂಡದ ವೃತ್ತದಲ್ಲಿ ಪಥ ಸಂಚಲನ ನಡೆಯಿತು.
ಶಿವಪ್ಪಯ್ಯ ವೃತ್ತ, ಕೆಟಿಜೆ ನಗರ 8 ನೇಕ್ರಾಸ್, ವಿದ್ಯಾರ್ಥಿ ಭವನ, ಸಿಜಿ ಆಸ್ಪತ್ರೆ ರಸ್ತೆ, ಗುಂಡಿ ವೃತ್ತ, ಡೆಂಟಲ್ ಕಾಲೇಜ್ ರೋಡ್, ಬಾಯ್ಸ್ ಹಾಸ್ಟೆಲ್ ರೋಡ್, ವೆಂಕಟೇಶ್ವರ ದೇವಾಸ್ಥಾನ, ಸ್ವಿಮ್ಮಿಂಗ್ ಪೂಲ್ ರಸ್ತೆ , ರೆಡ್ಡಿ ಬಿಲ್ಡಿಂಗ್ , ವಿನೋಬನಗರ 2ನೇ ಮುಖ್ಯ ರಸ್ತೆ ಸಾಗಿ ಪಿಬಿ ರಸ್ತೆಯಲ್ಲಿ ಮುಕ್ತಾಯವಾಯಿತು.
ಪಥ ಸಂಚಲನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಜಿ. ನೇತೃತ್ವದಲ್ಲಿ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಭೀಮರಾವ್ ಹಾಗೂ ನಗರದ ಪೊಲೀಸ್ ಅಧೀಕಾರಿ ಅಶ್ವಿನ್ ಕುಮಾರ, ನಂಜುಂಡಸ್ವಾಮಿ, ಸುನೀಲ್ ಕುಮಾರ, ಶಿಲ್ಪಾ,
ಮಲ್ಲಮ್ಮ ಚೌಬೆ, ನೂರ್ ಅಹಮದ್ ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.