ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಪ್ರೀತಿ ಬಲೆಗೆ ಬಿದ್ದ ಹಿಂದೂ ಯುವತಿ ಸಾವು: ಆತ್ಮಹತ್ಯೆಗೆ ಲವ್ ಜಿಹಾದ್ ಶಂಕೆ!

On: October 11, 2025 12:12 PM
Follow Us:
ಹಿಂದೂ
---Advertisement---

SUDDIKSHANA KANNADA NEWS/DAVANAGERE/DATE:11_10_2025

ಕೇರಳ: ಕೇರಳದಲ್ಲಿ ಹಿಂದೂ ಯುವತಿ ಲವ್ ಜಿಹಾದ್ ಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ತನ್ನ ಸಹಪಾಠಿ ಹ್ಯಾರಿಸ್ ಎಂಬಾತನು ಬೀಸಿದ ಪ್ರೀತಿಯ ಬಲೆಗೆ ಬಿದ್ದಿದ್ದ ಯುವತಿಯ ಬದುಕು ದುರಂತ ಅಂತ್ಯ ಕಂಡಿದೆ.

ಈ ಸುದ್ದಿಯನ್ನೂ ಓದಿ: ಇಂಟೆಲ್ ಸೇರಿ 35ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳು ದಾವಣಗೆರೆಯಲ್ಲಿ ಘಟಕ ತೆರೆಯಲು ಉತ್ಸುಹಕ: ಡಾ. ಪ್ರಭಾ ಮಲ್ಲಿಕಾರ್ಜುನ್

ಈಕೆ ಹೆಸರು ಅಂಜನಾ. ಅಕ್ಟೋಬರ್ 2 ರಂದು ಮಧ್ಯರಾತ್ರಿ ಕೇರಳದ ಅರೂರ್ ರೈಲು ನಿಲ್ದಾಣದ ಬಳಿ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಅಂಜನಾ ಆಲಪ್ಪುಳ ಜಿಲ್ಲೆಯ ಉತ್ತರ ಭಾಗದಲ್ಲಿರುವ ಅರೂರ್‌ನ ಧರ್ಮಕ್ಕಟ್ ಮನೆಯ ರತೀಶ್ ಎಂಬುವವರ ಇಬ್ಬರು ಹೆಣ್ಣು ಮಕ್ಕಳ ಪೈಕಿ ಹಿರಿಯವಳು. ಕಲಾಮಸ್ಸೆರಿಯ ಸಿಐಪಿಇಟಿ ಕಾಲೇಜಿನಲ್ಲಿ ಪ್ಲಾಸ್ಟಿಕ್ ತಂತ್ರಜ್ಞಾನ ಡಿಪ್ಲೊಮಾ ಕೋರ್ಸ್‌ನ ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಳು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಓದುತ್ತಿದ್ದ ಚಿಕ್ಕರಕ್ಕುಡಿಯ ಕೋತಮಂಗಲಂ ವೆಂಡುವಾಝಿಯ ಹ್ಯಾರಿಸ್ ಎಂಬ ಯುವಕನನ್ನು ಪ್ರೀತಿ ಮಾಡುತ್ತಿದ್ದಳು.

ಅಂಜನಾಳಿಗೆ ಮದುವೆಯಾಗುವುದಾಗಿ ಹ್ಯಾರಿಸ್ ಭರವಸೆ ನೀಡಿ ಆಗಾಗ್ಗೆ ಆಕೆ ಜೊತೆ ಸೇರುತ್ತಿದ್ದ. ಆ ಬಳಿಕ ಕಿರುಕುಳ ನೀಡಲು ಶುರು ಮಾಡಿದ್ದ ಎಂದು ತಿಳಿದು ಬಂದಿದೆ. ಸಾವಿಗೆ ಒಂದು ತಿಂಗಳ ಮೊದಲು, ಇಬ್ಬರೂ ಎಡಪ್ಪಳ್ಳಿಯ ಲಾಡ್ಜ್‌ನಲ್ಲಿ ಉಳಿದು ದೈಹಿಕ ಸಂಬಂಧ ಬೆಳೆಸಿದ್ದರು. ಬಳಿಕ ಆಕೆ ತಂದೆ ರತೀಶ್ ಅವರು ಹ್ಯಾರಿಸ್ ನಿಂದ ಗರ್ಭಿಣಿಯಾಗಿದ್ದಾಳೆಂದು ಶಂಕಿಸಿ ಆಕೆಯನ್ನು ಕೊಂದಿರಬಹುದು ಎಂಬ ಅನುಮಾನವೂ
ಇದೆ.

