ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸಾಮಾನ್ಯ ಶೀತ-ಕೆಮ್ಮಿಗೆ ಪರಿಣಾಮಕಾರಿ ಕಷಾಯ ಪುಡಿ ಮಾಡುವುದು ಹೇಗೆ?

On: May 26, 2024 11:28 AM
Follow Us:
---Advertisement---

ಬಿಸಿಲಿನ ಧಗೆಯಲ್ಲಿ ಬೇಯುತ್ತಿದ್ದ ಭೂಮಿಗೆ ಕಳೆದ ಕೆಲ ದಿನಗಳಿಂದ ಮಳೆರಾಯ ಭೇಟಿ ಕೊಡುತ್ತಿದ್ದಾನೆ, ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಕೂಡ ಶುರುವಾಗಲಿದೆ.

ಮಳೆಗಾಲದಲ್ಲಿ ಕೆಮ್ಮ-ಶೀತ ಈ ಬಗೆಯ ಸಮಸ್ಯೆ ಸರ್ವೇ ಸಾಮಾನ್ಯ, ಇಂಥ ಸಾಮಾನ್ಯ ಶೀತ-ಕೆಮ್ಮು ಈ ಬಗೆಯ ಸಾಮಾನ್ಯ ಸಮಸ್ಯೆಗಳಿಗೆ ರಾಮಮಾಣ ಈ ಕಷಾಯ ಪುಡಿ:

ಬೇಕಾಗುವ ಸಾಮಗ್ರಿ

4-5 ಕಪ್ಪು ಏಲಕ್ಕಿ (ಒಣ ಏಲಕ್ಕಿ ಕೂಡ ಬಳಸಬಹುದು)

2 ಇಂಚಿನಷ್ಟು ದೊಡ್ಡದಿರುವ ಚಕ್ಕೆ

ಒಂದು ಇಂಚಿನಷ್ಟು ದೊಡ್ಡದಿರುವ ಒಣ ಶುಂಠಿ (ಶುಂಠಿ ಪುಡಿಯಾದರೆ 1/2 ಚಮಚ)

2 ಲವಂಗ

ಕಾಳುಮೆಣಸು 1 ಚಮಚ

2 ಚಮಚ ಸೋಂಪು

ಇವುಗಳನ್ನು ನೀವು ತವಾ ಅಥವಾ ಬಾಣಲೆಗೆ ಹಾಕಿ ರೋಸ್ಟ್‌ ಮಾಡಬೇಕು, ನಂತರ ಅವುಗಳನ್ನು ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

ಕಷಾಯ ಪುಡಿ ಮಾಡುವುದರಿಂದ ಪ್ರಯೋಜನವೇನು?

ಕಷಾಯ ಮಾಡಿದರೆ ನಾವು ಒಂದು ಅಥವಾ ಎರಡು ದಿನ ಇಟ್ಟು ಸೇವಿಸಬಹುದು

ಆದರೆ ಕಷಾಯ ಪುಡಿ ಮಾಡಿದರೆ ನಮಗೆ ಯಾವಾಗ ಶೀತ-ಕೆಮ್ಮು ಈ ಬಗೆಯ ಸಮಸ್ಯೆ ಉಂಟಾಗುವುದೋ ಆವಾಗ ಬಿಸಿ ನೀರಿನಲ್ಲಿ ಕಲೆಸಿ ಸೇವಿಸಿದರೆ ಸಾಕು.

ಹಾಸ್ಟಲ್‌, ಪಿಜಿಯಲ್ಲಿರುವ ಮಕ್ಕಳಿಗೆ ಮಾಡಿ ಕೊಡಬಹುದು.

ನಂತರ ಬೇಕಾದಾಗ ಬಿಸಿ ನೀರಿಗೆ ಒಂದು ಚಮಚ ಪುಡಿ ಹಾಕಿ, ನಂತರ ಸ್ವಲ್ಪ ಜೇನು, ನಿಂಬೆರಸ ಹಾಕಿ ಮಿಕ್ಸ್ ಮಾಡಿದರೆ ಕಷಾಯ ರೆಡಿ.

ಕಷಾಯ ಯಾವಾಗ ಕುಡಿದರೆ ಒಳ್ಳೆಯದು?

ವಾತ: ವಾತ ಶರೀರ ಇರುವವರೆಗೆ ಕಷಾಯ ಸಂಜೆ ಕುಡಿಯುವುದು ಒಳ್ಳೆಯದು. ಕಷಾಯದಲ್ಲಿ ಸ್ವಲ್ಪ ತುಪ್ಪ ಬೇಕಾದರೆ ಹಾಕಬಹುದು.

ಪಿತ್ತ: ಪಿತ್ತ ಪ್ರಕೃಯೆವರೆಗೆ ಕಷಾಯವನ್ನು ಬೆಳಗ್ಗೆ ಕೊಡುವುದು ಒಳ್ಳೆಯದು. ಕಷಾಯವನ್ನು ಹದ ಬಿಸಿ ಇರುವಾಗ ಕುಡಿಯಿರಿ.

ಕಫ: ಕಫ ಶರೀರದವರು ದಿನದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ಕಷಾಯ ಸ್ವಲ್ಪ ಬಿಸಿ ಬಿಸಿ ಇರುವಾಗ ಕುಡಿಯಬಹುದು.

ನಿಮ್ಮ ಶರೀರ ವಾತ, ಪಿತ್ತ, ಕಫ ಇದರಲ್ಲಿ ಯಾವ ಬಗೆಯದು ಎಂದು ತಿಳಿಯದಿದ್ದರೆ

ನೀವು ಇದರ ಬಗ್ಗೆ ಆಯುರ್ವೇದ ವೈದ್ಯರ ಬಳಿ ಕೇಳಿ ತಿಳಿದುಕೊಳ್ಳಿ, ನಂತರ ಕಷಾಯಕ್ಕೆ ಸ್ವಲ್ಪ ಅಮೃತ ಬಳ್ಳಿ ಸೇವಿಸಿದರೆ ಒಳ್ಳೆಯದು.

Join WhatsApp

Join Now

Join Telegram

Join Now

Leave a Comment