SUDDIKSHANA KANNADA NEWS/DAVANAGERE/DATE:11_10_2025
ಲಕ್ನೋ: ಉತ್ತರ ಪ್ರದೇಶದ ಅಲಿಗಢದಲ್ಲಿ ಕಳೆದ ಸೆಪ್ಟೆಂಬರ್ 26 ರಂದು ಉದ್ಯಮಿಯೊಬ್ಬರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಅಖಿಲ ಭಾರತ ಹಿಂದೂ ಮಹಾಸಭಾ ಪದಾಧಿಕಾರಿ ಪೂಜಾ ಶಕುನ್ ಪಾಂಡೆ ಅವರನ್ನು ರಾಜಸ್ಥಾನದ ಭರತ್‌ಪುರದಲ್ಲಿ ಬಂಧಿಸಲಾಗಿದೆ.
READ ALSO THIS STORY: 150 ಕೋಟಿ ರೂ. ವಂಚನೆ, ಖಾತೆಯಲ್ಲಿ 18 ಕೋಟಿ ರೂ. ಹಣ ಹೊಂದಿದ್ದ ವಂಚಕರು: ಸೆರೆ ಸಿಕ್ಕ ಆರೋಪಿ ಹಿಸ್ಟರಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ!
25 ವರ್ಷದ ದ್ವಿಚಕ್ರ ವಾಹನ ಶೋರೂಮ್ ಮಾಲೀಕ ಅಭಿಷೇಕ್ ಗುಪ್ತಾ ಅವರನ್ನು ಹತ್ರಾಸ್‌ಗೆ ಬಸ್ ಹತ್ತುತ್ತಿದ್ದಾಗ ಅಲಿಗಢದ ರೋರಾವರ್ ಪ್ರದೇಶದಲ್ಲಿ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಪೂಜಾ ಶಕುನ್ ಪಾಂಡೆ ಮತ್ತು ಅವರ ಪತಿ, ಎಬಿಹೆಚ್ಎಂ ವಕ್ತಾರ ಅಶೋಕ್ ಪಾಂಡೆ ಅವರು ಗುಪ್ತಾ ಹತ್ಯೆಗೆ ಮೊಹಮ್ಮದ್ ಫಜಲ್ ಮತ್ತು ಆಸಿಫ್ ಅವರಿಗೆ ಸುಫಾರಿ ಕೊಟ್ಟಿದ್ದರು. ಈ ಆರೋಪಿಗಳು ಗುಂಡು ಹಾರಿಸಿ ಕೊಂದು ಹಾಕಿದ್ದರು. ಪೂಜಾ ಮತ್ತು ಅವರ ಪತಿಯ ವಿರುದ್ಧ ಅದೇ ರಾತ್ರಿ ರೋರಾವರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಲಿಗಢ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜದೌನ್ ಅವರ ಪ್ರಕಾರ ಪೂಜಾ ಅವರನ್ನು ಶುಕ್ರವಾರ ತಡರಾತ್ರಿ ಭರತ್‌ಪುರದಲ್ಲಿ ಬಂಧಿಸಲಾಗಿದೆ. “ಅಭಿಷೇಕ್ ಅವರ ಕುಟುಂಬವು ದೀರ್ಘಕಾಲದವರೆಗೆ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು
ಮತ್ತು ಅವರೊಂದಿಗಿನ ಎಲ್ಲಾ ಸಂಬಂಧ ಕಡಿದುಕೊಂಡ ಬಳಿಕ ಕೊಲೆಗೆ ಯೋಜಿಸಿದ್ದರು ಎಂದು ಹೇಳಲಾಗಿದೆ” ಎಂದು ತಿಳಿಸಿದರು. ಆದಾಗ್ಯೂ, ಪೂಜಾ ಮತ್ತು ಅಭಿಷೇಕ್ ನಡುವಿನ ವ್ಯವಹಾರ ಒಪ್ಪಂದ ಹಳಸಿದ್ದು ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸ್ ಮೂಲಗಳು ಸೂಚಿಸಿವೆ. ಪೊಲೀಸ್ ಮೂಲಗಳ ಪ್ರಕಾರ, ಅಶೋಕ್ ಪಾಂಡೆ ಮತ್ತು ಇಬ್ಬರು ಶೂಟರ್‌ಗಳು ಈಗಾಗಲೇ ಜೈಲಿನಲ್ಲಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಫಜಲ್ ನನ್ನು ಬಂಧಿಸಲಾಗಿದೆ ಎಂದು ಅಲಿಘರ್ ಪೊಲೀಸ್ ವರಿಷ್ಠಾಧಿಕಾರಿ ಮೃಗಾಂಕ್ ಶೇಖರ್ ಪಾಠಕ್ ಕಳೆದ ವಾರ ಹೇಳಿದ್ದರು ಮತ್ತು ಪ್ರಮುಖ ಶೂಟರ್ ಆಸಿಫ್ ನನ್ನು ಅಕ್ಟೋಬರ್ 3ರಂದು ದೆಹಲಿ-ಕಾನ್ಪುರ ಹೆದ್ದಾರಿಯ ಶಾ ಕುತುಬ್ ಪುರದ ಬಳಿ ಬಂಧಿಸಲಾಯಿತು. ಆಸಿಫ್ ಗೆ 25,000 ರೂ. ಬಹುಮಾನವಿದ್ದು, ಇತರ ಕ್ರಿಮಿನಲ್ ಪ್ರಕರಣಗಳಲ್ಲಿಯೂ ಬೇಕಾಗಿದ್ದಾನೆ ಎಂದು ಪಾಠಕ್ ಹೇಳಿದರು.
