SUDDIKSHANA KANNADA NEWS/ DAVANAGERE/ DATE_09-07_2025
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲೂ ಹೃದಯಘಾತ ಹೆಚ್ಚಾಗುತ್ತಿದ್ದು, ಕೇವಲ ಎರಡು ದಿನಗಳ ಅಂತರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾದಂತಾಗಿದೆ.
ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆ ಹೃದಯ ಸ್ತಂಭನದಿಂದ ಸಾವಿನ ಸಂಖ್ಯೆ ಏರುತ್ತಲೇ ಇದೆ. ದಾವಣಗೆರೆಯಲ್ಲಿಯೂ ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ ಒಟ್ಟು ಐವರಿಗೆ ಹೃದಯಾಘಾತ ಆಗಿದ್ದು, ನಾಲ್ವರು ಮೃತಪಟ್ಟರೆ, ಓರ್ವ ಯುವಕ ಅಪಾಯದಿಂದ ಪಾರಾಗಿದ್ದಾನೆ. ಕಳೆದ ಮೂರು ತಿಂಗಳ ಅಂತರದಲ್ಲಿ ಸುಮಾರು 80ಕ್ಕೂಹೆಚ್ಚು ಜನರು ಹೃದಯಾಘಾತದಿಂದ ಸಾವು ಕಂಡಿರಬಹುದು ಎಂದು ಹೇಳಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: ದಾವಣಗೆರೆಯಲ್ಲಿ ಸೋಲಿಸಲು ಬೆನ್ನಿಗೆ ಚೂರಿ ಹಾಕಿದ್ದ ಮೀರ್ ಸಾಧಕರಿಗೆ ತಕ್ಕ ಪಾಠ ಖಚಿತ: ಕುಮಾರ್ ಬಂಗಾರಪ್ಪ ಸಿಡಿಗುಂಡು!
19 ವರ್ಷದ ವಿದ್ಯಾರ್ಥಿನಿ, ಜಯಪ್ಪ ಹೃದಯಾಘಾತಕ್ಕೆ ಬಲಿಯಾಗಿದ್ದರು. ಈಗ ಮಂಜ್ಯಾ ನಾಯ್ಕ್ (38), ಅಕ್ಷಯ (22), ಹರೀಶ್ (50), ಜಯಾಭಾಯಿ (50) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸುಮನ್ (35) ಅವರು ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದು, ಕೊನೆ ಕ್ಷಣದಲ್ಲಿ ಬದುಕುಳಿದಿದ್ದಾರೆ.
ಮಲಗಿದ್ದಾಗ ಹೃದಯಾಘಾತದಿಂದ ಸಾವು:
ದಾವಣಗೆರೆ ನಗರದ ನಿಟ್ಟುವಳ್ಳಿ ಚಿಕ್ಕನಹಳ್ಳಿ ಹೊಸಬಡಾವಣೆ ಬಳಿ ಆಂಜನೇಯ ಸ್ವಾಮಿ ದೇವಾಲಯ ಬಳಿ ಹೃದಯಾಘಾತದಿಂದ ವ್ಯಕ್ತಿ ಸಾವು ಕಂಡಿದ್ದು, ಏಕಾಏಕಿ ರಾತ್ರಿ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದು
ಕೊನೆಯುಸಿರೆಳೆದಿದ್ದಾರೆ. ಹರೀಶ್ (54) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ. ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರಾದರೂ ಮನೆಯಲ್ಲೇ ಉಸಿರು ಚೆಲ್ಲಿದ್ದಾರೆ.
ಆಟೋ ಚಾಲಕ ಸಾವು:
ಆಟೋ ಓಡಿಸುವಾಗ ಕುಸಿದು ಬಿದ್ದ ಚಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಮೃತಪಟ್ಟಿದ್ದು, ಮಂಜಾನಾಯ್ಕ ಅವರು ಸಾವನ್ನಪ್ಪಿದವರು. ದಾವಣಗೆರೆ ತಾಲೂಕಿನ ನಾಗರಕಟ್ಟೆ ಗ್ರಾಮದವರು. ಮಂಜಾನಾಯ್ಕ ಅವರ ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಂಗಡಿಯಲ್ಲಿ ಕುಳಿತಲ್ಲೇ ಮರಣ:
ಅಂಗಡಿಯಲ್ಲಿ ಕುಳಿತಿದ್ದ ಹರಪನಹಳ್ಳಿ ತಾಲೂಕಿನ ದಿದ್ದಗಿ ತಾಂಡಾ ನಿವಾಸಿ ಜಯಾಬಾಯಿ (50) ಹೃದಯಘಾತವಾಗಿ ಮೃತಪಟ್ಟಿದ್ದಾರೆ.
ದಾವಣಗೆರೆಯಲ್ಲಿ ಯುವಕ ಬಲಿ:
ನಗರದ ಜಯನಗರ ಮನೆಯಲ್ಲಿ ಇದ್ದಕ್ಕಿದ್ದಂತೆ ಮನೆಯಲ್ಲಿ ಕುಸಿದು ಬಿದ್ದ 22 ವರ್ಷದ ಅಕ್ಷಯ್ ಗೆ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಹೃದಯ ಸ್ತಂಭನವಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.
ಈ ಸುದ್ದಿಯನ್ನೂ ಓದಿ: ನಾನೇನೂ ಕೆಜೆಪಿ ಕಟ್ಟಿಲ್ಲ ರಾಯಣ್ಣ ಬ್ರಿಗೇಡ್ ಮಾಡಿಲ್ಲ, ಬಿಜೆಪಿ ಬಿಡಲ್ಲ: ವಿರೋಧಿಗಳಿಗೆ ಟಾಂಗ್ ಕೊಟ್ಟ ಜಿ. ಎಂ. ಸಿದ್ದೇಶ್ವರ
ಉದ್ಯಮಿ ರೇಖಾ ಮುರುಗೇಶ್, ಮುರುಗೇಶ್ ದಂಪತಿ ಪುತ್ರ. ಮನೆಯಲ್ಲಿ ಕುಟುಂಬಸ್ಥರು, ಪೋಷಕರು, ಸ್ನೇಹಿತರು, ಸಂಬಂಧಿಕರ ನೋವು ಹೇಳತೀರದ್ದಾಗಿದೆ.