ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಳೆ ಮಳೆ ರಗಳೆ ಮುಗಿಯಿತು… ಚಳಿ ಚಳಿ ಚಳಿ ಶುರುವಾಯ್ತು..! ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು…?

On: October 2, 2024 11:30 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:02-10-2024

ನವದೆಹಲಿ: ಈಗ ಚಳಿ… ಚಳಿ… ಚಳಿ… ಸಾಕಪ್ಪಾ ಸಾಕು ಚಳಿ.. ಎಂಬ ಮಾತು ಇನ್ಮುಂದೆ ಕೇಳಿ ಬರೋದು ಸಾಮಾನ್ಯವಾಗಿಬಿಡುತ್ತೆ.

ಹೌದು. ಭಾರೀ ಮಳೆಯಾದ ಪರಿಣಾಮ ಜಲಾಶಯಗಳು ಉಕ್ಕಿ ಹರಿದರೆ, ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳು ಮುಗಿಯುತ್ತಾ ಬಂದಿವೆ. ರೈತರು ಬೆಳೆ ಬೆಳೆದು ಫಸಲು ನಿರೀಕ್ಷೆಯಲ್ಲಿದ್ದಾರೆ. ಮಳೆಯಿಂದ ಬೇಸತ್ತು ಹೋಗಿದ್ದ ಜನರೀಗ ಡಿಸೆಂಬರ್ ಬಳಿಕ ಚಳಿ ನಡುಗುವಂತ ಸ್ಥಿತಿ ನಿರ್ಮಾಣವಾಗಲಿದೆ.

ಮಳೆ.. ಮಳೆ. ಮಳೆ… ರಗಳೆ… ರಗಳೆ… ಇದು ಈ ಬಾರಿಯ ಮಳೆಗಾಲದ ವೇಳೆ ಕೇಳಿ ಬಂದ ಮಾತು. ಯಾಕೆಂದರೆ ಕಳೆದ ವರ್ಷ ಬರಗಾಲಕ್ಕೆ ತುತ್ತಾಗಿ ಬೆವರಿ ಬೆಂಡಾಗಿದ್ದ ಕರುನಾಡ ಜನತೆ ಈ ಬಾರಿ ಮಳೆಯಲ್ಲಿ ತೊಯ್ದು ಹೋದರು. ನಿರೀಕ್ಷೆಗಿಂತ, ವಾಡಿಕೆಗಿಂತ ಹೆಚ್ಚಿನ ಮಳೆಯಾಯ್ತು. ಜಲಾಶಯಗಳು ಭರ್ತಿಯಾದವು. ರೈತರ ಮೊಗದಲ್ಲಿಯೂ ಮಂದಹಾಸ ಮೂಡಿತು. ಮಳೆ ಎಷ್ಟರ ಮಟ್ಟಿಗೆ ಜೂನ್ ಕೊನೆ, ಜುಲೈ, ಆಗಸ್ಟ್, ಸೆಪ್ಟಂಬರ್ ತಿಂಗಳಿನಲ್ಲಿಯೂ ಮಳೆ ಧಾರಾಕಾರ ಸುರಿಯಿತು. 

ಭಾರೀ ಬೇಸಿಗೆಯ ಶಾಖ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ನೈಋತ್ಯ ಮುಂಗಾರು ಮಳೆಯ ನಂತರ ತೀವ್ರವಾದ ಚಳಿ ವಾತಾವರಣ ಇರುವ ಸಾಧ್ಯತೆಗಳ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಈಗಾಗಲೇ ಮುನ್ಸೂಚನೆ ಕೊಟ್ಟಿದೆ.

ಅಕ್ಟೋಬರ್‌ನಲ್ಲಿ, ಈಶಾನ್ಯ ಮತ್ತು ವಾಯುವ್ಯ ಭಾರತದ ಕೆಲವು ಭಾಗಗಳು ಮತ್ತು ದಕ್ಷಿಣ ಪೆನಿನ್ಸುಲಾದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಭಾರತದ ಹೆಚ್ಚಿನ ಭಾಗಗಳು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಈ ಚಳಿಗಾಲದಲ್ಲಿ ದಿರ್ಘಾವಧಿಯ ಶೀತ ಅಲೆಯ ವಾತಾವರಣ ಇರಲಿದೆ ಎಂದು ಐಎಂಡಿ ಹೇಳಿದೆ. ನವೆಂಬರ್- ಡಿಸೆಂಬರ್ ಅವಧಿಯಲ್ಲಿ ಹಿಂದೆಂದಿಗಿಂತಲೂ ಕನಿಷ್ಠ ತಾಪಮಾನ ಉಂಟಾಗಲಿದ್ದು, ಇದಕ್ಕೆ ಲಾ ನಿನಾ ಎಫೆಕ್ಟ್ ಕಾರಣವಾಗಲಿದೆ ಎಂದು ತಿಳಿಸಿದೆ.

ಮಾನ್ಸೂನ್ ನಂತರದ ಅವಧಿಯಲ್ಲಿ ಅಕ್ಟೋಬರ್, ಡಿಸೆಂಬರ್, ಜನವರಿ ತಿಂಗಳಿನಲ್ಲಿ ದಕ್ಷಿಣ ಪೆನಿನ್ಸುಲರ್ ಭಾರತ, ಮಧ್ಯ ಭಾರತ ಮತ್ತು ಈಶಾನ್ಯ ಭಾರತದ ಹಲವು ಪ್ರದೇಶಗಳಲ್ಲಿ ಸಾಮಾನ್ಯ ಸರಾಸರಿಗಿಂತ ಹೆಚ್ಚಿನ ಮಳೆಯನ್ನು ಐಎಂಡಿ ಅಂದಾಜಿಸಿದೆ. ಸರಾಸರಿ ಮಳೆಯು ಸಾಮಾನ್ಯಕ್ಕಿಂತ ಹೆಚ್ಚಾಗಿ ಅಂದರೆ ದೀರ್ಘಾವಧಿಯ ಸರಾಸರಿಯ 112% ಕ್ಕಿಂತ ಇದು ಹೆಚ್ಚಾಗಿದೆ. ಆದಾಗ್ಯೂ, ವಾಯುವ್ಯದ ಹೆಚ್ಚಿನ ಭಾಗಗಳು, ಈಶಾನ್ಯದ ಕೆಲವು ಭಾಗಗಳು ಮತ್ತು ಭಾರತದ ದಕ್ಷಿಣ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment