ಒಂದು ಕಾಲದಲ್ಲಿ ರಾಗಿ ಬಡವರ ಆಹಾರವಾಗಿದ್ದರೆ, ಅನ್ನವು ಸಿರಿವಂತರ ಆಹಾರವಾಗಿತ್ತು. ಕಾಲ ಬದಲಾದಂತೆ ಅನೇಕ ಕಾಯಿಲೆಗಳು ವಕ್ಕರಿಸಿದವು.
ಹೀಗಾಗಿ ಸಿರಿವಂತರಿಗೆ ರಾಗಿಯ ಮಹತ್ವ ಅರಿವಾಗಿ, ಇಂದು ಎಲ್ಲರೂ ಸೇವಿಸುವಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಈ ಕಾಯಿಲೆಗೆ ರಾಗಿ ಸೇವನೆಯು ಅತ್ಯುತ್ತಮ
ಆಹಾರ ಎಂದೇ ಪರಿಗಣಿಸಲಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಕೆಯನ್ನು ನಿಯಂತ್ರಿಸುವುದರಿಂದ ಹಿಡಿದು, ರಾಗಿಯು
ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.