ಅಕ್ಟೋಬರ್ 2 ರಂದು ರಾತ್ರಿ 9.30 ರ ಸುಮಾರಿಗೆ ಹ್ಯಾರಿಸ್ ಅಂಜನಾಳಿಗೆ ಫೋನ್‌ ಮಾಡಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಋತುಚಕ್ರದಲ್ಲಿ ಇರುವುದಾಗಿ ಆಕೆ ಹೇಳಿದ್ದಾಳಂತೆ. ಕೋಪದಿಂದ ಮಾತನಾಡಿದ್ದಾನೆ. ಆ ಬಳಿಕ ರಾತ್ರಿ 10 ಗಂಟೆಯ ನಂತರ ಆಕೆ ಸ್ನಾನಗೃಹಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾಳೆ. ಮತ್ತೆ ಹಿಂದುರಿಗಿಲ್ಲ. ವಿಜಯಾಂಬಿಕಾ ಗ್ರಂಥಾಲಯದ ಬಳಿಯ ಮಾನವಿಕಂ ಓಪನ್ ಆಡಿಟೋರಿಯಂ ಬಳಿ ಇಬ್ಬರು ಅಥವಾ ಮೂವರು ಯುವಕರೊಂದಿಗೆ ಅವಳು ಜಗಳವಾಡುತ್ತಿರುವುದನ್ನು ಅನೇಕರು ನೋಡಿದ್ದಾರೆ ಎಂದು ರತೀಶ್ ಹೇಳುತ್ತಾರೆ. ನಂತರ, ಅವಳು ದ್ವಿಚಕ್ರ ವಾಹನದಲ್ಲಿ ಇಬ್ಬರು ಯುವಕರ ಮಧ್ಯದಲ್ಲಿ ಕುಳಿತಿರುವುದು ಕಂಡುಬಂದಿದೆ ಎಂದು
ಮೂಲಗಳು ತಿಳಿಸಿವೆ.

ಅಂಜನಾ ಸಾವು ಕಾಣುತ್ತಿದ್ದಂತೆ ಹ್ಯಾರಿಸ್ ಬೆಂಗಳೂರಿಗೆ ಓಡಿಹೋಗಿದ್ದಾನೆ ಎಂದು ವರದಿಯಾಗಿದೆ. ಹ್ಯಾರಿಸ್ ಅಥವಾ ಹ್ಯಾರಿಸ್ ಕಳುಹಿಸಿದ ಸ್ನೇಹಿತರು ಅಂಜನಾಳನ್ನು ಬಲವಂತವಾಗಿ ರೈಲಿನ ಮುಂದೆ ತಳ್ಳಿ ಕೊಂದಿರಬಹುದು ಎಂದು ಕುಟುಂಬವು ದೂರಿದೆ. ಮಾತ್ರವಲ್ಲ, ಕುಟುಂಬವು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಡಿಜಿಪಿಗೆ ದೂರು ನೀಡಲು ನಿರ್ಧರಿಸಿದೆ.

ಪ್ರೀತಿಯಲ್ಲಿರುವಂತೆ ನಟಿಸಿ ಪಕ್ಕಕ್ಕೆ ತಳ್ಳಲ್ಪಟ್ಟ ಮತ್ತು ನಂತರ ಎಸೆಯಲ್ಪಟ್ಟ ಅಥವಾ ಅಗತ್ಯವಿದ್ದಾಗ ಕೊಲ್ಲಲ್ಪಟ್ಟವರಲ್ಲಿ ಅಂಜನಾಳ ಬದುಕು ದುರಂತ ಅಂತ್ಯವಾಗಿದೆ. ಕೊಲೆಯಾಗಲಿ ಅಥವಾ ಆತ್ಮಹತ್ಯೆಯಾಗಲಿ, ಅಂಜನಾಳ ಸಾವಿನಲ್ಲಿ ಹ್ಯಾರಿಸ್ ಪಾತ್ರ ಸ್ಪಷ್ಟವಾಗಿದ್ದು, ಆತನ ವಿರುದ್ಧ ಕಠಿಣಾತಿ ಕಠಿಣ ಕ್ರಮ ಜರುಗಿಸಬೇಕು ಎಂದು ಕುಟುಂಬದವರು ಒತ್ತಾಯಿಸಿದ್ದು, ಕೇರಳ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಮುಂದಾದರೂ ಪ್ರೀತಿಯೆಂಬ ಬಲೆಗೆ ಬಿದ್ದು ಉಸಿರು ಚೆಲ್ಲುವಂತಾಗಬಾರದು ಎಂಬುದು ಪ್ರಜ್ಞಾವಂತರು ಮತ್ತು ಹಿಂದೂ ಸಂಘಟನೆಗಳ ಆಶಯವಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment