ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

HEALTH TIPS: ಇಂತಹ ಆರೋಗ್ಯ ಸಮಸ್ಯೆಗಳಿದ್ದರೆ ಸೋರೇಕಾಯಿ ಅಪ್ಪಿತಪ್ಪಿಯೂ ತಿನ್ನಬೇಡಿ!

On: June 28, 2024 10:21 AM
Follow Us:
---Advertisement---

ಬೆಂಗಳೂರು: ದೇಹವನ್ನು ಆರೋಗ್ಯವಾಗಿಡಲು ಹಸಿರು ತರಕಾರಿಗಳು ಬಹಳ ಮುಖ್ಯ. ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿರುವ ಅನೇಕ ಪೋಷಕಾಂಶಗಳನ್ನು ಅವು ಒಳಗೊಂಡಿರುತ್ತವೆ. ಸೋರೆಕಾಯಿ ಅಂತಹ ತರಕಾರಿಗಳಲ್ಲಿ ಒಂದಾಗಿದೆ.

ಸೋರೆಕಾಯಿ ಪಲ್ಯ, ಮಜ್ಜಿಗೆ ಸಾರು ರಾಗಿ ಮುದ್ದೆ ಅಥವಾ ಜೋಳದ ರೊಟ್ಟಿಗೆ ರುಚಿಕರವಾಗಿದೆ. ವಿಟಮಿನ್ ಸಿ, ಕಬ್ಬಿಣ, ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಫಾಸ್ಪರಸ್ ಆಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ಈ ತರಕಾರಿಯಲ್ಲಿ ಸಮೃದ್ಧವಾಗಿವೆ. ಯಾವುದೇ ಕಾಯಿಲೆ ಇಲ್ಲದವರಿಗೆ ಸೋರೆಕಾಯಿ ಆರೋಗ್ಯಕರ ಆಹಾರವಾಗಿದೆ. ಆದರೆ, ಕೆಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯದಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವವರು ಸೋರೆಕಾಯಿಯನ್ನು ತಿನ್ನಬಾರದು. ಅಂಥವರು ಅಪ್ಪಿತಪ್ಪಿಯೂ ಇದರ ಜ್ಯೂಸ್ ಕುಡಿಯಬಾರದು ಎನ್ನುತ್ತಾರೆ ಆಹಾರ ತಜ್ಞರು. ಇದರಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಇದ್ದು, ಇದು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಇನ್ನು ಲೋಬಿಪಿ ಸಮಸ್ಯೆ ಇರುವವರು ಕೂಡ ಸೋರೆಕಾಯಿಯಿಂದ ಆದಷ್ಟು ದೂರವಿರಬೇಕು.

ಏಕೆಂದರೆ ಇದರಲ್ಲಿರುವ ಪೊಟ್ಯಾಸಿಯಮ್ ಏಕಾಎಕಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ರೀತಿ ದುರ್ಬಲ ಜೀರ್ಣಾಂಗ ವ್ಯವಸ್ಥೆ ಹೊಂದಿರುವವರು ಸೋರೆಕಾಯಿ ತಿನ್ನುವುದನ್ನು ಮತ್ತು ಅದರ ರಸವನ್ನು ತೆಗೆದುಕೊಳ್ಳುವುದರಿಂದ ದೂರವಿರಬೇಕು. ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದ್ದು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅಂತಹವರು ತಿಂದರೆ ಜೀರ್ಣಾಂಗ ವ್ಯವಸ್ಥೆ ಹೆಚ್ಚು ಹಾಳಾಗುತ್ತದೆ. ಹೊಟ್ಟೆ ನೋವು, ಡಿಸ್ಪೆಪ್ಸಿಯಾ, ಮಲಬದ್ಧತೆ ಮತ್ತು ಅತಿಸಾರ ಸಮಸ್ಯೆಗಳು ಎದುರಾಗುತ್ತದೆ. ಅಷ್ಟೇ ಅಲ್ಲ, ಕರುಳಿನಲ್ಲಿ ಹುಣ್ಣು ಇರುವವರು ಸೋರೇಕಾಯಿಯನ್ನು ತಿನ್ನಬಾರದು ಎನ್ನುತ್ತಾರೆ ಆರೋಗ್ಯ ತಜ್ಞರು. ಜಠರ ಮತ್ತು ಕರುಳಿನಲ್ಲಿ ಊತ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಹೃದ್ರೋಗದಿಂದ ಬಳಲುತ್ತಿರುವವರಿಗೆ ಸೋರೇಕಾಯಿ ಒಳ್ಳೆಯದಲ್ಲ. ಅಂತಹವರು ಈ ಸೋರೆಕಾಯಿ ಮತ್ತು ಸೋರೆಕಾಯಿ ರಸವನ್ನು ತುಂಬಾ ಮಿತವಾಗಿ ಸೇವಿಸಬೇಕು. ಅದೇನೇ ಇರಲಿ, ಅತಿಯಾಗಿ ತಿಂದರೆ ಆರೋಗ್ಯಕ್ಕೆ ಲಾಭವಾಗುವ ಬದಲು ಆರೋಗ್ಯ ಸಮಸ್ಯೆಗಳು ಬರಬಹುದು ಎಂದು ವೈದ್ಯರು ಸಾರಿ ಸಾರಿ ಹೇಳುತ್ತಿದ್ದಾರೆ. ಇಟಾಲಿಯನ್ ಬಾಯ್‌ಫ್ರೆಂಡ್‌ ಜೊತೆ ಬ್ರೇಕ್‌ಅಪ್ ಮಾಡಿಕೊಂಡಿದ್ದೇಕೆ? ನಿಜವಾದ ಕಾರಣ ಬಿಚ್ಚಿಟ್ಟ ಪೌಲೋಮಿ ದಾಸ್

Join WhatsApp

Join Now

Join Telegram

Join Now

Leave a Comment