SUDDIKSHANA KANNADA NEWS/ DAVANAGERE/ DATE:13-10-2023
ದಾವಣಗೆರೆ (Davanagere): ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿ ವಿಸರ್ಜನೆ ಅ. 14ರಂದು ನಡೆಯಲಿದ್ದು, ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮಾತ್ರವಲ್ಲ, ಈ ಸೂಚನೆಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.
READ ALSO THIS STORY:
BIG BREAKING: ಭದ್ರಾ ಅಚ್ಚುಕಟ್ಟುದಾರ ಪ್ರದೇಶದವರಿಗೆ ಸಿಗಲಿದೆ ಭದ್ರಾ ಡ್ಯಾಂ (Bhadra Dam) ನೀರು, ಡಿಕೆಶಿ ಭೇಟಿ ಮಾಡಿದ ಸಿದ್ದೇಶ್ವರ ನೇತೃತ್ವದ ನಿಯೋಗ: ನೂರು ದಿನಗಳ ಕಾಲ ಹರಿಯಲಿದೆ ಭದ್ರಾ ನೀರು
ಮೆರವಣಿಗೆ ವೇಳೆ ಪಾಲಿಸಬೇಕು ಸೂಚನೆಗಳು:
- ಗಣೇಶ ಮೆರವಣಿಗೆ ಸಂಧರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತ ಮತ್ತು ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು.
- ಗಣೇಶ ಮೆರವಣಿಗೆ ವೇಳೆ ಪ್ರಚೋದನಕಾರಿ ಹಾಡುಗಳನ್ನು ಹಾಕುವಂತಿಲ್ಲ, ಪ್ರಚೋನದಕಾರಿ ಘೋಷಣೆ ಕೂಗುವಂತಿಲ್ಲ. ಪೋಸ್ಟರ್ ಗಳ ಪ್ರದರ್ಶನಕ್ಕೆ ಅವಕಾಶ ಇಲ್ಲ.
- ಸಾರ್ವಜನಿಕ ಸಂದಣಿ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸುವಂತಿಲ್ಲ.
- ಗಣೇಶ ವಿಸರ್ಜನಾ ಮೆರವಣಿಗೆ ಸಂಧರ್ಭದಲ್ಲಿ ಮಾದಕ ವಸ್ತು, ಮದ್ಯ ಸೇವನೆ ಮಾಡುವಂತಿಲ್ಲ. ಈ ಬಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಆಡಳಿತ ಮಂಡಳಿಯವರು ಜವಾಬ್ದಾರಿ ತೆಗೆದುಕೊಳ್ಳಬೇಕು.
- ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯುಂಟು ಮಾಡಬಾರದು.
- ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ತೊಂದರೆಯಾಗದಂತೆ ಗಣೇಶ ವಿಸರ್ಜನೆ ಮೆರವಣಿಗೆ ನಡೆಸಬೇಕು. ಜನರಿಗೆ ತೊಂದರೆಯಾಗಬಾರದು.
- ಸೂಕ್ಷ್ಮ ಪ್ರದೇಶಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
- ಸಾಮಾಜಿಕ ಜಾಲತಾಣಗಳಲ್ಲಿ ಕೋಮುಪ್ರಚೋದಕ ಹಾಗೂ ಧಾರ್ಮಿಕ ನಿಂದನೆ ಪೋಸ್ಟ್ ಹಾಕಬಾರದು. ಸುಳ್ಳು ಸುದ್ದಿ ಹರಡಬಾರದು.
- ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವಂಥ ಪೋಸ್ಟ್ ಹಾಕುವುದಾಗಲೀ, ಶೇರ್ ಮಾಡುವುದಾಗಲೀ ಕಂಡು ಬಂದರೆ ಸೂಕ್ತ ಕ್ರಮ.
- ಗಣೇಶ ಮೆರವಣಿಗೆ ವೇಳೆ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬೇಡಿ. ಶಾಂತಿಯುತ ಹಾಗೂ ಸೌಹಾರ್ದತಯುತವಾಗಿ ವರ್ತಿಸಬೇಕು. ಅಹಿತಕರ ಘಟನೆ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ.
- ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ, ಸ್ಥಳೀಯ ಪೊಲೀಸ್ ಠಾಣೆ ಇಲ್ಲವೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ.
ಪೊಲೀಸ್ ಬಂದೋಬಸ್ತ್:
ಗಣೇಶ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ಸಂಬಂಧ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ವಾಹನ ಸಂಚಾರ ಮಾರ್ಗ ಬದಲಾವಣೆ:
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಹೆಚ್ಚಿನ ಜನರು ಸೇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ
ತೊಂದರೆ ಉಂಟಾಗುವ ಸಾಧ್ಯತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅ. 14ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10ಗಂಟೆಯವರೆಗೆ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ದಾವಗೆರೆ ನಗರದ ಕ್ಕಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳಿಗೆ ಬರುವ ಬಸ್ ಗಳು ಈ ಕೆಳಕಂಡ ಸ್ಥಳಗಳಲ್ಲಿ ನಿಲುಗಡೆ ಮಾಡಿ ಅಲ್ಲಿಂದಲೇ ವಾಪಸ್ ತೆರಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಆದೇಶಿಸಿದ್ದಾರೆ.
