ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಈ ಆಹಾರಗಳನ್ನು ಸೇವಿಸಿ; ನಿಮ್ಮ ರಕ್ತದಲ್ಲಿರುವ ಪ್ಲೇಟ್ಲೆಟ್ʼಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ..!

On: August 7, 2024 10:43 AM
Follow Us:
---Advertisement---

ಡೆಂಗ್ಯೂ ಜ್ವರ, ಚಿಕನ್ ಗುನ್ಯಾ, ಮಲೇರಿಯಾ ಇತ್ಯಾದಿಗಳಿಂದ ಪಾರಾಗಬೇಕಾದರೆ ಮೊದಲು ನಮ್ಮ ದೇಹದ ರೋಗ – ನಿರೋಧಕ ಶಕ್ತಿಯ ಸ್ವರೂಪವಾಗಿರುವ ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ ಲೆಟ್ ಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಬೇಕು. ಅದಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ಸೇವಿಸಿ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಕಡಿಮೆ ಪ್ಲೇಟ್‌ಲೆಟ್‌ನ ಲಕ್ಷಣಗಳು

1 ಮೂಗಿನಿಂದ ರಕ್ತ ಸೋರುವುದು

2 ಹಲ್ಲಿನ ವಸಡುಗಳಲ್ಲಿ ರಕ್ತ ಕಾಣಿಸುವುದು

3 ಮೂತ್ರದಲ್ಲಿ ರಕ್ತ ಕಂಡು ಬರುವುದು

4 ಋತುಚಕ್ರದಲ್ಲಿ ವಿಪರೀತ ರಕ್ತ ಸ್ರಾವ ಉಂಟಾಗುವುದು

5 ಚರ್ಮದ ಮೇಲೆ ಅಲ್ಲಲ್ಲಿ ದದ್ದುಗಳು ಕಂಡು ಬರುವುದು

6 ಗಾಯ ಉಂಟಾದರೆ ವಾಸಿ ಆಗಲು ಬಹಳಷ್ಟು ಸಮಯ ತೆಗೆದುಕೊಳ್ಳುವುದು

7 ಮಲದಲ್ಲಿ ರಕ್ತ ಬೀಳುವುದು

8 ವಾಂತಿಯಲ್ಲಿ ರಕ್ತ ಬರುವುದು

9 ದೇಹದ ಒಳಗೆ ವಿಪರೀತ ರಕ್ತಸ್ರಾವ ಉಂಟಾಗುವುದು.

ಇದರಿಂದ ಮೆದುಳಿನಲ್ಲಿ ಕೂಡ ರಕ್ತ ಸೋರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ವ್ಯಕ್ತಿಗೆ ಆಗಾಗ ತಲೆ ನೋವು ಕಂಡು ಬರುತ್ತದೆ. ಯಾವ ಆಹಾರ ಸೇವಿಸಬೇಕು? ವೈದ್ಯರು ನಿಮ್ಮ ರಕ್ತ ಪರೀಕ್ಷೆ ಮಾಡಿ ಪ್ಲೇಟ್ಲೆಟ್ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಹೇಳಿದರೆ ನೀವು ಔಷಧದ ಜೊತೆಗೆ ಈ ಕೆಳಗಿನ ಆಹಾರ ಪದಾರ್ಥಗಳನ್ನು ಸೇವಿಸಬೇಕು.​ವಿಟಮಿನ್ ಎ ಇರುವ ಆಹಾರಗಳು (Vitamin A) ಮನುಷ್ಯನ ದೇಹದಲ್ಲಿ ಪ್ಲೇಟ್ಲೆಟ್ ಸಂಖ್ಯೆಗಳನ್ನು ಆರೋಗ್ಯಕರವಾಗಿ ಹೆಚ್ಚು ಮಾಡುವಲ್ಲಿ ವಿಟಮಿನ್ ಎ ಅಂಶ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಪ್ರೋಟೀನ್ ಅಂಶವನ್ನು ಹೆಚ್ಚು ಮಾಡುವ ಪೌಷ್ಟಿಕ ಸತ್ವ ಎಂದು ಕೂಡ ವಿಟಮಿನ್ ಎ ಅಂಶವನ್ನು ಕರೆಯುತ್ತಾರೆ. ದೇಹದಲ್ಲಿ ಪ್ರೋಟೀನ್ ಅಂಶ ಹೆಚ್ಚಾದಷ್ಟು ಆರೋಗ್ಯಕರ ಜೀವಕೋಶಗಳ ಬೆಳವಣಿಗೆ ಮತ್ತು ವಿಭಜನೆ ಹೆಚ್ಚಾಗುತ್ತದೆ ಇದರಿಂದ ದೇಹದಲ್ಲಿ ಪ್ಲೇಟ್ಲೆಟ್ ಗಳ ಸಂಖ್ಯೆ ಕ್ರಮೇಣವಾಗಿ ಹೆಚ್ಚಾಗುತ್ತದೆ. ವಿಟಮಿನ್ ಎ ಅಂಶ ಹೆಚ್ಚಿರುವ ಆಹಾರಗಳು ಎಂದರೆ ಕ್ಯಾರೆಟ್, ಕುಂಬಳಕಾಯಿ, ಕೇಲ್ ಮತ್ತು ಸಿಹಿ ಗೆಣಸು. ಫೋಲೆಟ್ ಅಂಶ ಇರುವ ಆಹಾರಗಳು (Folate)  ಒಬ್ಬ ವ್ಯಕ್ತಿಯ ದೇಹದಲ್ಲಿ ಫೋಲೆಟ್ ಅಂಶ ಕಡಿಮೆ ಆದರೆ, ಅದು ನೇರವಾಗಿ ಆತನ ರಕ್ತದಲ್ಲಿ ಸೇರಿರುವ ಪ್ಲೇಟ್ಲೆಟ್ ಗಳ ಸಂಖ್ಯೆಯ ಮೇಲೆ ಪ್ರಭಾವ ಬೀರುತ್ತದೆ.

