ಮಸಾಲೆಗಳ ರಾಣಿ ಏಲಕ್ಕಿಗೆ ಆಯುರ್ವೇದದಲ್ಲಿ ವಿಶೇಷ ಮಹತ್ವವಿದ್ದು ಇದು ಅನೇಕ ರೋಗಗಳಿಗೆ ಉತ್ತಮ
ಮದ್ದು ಎಂದು ನಂಬಲಾಗಿದೆ.
ಏಲಕ್ಕಿಯಲ್ಲಿ ಉತ್ಕರ್ಷಣ ನಿರೋಧಕ ಶಕ್ತಿ ಇರುವುದರಿಂದ ಇದರ ಸೇವನೆಯಿಂದ ಜ್ವರ, ಕೆಮ್ಮು ಮತ್ತು ಶೀತಗಳನ್ನು ತಡೆಗಟ್ಟಬಹುದು. ಏಲಕ್ಕಿಯು ರಕ್ತದೊತ್ತಡವನ್ನು ನಿಯಂತ್ರಿಸಿ ರಕ್ತ ಪರಿಚಲನೆ ಸುಧಾರಿಸುವ ಮೂಲಕ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
ಏಲಕ್ಕಿ ಜೊತೆಗೆ ಕಲ್ಲುಸಕ್ಕರೆ ಸೇವನೆ ಮಾಡುವುದರಿಂದ ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಹಾಗೂ ಮನಸ್ಥಿತಿಯನ್ನು ಸಮತೋಲನದಲ್ಲಿ ಇರಿಸುತ್ತದೆ.