ಹಿಂದೂ ಮಹಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯು ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾಗಲಿದೆ. ಅಲ್ಲಿಂದ ಎ.ವಿ.ಕೆ ರಸ್ತೆ, ಚೇತನ್ ಹೋಟೆಲ್ ಎಡಭಾಗದಿಂದ ಅಂಬೇಡ್ಕರ್ ವೃತ್ತ, (ಮುಸ್ಲಿಂ ಹಾಸ್ಟೇಲ್ ಕಾಂಪ್ಲೆಕ್ಸ್), ಜಯದೇವ ಸರ್ಕಲ್, ಲಾಯರ್ ರಸ್ತೆ, ಪಿ.ಬಿ .ರಸ್ತೆ, ಗಾಂಧಿ ವೃತ್ತ, ಹಳೇ ಬಸ್ ನಿಲ್ದಾಣ, ಅರಸು ಕ್ರಾಸ್, ಮಹಾನಗರ ಪಾಲಿಕೆ, ರಾಣಿ ಚೆನ್ನಮ್ಮ ವೃತ್ತ, ಈದ್ಗಾ ಮೈದಾನ (ಖಬರಸ್ಥಾನ್), ಮದೀನ ಮಸೀದಿ, ಕೋರ್ಟ್ ವೃತ್ತದ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬಂದು ಮೆರವಣಿಗೆಯನ್ನು ಮುಕ್ತಾಯ ಮಾಡಿ ನಂತರ ಗಣೇಶ ಮೂರ್ತಿಯನ್ನು ಬಾತಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಮಾರ್ಗ ಬದಲಾವಣೆ ವಿವರ:
- ಚನ್ನಗಿರಿ ರಸ್ತೆ ಕಡೆಯಿಂದ ಬರುವ ಬಸ್ಗಳು – ಹದಡಿ ರಸ್ತೆಯಲ್ಲಿರುವ ಶ್ರೀ ಮಾಗನೂರು ಬಸಪ್ಪ ಮೈದಾನದಲ್ಲಿ ನಿಲುಗಡೆ ಮಾಡಿಕೊಂಡು ನಿರ್ಗಮಿಸಬೇಕು.
- ಜಗಳೂರು ಕಡೆಯಿಂದ ಬರುವ ಬಸ್ಗಳು- ಕೆ.ಆರ್.ರಸ್ತೆ ಗಣೇಶಗುಡಿ ಪಕ್ಕದಲ್ಲಿರುವ ಜಗಳೂರು ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿಕೊಂಡು ನಂತರ ಆರ್ಎಂಸಿ ಯಾರ್ಡ್ ರಸ್ತೆ ಮೂಲಕ ಪ್ರೈ ಓವರ್ ಹತ್ತಿರ ಬಂದು ವಾಪಸ್ ಅದೇ ಮಾರ್ಗವಾಗಿ ಹೋಗಬೇಕು.
- ಚಿತ್ರದುರ್ಗ ಮತ್ತು ಸಂತೇಬೆನ್ನೂರು ಬೀರೂರು ಸಮ್ಮಸಗಿ ರಸ್ತೆಯಿಂದ ಬರುವ ಬಸ್ಗಳನ್ನು ದಾವಣಗೆರೆ ನಗರದ ನಿರ್ಮಾಣ ಹಂತದಲ್ಲಿರುವ ಹೊಸ ಕೆಎಸ್ಆ ರ್ ಟಿ ಬಸ್ ನಿಲ್ದಾಣಕ್ಕೆ ಬಂದು ವಾಪಸ್ ಬಾಡ ಕ್ರಾಸ್ ನ ರಸ್ತೆ ಮೂಲಕ ಹರಿಹರ, ಹಾವೇರಿ ಕಡೆಗೆ ಹೋಗುವುದು, ಹರಿಹರ ಮತ್ತು ಶಾಮನೂರು ಕಡೆಯಿಂದ ಬರುವ ವಾಹನಗಳನ್ನು ದಾವಣಗೆರೆ ನಗರದ ಎಸಿಬಿ ಕಛೇರಿ ಎದುರುಗಡೆ ರಿಂಗ್ ರಸ್ತೆಯಲ್ಲಿರುವ ಎರಡು ಖಾಲಿ ಜಾಗದಲ್ಲಿ ನಿಲುಗಡೆ ಮಾಡಿ ನಿರ್ಗಮಿಸಬೇಕು.