ರಾತ್ರಿ ಮಲಗುವ ಮುನ್ನ ಹಲ್ಲುಜ್ಜಿದರೂ ಬೆಳಗ್ಗೆ ಬಾಯಿ ಕೆಟ್ಟ ವಾಸನೆ ಬರುತ್ತದೆ. ಕಾರಣ ಬಾಯಿಯಲ್ಲಿ ಯಾವಾಗಲೂ ಬ್ಯಾಕ್ಟೀರಿಯಾ ಇರುತ್ತದೆ.
ಇದಕ್ಕೆ ಮನೆಯಲ್ಲೇ ಇದೆ ಪರಿಹಾರ, ಹೌದು, ಊಟದ ನಂತರ ಒಂದು ಲೋಟ ನೀರಿಗೆ
ನಿಂಬೆರಸ ಬೆರೆಸಿ ಕುಡಿಯುವುದರಿಂದ ಬಾಯಿ ದುರ್ವಾಸನೆ ಹೋಗಲಾಡಿಸುತ್ತದೆ. ಊಟವಾದ ಮೇಲೆ ವೀಳ್ಯದೆಲೆ
ಹಾಕಿಕೊಳ್ಳಿ, ಇದು ದುರ್ವಾಸನೆ ಹೋಗಲಾಡಿಸುತ್ತದೆ. ಏಲಕ್ಕಿಯನ್ನು ಅಗಿಯುವುದರಿಂದಲೂ ಬಾಯಿಯ ವಾಸನೆ
ಕಡಿಮೆ ಆಗುತ್ತದೆ. ಹಲ್ಲಿನ ಸಮಸ್ಯೆಗಳಲ್ಲಿ ನೋವನ್ನು ನಿವಾರಿಸಲು ಲವಂಗವನ್ನು ಸಹ ಬಳಸಬಹುದು.