ಹಾಗಾಗಿ ದೇಹದಲ್ಲಿ ಜೀವಕೋಶಗಳ ಬೆಳವಣಿಗೆಯನ್ನು ಹೆಚ್ಚಿಸಲು ವಿಟಮಿನ್ ‘ಬಿ9’ ಅಥವಾ ಫೋಲೆಟ್ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿರುವ ಆಹಾರ ಸೇವನೆ ಮಾಡಬೇಕು. ಇದು ಕ್ರಮೇಣವಾಗಿ ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚು ಮಾಡುತ್ತದೆ ಫೋಲೆಟ್ ಅಂಶ ಹೆಚ್ಚಿರುವ ಆಹಾರಗಳು ಎಂದರೆ ಕಿತ್ತಳೆ ಹಣ್ಣಿನ ಜ್ಯೂಸ್, ಪಾಲಕ್ ಸೊಪ್ಪು, ಆಸ್ಪರಾಗಸ್ ಮತ್ತು ಇನ್ನಿತರ ಹಸಿರು ಎಲೆ – ತರಕಾರಿಗಳು.​ವಿಟಮಿನ್ ಕೆ ಇರುವ ಆಹಾರಗಳು (Vitamin K) ಪ್ಲೇಟ್ಲೆಟ್ ಸಂಖ್ಯೆಗಳನ್ನು ಹೆಚ್ಚು ಮಾಡುವಲ್ಲಿ ವಿಟಮಿನ್ ಕೆ ಅಂಶವನ್ನು ಒಳಗೊಂಡ ಆಹಾರ ಪದಾರ್ಥಗಳ ಪ್ರಭಾವ ಇರುತ್ತದೆ. ಏಕೆಂದರೆ ಇವುಗಳು ಕೂಡ ದೇಹದಲ್ಲಿ ಜೀವಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ.

