ದಾಸವಾಳದ ಹೂವು ದೇವರ ಅಲಂಕಾರಕ್ಕೆ ಅಷ್ಟೇ ಅಲ್ಲದೆ ಆರೋಗ್ಯಕ್ಕೂ ಬಹಳಷ್ಟು ಉಪಕಾರಿ. ಬಿಳಿದಾಸವಾಳದ ಹೂವಿನ ರಸಕ್ಕೆ ಕಲ್ಲುಸಕ್ಕರೆ ಮತ್ತು ಹಾಲು ಬೆರಸಿ ಕುಡಿಯುವುದರಿಂದ ಉರಿಮೂತ್ರ ನಿವಾರಣೆಯಾಗುತ್ತದೆ.
ಮಕ್ಕಳಿಗೆ ದಾಸವಾಳದ ಹೂವಿನ ರಸ ಅಥವಾ ದಾಸವಾಳದ ಗುಲ್ಕನ್ ತಿನ್ನಿಸುವುದರಿಂದ ಬಾಯಾರಿಕೆ, ದಣಿವು ತಕ್ಷಣ ಕಡಿಮೆಯಾಗುತ್ತದೆ. ಹಾಗೂ ರಕ್ತ ಮೂಲವ್ಯಾಧಿ ರೋಗ ನಿಯಂತ್ರಣಕ್ಕೆ ಬರುತ್ತದೆ. ಇದರ ಜೊತೆ ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಉದುರುವುದು ನಿಲ್ಲುತ್ತದೆ.