ನಾವು ದಿನನಿತ್ಯದ ಜೀವನದಲ್ಲಿ ಸೇವಿಸುವ ಆಹಾರಗಳು ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಹೆಚ್ಚಿನ ಜನರು ಬೆಳಿಗ್ಗೆ ಬಿಸಿ ನೀರು ಮತ್ತು ನಿಂಬೆ ನೀರು ಇವುಗಳನ್ನು ದಿನನಿತ್ಯದ ಜೀವನದಲ್ಲಿ ಬಳಸಿ, ತಮ್ಮ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಂಡಿರುತ್ತಾರೆ.
ಆದರೆ ಶುಂಠಿ ಮತ್ತು ತುಳಸಿ ನೀರನ್ನು ಸೇವಿಸುವುದರಿಂದ ತುಂಬಾ ಒಳ್ಳೆಯದು, ಇದನ್ನು ದಿನನಿತ್ಯ ಕುಡಿಯಲು ಅಭ್ಯಾಸ ಮಾಡಿಕೊಳ್ಳಬೇಕು. ಬೆಳಿಗ್ಗೆ ಶುಂಠಿ ಮತ್ತು ತುಳಸಿ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಇವೆರಡೂ ಅನೇಕ ಔಷಧೀಯ ಗುಣಗಳನ್ನು ಹೊಂದಿವೆ
ತುಳಸಿಯಲ್ಲಿ ಆ್ಯಂಟಿ ವೈರಸ್ ಮತ್ತು ಆ್ಯಂಟಿ ಕೊಲೆಸ್ಟ್ರಾಲ್ ಗುಣಗಳಿದ್ದು, ಇದು ನಮ್ಮ ರೋಗನಿರೋಧಕ ವ್ಯವಸ್ಥೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ 1 ತಿಂಗಳ ಕಾಲ ತುಳಸಿ ಮತ್ತು ಶುಂಠಿ ನೀರನ್ನು ಕುಡಿಯುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಶುಂಠಿಯಲ್ಲಿರುವ ಜಿಂಜರಾಲ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಈ ಪಾನೀಯವನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ರೋಗಗಳನ್ನು ತಡೆಯುತ್ತದೆ. ಇದರಿಂದ ಬಾಯಿಯ ದುರ್ವಾಸನೆ ದೂರವಾಗಿ ಚರ್ಮ ಹೊಳೆಯುತ್ತದೆ.
4-5 ಒಳ್ಳೆಯ ಶುದ್ಧ ತುಳಸಿ ಎಲೆಗಳನ್ನು ತೆಗೆದುಕೊಂಡು, ಅದಕ್ಕೆ ಅರ್ಧ ಇಂಚಿನ ಶುಂಠಿಯನ್ನು ಸೇರಿಸಿ ಇದಕ್ಕೆ 1 ಲೋಟ ನೀರು ಹಾಕಿ ಕುದಿಸಬೇಕು ತದನಂತರ ಅದನ್ನು ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಇದರಿಂದ ಹಲವು ಬದಲಾವಣೆಯನ್ನು ಕಾಣಬಹುದು.
Kannada online News Portal
Get Kannada Latest News on Suddishana.com
© 2023 Newbie Techy -Suddi Kshana by Newbie Techy.
© 2023 Newbie Techy -Suddi Kshana by Newbie Techy.