ನಮ್ಮ ಜೀವನದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಕೆಲಸದ ಒತ್ತಡದಿಂದಾಗಿ,ಜೀವನಶೈಲಿ ಕೂಡಾ ಬದಲಾಗುತ್ತಲೇ ಇದೆ. ಜೀವನ ಶೈಲಿ ಬದಲಾಗುತ್ತಿದೆ ಎನ್ನುವುದಕ್ಕಿಂತ ದಿನೇ ದಿನೇ ಜೀವನಶೈಲಿ ಬಿಗಡಾಯಿಸುತ್ತಿದೆ ಎನ್ನಬಹುದು. ಯಾಕೆಂದರೆ ನಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಸರಿಯಾದ ಆಹಾರ ಕ್ರಮವನ್ನು ಅನುಸರಿಸುವುದು ಸಾಧ್ಯವಾಗುವುದಿಲ್ಲ.ವ್ಯಾಯಾಮಕ್ಕೆ ಸಮಯ ಇಲ್ಲ.
ಒಟ್ಟಿನಲ್ಲಿ ಆಧುನಿಕ ಜೀವನಶೈಲಿ ಹಲವಾರು ರೋಗಗಳತ್ತ ನಮ್ಮನ್ನು ನೂಕುತ್ತಿದೆ. ಈ ಕಾಯಿಲೆಗಳಲ್ಲಿ ಮಧುಮೇಹವೂ ಒಂದು.ಸರಿಯಾದ ಆಹಾರ ವ್ಯಾಯಾಮದ ಕೊರತೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಕೆ ಕಂಡು ಬರುತ್ತಿದೆ.
ಆಹಾರವನ್ನು ಚೆನ್ನಾಗಿ ಅಗಿಯುವುದು :
ಆಹಾರವನ್ನು ಸಂಪೂರ್ಣವಾಗಿ ಅಗಿಯುವುದು
ಜೀರ್ಣಕ್ರಿಯೆಯನ್ನು
ಸುಧಾರಿಸುವುದಲ್ಲದೆ ಮಧುಮೇಹವನ್ನು ನಿರ್ವಹಿಸುವಲ್ಲಿಯೂ ಸಹಾಯ ಮಾಡುತ್ತದೆ.ಆಹಾರವನ್ನು ಸರಿಯಾಗಿ ಅಗಿದು ತಿನ್ನುವುದರಿಂದ ರಕ್ತದ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
:
ಈ ಬೀಜದ ಚಟ್ನಿ ಸೇವಿಸಿದರೆ ಹೈ ಕೊಲೆಸ್ಟ್ರಾಲ್ ಸುಲಭವಾಗಿ ಕರಗುವುದು ! ಹಾರ್ಟ್ ಬ್ಲೋಕೆಜ್ ಇದ್ದರೂ ತೆರವಾಗುವುದು
ಸರಿಯಾದ ಸಮಯಕ್ಕೆ ಆಹಾರ ಸೇವನೆ :
ಸರಿಯಾದ ಸಮಯಕ್ಕೆ ಆಹಾರ ಸೇವಿಸಬೇಕು. ಯಾವಾಗ ಸಮಯ ಸಿಗುತ್ತದೆಯೂ ಆಗ ಆಹಾರ ಸೇವಿಸುತ್ತೇವೆ ಎನ್ನುವ ಅಭ್ಯಾಸ ಒಳ್ಳೆಯದಲ್ಲ.ಇದು
ಬ್ಲಡ್ ಶುಗರ್
ಮೇಲೆ ನೇರ ಪರಿಣಾಮ ಬೀರುತ್ತದೆ. ಆರೋಗ್ಯಕರ ಆಹಾರ ಸೇವನೆ ಜೊತೆಗೆ, ಸಮಯಕ್ಕೆ ಸರಿಯಾಗಿ ತಿನ್ನುವುದು ಸಹ ಬಹಳ ಮುಖ್ಯ.
ಸರಿಯಾದ ಸಮಯಕ್ಕೆ ಸರಿಯಾದ ಆಹಾರ :
ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದರ ಜೊತೆಗೆ ಸಮಯಕ್ಕೆ ತಕ್ಕಂತೆ ಸರಿಯಾದ ಆಹಾರವನ್ನು ಸೇವಿಸುವುದು ಕೂಡಾ ಮುಖ್ಯ.ಬೆಳಿಗ್ಗೆ ಮತ್ತು ಮಧ್ಯಾಹ್ನ ಮೊಸರು,ಸಲಾಡ್ ಮತ್ತು ಹಣ್ಣುಗಳನ್ನು ಸೇವಿಸಬೇಕು.ರಾತ್ರಿ ಲಘು ಆಹಾರಗಳಾದ ಬೇಳೆಕಾಳುಗಳು,ಬೇಯಿಸಿದ ತರಕಾರಿಗಳು,ಮೊಟ್ಟೆ,ಬ್ರೌನ್ ರೈಸ್ ಮತ್ತು ಓಟ್ ಮೀಲ್ ಸೇವಿಸಬಹುದು.
ಆಹಾರದೊಂದಿಗೆ ಹೆಚ್ಚು ನೀರು ಕುಡಿಯಬೇಡಿ :
ಮಧುಮೇಹ ರೋಗಿಗಳಿಗೆ ದಿನವಿಡೀ ಸಾಕಷ್ಟು ನೀರು ಕುಡಿಯಬೇಕು.ಆದರೆ ಆಹಾರವನ್ನು ಸೇವಿಸುವುದರ ಮಧ್ಯೆ, ನೀರು ಕುಡಿಯಬಾರದು.ಆಹಾರದೊಂದಿಗೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆ ನಿಧಾನವಾಗುತ್ತದೆ. ಇದು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಹೆಚ್ಚು ಮಾಡುವ ಅಪಾಯ ಇರುತ್ತದೆ.
: ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗಬೇಕಾದರೆ ಮೊಸರಿಗೆ ಈ ಹಣ್ಣಿನ ರಸ ಬೆರೆಸಿ ಹಚ್ಚಿ! ತಿರುಗಿ ಬರುವುದೇ ಇಲ್ಲ ವೈಟ್ ಹೇರ್
ಅತಿಯಾಗಿ ತಿನ್ನಬೇಡಿ :
ಅತಿಯಾಗಿ ತಿನ್ನುವುದು ಆರೋಗ್ಯಕ್ಕೆ ಹಲವಾರು ಹಾನಿ ಉಂಟುಮಾಡಬಹುದು. ಮಧುಮೇಹ ಅಥವಾ ರಕ್ತದೊತ್ತಡದ ರೋಗಿಯಾಗಿದ್ದರೆ, ಅತಿಯಾಗಿ ತಿನ್ನುವುದು ನಿಮ್ಮ ರೋಗದ ಲಕ್ಷಣಗಳನ್ನು ತ್ವರಿತವಾಗಿ ಹೆಚ್ಚಿಸಬಹುದು.