ಮಹಾಮಂಡಲೇಶ್ವರ ಧಾರ್ಮಿಕ ಬಿರುದನ್ನು ಹೊಂದಿರುವ ಅನ್ನಪೂರ್ಣ ಮಾ ಎಂದೂ ಕರೆಯಲ್ಪಡುವ ಪೂಜಾ ಶಕುನ್ ಪಾಂಡೆ ಕೊಲೆಯಾದ ರಾತ್ರಿಯಿಂದ ತಲೆಮರೆಸಿಕೊಂಡಿದ್ದರು ಮತ್ತು ಅವರನ್ನು ಬಂಧಿಸಿದರೆ 50,000 ರೂ. ಬಹುಮಾನವನ್ನು ಘೋಷಿಸಲಾಗಿತ್ತು. ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆಯನ್ನು ಸಾರ್ವಜನಿಕವಾಗಿ ಹೊಗಳಿದ್ದಕ್ಕಾಗಿ ಪೂಜಾ ಈ ಹಿಂದೆ ಸುದ್ದಿಗಳಲ್ಲಿದ್ದರು. ಆಕೆಯ ಬಂಧನದ ನಂತರ, ವಿಚಾರಣೆಗಾಗಿ ಆಕೆಯನ್ನು ಅಲಿಗಢಕ್ಕೆ ಕರೆತರಲಾಯಿತು.
ಇಬ್ಬರೂ ಶೂಟರ್‌ಗಳು ಪೂಜಾ ಮತ್ತು ಅವರ ಪತಿಯನ್ನು 7-8 ವರ್ಷಗಳಿಂದ ತಿಳಿದಿದ್ದರು ಮತ್ತು ಸುಮಾರು ಒಂದು ತಿಂಗಳ ಹಿಂದೆ ಅವರ ಮನೆಯಲ್ಲಿ ವೆಲ್ಡಿಂಗ್ ಕೆಲಸ ಕೈಗೊಂಡಿದ್ದರು ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. ಈ ಸಮಯದಲ್ಲಿ, ದಂಪತಿಗಳು ಅಭಿಷೇಕ್ ಗುಪ್ತಾ ಅವರನ್ನು ಕೊಲ್ಲಲು ಅವರಿಗೆ ಹಣವನ್ನು ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ, ಶೂಟರ್‌ಗಳು 5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟರು, ಆದರೆ ಒಪ್ಪಂದವನ್ನು 3 ಲಕ್ಷ ರೂ.ಗಳಿಗೆ ಅಂತಿಮಗೊಳಿಸಲಾಯಿತು, ಅದರಲ್ಲಿ 1 ಲಕ್ಷ ರೂ.ಗಳನ್ನು ಈಗಾಗಲೇ ಪಾವತಿಸಲಾಗಿತ್ತು ಎಂದು ಎಸ್‌ಪಿ ಪಾಠಕ್ ಹೇಳಿದರು. ಕೊಲೆಗೆ ಮುನ್ನ ಪಾಂಡೆ ದಂಪತಿಗಳು ಹಂತಕರಿಗೆ ಗುಪ್ತಾ ಅವರ ಫೋಟೋವನ್ನು ಸಹ ಒದಗಿಸಿದ್ದರು.
ಪೊಲೀಸರು ಪ್ರಸ್ತಾಪಿಸಿರುವ ಮೊಬೈಲ್ ಕರೆ ದಾಖಲೆಗಳು, ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಅಶೋಕ್ ಪಾಂಡೆ ಫಜಲ್ ಅವರನ್ನು 27 ಬಾರಿ ಸಂಪರ್ಕಿಸಿದ್ದಾರೆ ಮತ್ತು ಅದೇ ಅವಧಿಯಲ್ಲಿ 11 ಬಾರಿ ಪರಾರಿಯಾಗಿದ್ದ ಅವರ ಪತ್ನಿಯೊಂದಿಗೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.
ರೋರಾವರ್‌ನಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದಾಗ ಅಭಿಷೇಕ್ ಗುಪ್ತಾ ಅವರ ತಂದೆಯೊಂದಿಗೆ ಇದ್ದರು. ಅಭಿಷೇಕ್ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಗುಪ್ತಾ ಅವರ ತಂದೆ ಪೂಜಾ ಶಕುನ್ ಪಾಂಡೆ ಮತ್ತು ಅಶೋಕ್ ಪಾಂಡೆ ಅವರನ್ನು ದೂರಿನಲ್ಲಿ ಹೆಸರಿಸಿದ್ದು, ದಂಪತಿ ಮತ್ತು ಅವರ ಮಗನ ನಡುವಿನ ಸಂಬಂಧ ಹಳಸಿತ್ತು ಎಂದು ಹೇಳಿದ್ದಾರೆ.