ಅಷ್ಟೇ ಪ್ರಮಾಣದಲ್ಲಿ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತವೆ. ವಿಟಮಿನ್ ‘ಕೆ’ ಅಂಶ ಹೆಚ್ಚಾಗಿರುವ ಆಹಾರಗಳು ಎಂದರೆ ಕೋಳಿ ಮೊಟ್ಟೆ, ಹಸಿರು – ಎಲೆ ತರಕಾರಿಗಳು, ಲಿವರ್, ಮಾಂಸಾಹಾರ, ಎಲೆ ಕೋಸು, ಪಾರ್ಸ್ಲಿ, ಕೇಲ್ ಇತ್ಯಾದಿ.​ವಿಟಮಿನ್ ಬಿ12 ಇರುವ ಆಹಾರಗಳು (Vitamin B12) ವಿಟಮಿನ್ ಬಿ12 ಅಂಶ ನಿಮ್ಮ ರಕ್ತದ ಜೀವ ಕೋಶಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳುವುದು ಮಾತ್ರವಲ್ಲದೆ ನಿಮ್ಮ ದೇಹದಲ್ಲಿ ಎಂದಿಗೂ ಪ್ಲೇಟ್ಲೆಟ್ ಸಂಖ್ಯೆ ಕ್ಷೀಣಿಸದಂತೆ ನಿಮ್ಮನ್ನು ಕಾಪಾಡುತ್ತದೆ. ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ವಿಟಮಿನ್ ಬಿ12 ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ಇದರ ಜೊತೆಗೆ ನಿಮ್ಮ ಆರೋಗ್ಯಕ್ಕೆ ಸರಿಹೊಂದುವಂತಹ ವಿಟಮಿನ್ ಬಿ12 ಔಷಧಿಯ ಪೂರಕಗಳನ್ನು ವೈದ್ಯರಿಂದ ಕೇಳಿ ಪಡೆದು ಸೇವಿಸುವುದು ಒಳ್ಳೆಯದು. ಹೆಚ್ಚಾಗಿ ನೀವು ಸೇವಿಸುವ ಕೋಳಿ ಮೊಟ್ಟೆ, ಹಾಲು ಮತ್ತು ಬೆಣ್ಣೆಯಲ್ಲಿ ವಿಟಮಿನ್ ಬಿ12 ಅಂಶ ಹೆಚ್ಚಿರುತ್ತದೆ. ಕಬ್ಬಿಣದ ಅಂಶ (Iron) ನಮ್ಮ ದೇಹದಲ್ಲಿ ಯಾವುದೇ ಕಾರಣಕ್ಕೂ ಕಬ್ಬಿಣದ ಅಂಶದ ಕೊರತೆ ಉಂಟಾಗಬಾರದು.

ಇದರ ಕೊರತೆ ಆರೋಗ್ಯಕರ ಜೀವಕೋಶಗಳನ್ನು ನಾಶ ಪಡಿಸುವುದು ಮಾತ್ರವಲ್ಲದೆ ಅನೀಮಿಯಾ ಸಮಸ್ಯೆಯನ್ನು ತಂದೊಡ್ಡುತ್ತದೆ. ಹಾಗಾಗಿ ಕುಂಬಳಕಾಯಿ ಬೀಜ, ದಾಳಿಂಬೆ ಬೀಜ, ಬೇಳೆ ಕಾಳುಗಳು, ಹಸಿರು – ಎಲೆ ತರಕಾರಿಗಳು ಹೆಚ್ಚಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ನಿಮಗೆ ಎಂದಿಗೂ ಕಬ್ಬಿಣದ ಅಂಶದ ಕೊರತೆ ಉಂಟಾಗುವುದಿಲ್ಲ.​ವಿಟಮಿನ್ ಸಿ ಇರುವ ಆಹಾರಗಳು (Vitamin C) ವಿಟಮಿನ್ ಸಿ ಅಂಶ ನಿಮ್ಮ ದೇಹದಲ್ಲಿ ಈಗಾಗಲೇ ಇರುವ ಪ್ಲೇಟ್ಲೆಟ್‌ಗಳನ್ನು ಚೆನ್ನಾಗಿ ಕೆಲಸ ಮಾಡುವಂತೆ ಉತ್ತೇಜಿಸುತ್ತವೆ ಮತ್ತು ನಿಮ್ಮ ರೋಗ – ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ಲೇಟ್ಲೆಟ್‌ಗಳ ಸಂಖ್ಯೆಗಳನ್ನು ಕೂಡ ಹೆಚ್ಚು ಮಾಡುತ್ತವೆ. ಮಾವಿನಕಾಯಿ, ಮಾವಿನಹಣ್ಣು, ಬ್ರೊಕೋಲಿ, ಪೈನಾಪಲ್, ಟೊಮ್ಯಾಟೋ, ದಪ್ಪ ಮೆಣಸಿನಕಾಯಿ, ಹೂಕೋಸು, ನೆಲ್ಲಿಕಾಯಿ ಅಥವಾ ಬೆಟ್ಟದ ನೆಲ್ಲಿಕಾಯಿ ಇತ್ಯಾದಿಗಳಲ್ಲಿ ವಿಟಮಿನ್ ಸಿ ಹೆಚ್ಚಾಗಿ ಇರುತ್ತದೆ. ಈ ಮೇಲಿನ ತರಕಾರಿಗಳ ಸಲಾಡ್ ಆಗಾಗ ಸೇವಿಸುವುದರಿಂದ ಕೂಡ ನಿಮಗೆ ವಿಟಮಿನ್ ಸಿ ಹೆಚ್ಚಾಗಿ ದೊರಕುತ್ತದೆ.

Join WhatsApp

Join Now

Join Telegram

Join Now

Leave a Comment