SUDDIKSHANA KANNADA NEWS/ DAVANAGERE/ DATE:22-03-2024
ದಾವಣಗೆರೆ: ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ 25ನೇ ವರ್ಷದ ಹೋಳಿಹಬ್ಬ ಆಚರಣೆಯನ್ನು ಮಾ.24 ರಂದು ನಡೆಸಲಾಗುವುದು ಎಂದು ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು ತಿಳಿಸಿದ್ದಾರೆ.
ಮಾ.25 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಒಂದು ದಿನ ಮುಂಚಿತವಾಗಿ ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ಹೋಳಿ ಹಬ್ಬ ಆಚರಣೆ ಮಾಡಲು ತೀರ್ಮಾನಿಸಲಾಗಿದೆ.
ಆದ್ದರಿಂದ ಸಾರ್ವಜನಿಕರು ಯಾವುದೇ ಊಹಾ ಪೋಹಕ್ಕೆ ಕಿವಿಗೊಡದೆ ಮಾ. 24ರಂದು ಭಾನುವಾರ ರಾಮ್ ಅಂಡ್ ಕೋ ವೃತ್ತದಲ್ಲಿ ಹೋಳಿ ಆಚರಣೆಯಲ್ಲಿ ಭಾಗವಹಿಸಿ ಯಶ್ವಸ್ವಿಗೊಳಿಸುವಂತೆ ಕೋರಿದ್ದಾರೆ.
ಹೋಳಿ ಆಚರಣೆ ಗೊಂದಲ ನಿವಾರಣೆಗೆ ಆಗ್ರಹ:
ಜಿ.ಎಸ್.ಎಂ. ಗೆಳೆಯರ ಬಳಗ ಎಂ.ಸಿ.ಸಿ ‘ಬಿ’ ಬ್ಲಾಕ್ ವತಿಯಿಂದ ನಗರದಲ್ಲಿ ಕಾಮದಹನ ಹಾಗೂ ಹೋಳಿ ಹಬ್ಬವನ್ನು ಆಚರಣೆ ಮಾಡಲು ಮುಂದಾಗಿದ್ದು, ಈ ನಡುವೆ ಆಚರಣೆಯ ದಿನಾಂಕದ ವಿಚಾರವಾಗಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿರುತ್ತದೆ. ಹಿಂದೂ ಧರ್ಮಶಾಸ್ತ್ರದ ಪ್ರಕಾರ ಹುಣ್ಣಿಮೆ ದಿನ ಮಾ.24 ರಂದು ಕಾಮದಹನ ಮಾಡಿ ಮಾರನೇ ದಿನ ಸೋಮವಾರ ಮಾ.25ರಂದು ಓಕಳಿ ಹಬ್ಬವನ್ನು ಆಚರಿಸಬೇಕು. ಇದರಿಂದ ಸಮಾಜಕ್ಕೆ ಮತ್ತು ಪರಿಸರಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ. ಈ ಬಾರಿಯ ಆಚರಣೆಯ ದಿನಾಂಕವನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುವುದರ ಮುಖಾಂತರ ಸಾರ್ವಜನಿಕರ ಗಮನಕ್ಕೆ ತರಬೇಕೆಂದು ಭರತ್ ಎಸ್. ಮೈಲಾರ್ ತಿಳಿಸಿದ್ದಾರೆ.