ಬೆಂಗಳೂರು / ದೆಹಲಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಇತ್ತೀಚಿನ ವಿವಾದಾತ್ಮಕ ಸ್ಟಿಂಗ್ ವೀಡಿಯೊ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ದಿನಕ್ಕೊಂದು ವಿಷಯವನ್ನು ಟಾರ್ಗೆಟ್ ಮಾಡುತ್ತಾ ಆಡಳಿತದ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಆರೋಪಿಸಿರುವ ಕುಮಾರಸ್ವಾಮಿ, ಸ್ಟಿಂಗ್ ಸಂಚುಕೋರರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾತಿನ ಚಪಲ ಮತ್ತು ಪ್ರಚಾರದ ಹಪಾಹಪಿಯಿಂದಾಗಿ ರಾಜ್ಯದ ಆಡಳಿತ ಹಳಿತಪ್ಪಿದೆ ಎಂದು ಆರೋಪಿಸಿರುವ ಎಚ್‌ಡಿಕೆ, ಕೆಪಿಎಸ್ಸಿ ಅವ್ಯವಹಾರಗಳ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಹಾಗೂ ಖರ್ಗೆ ಕುಟುಂಬದ ರಾಜಕೀಯ ನಡೆಗಳ ಬಗ್ಗೆಯೂ ತೀವ್ರ ವಾಸಿಯಾದ ಟೀಕೆಗಳನ್ನು ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಸರ್ಕಾರದ ಒಳಜಗಳ ಹಾಗೂ ಆಂತರಿಕ ರಾಜಕೀಯದ ಬಗ್ಗೆ ಹಲವು ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಸ್ಟಿಂಗ್ ಸಂಚುಕೋರರ ರಕ್ಷಣೆ ಆರೋಪ: ಸ್ಟಿಂಗ್ ಶೂಟಿಂಗ್ ಮಾಡಿದ ಪಾತಕಿಗಳನ್ನು ಮತ್ತು ಪಿನ್ ರಕ್ಷಕರನ್ನು ಬೆಂಬಲಿಸುತ್ತಿರುವ ಪ್ರಿಯಾಂಕ್ ಖರ್ಗೆ ಅವರ ಪಾತ್ರವೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಆಡಳಿತ ವೈಫಲ್ಯ ಹಾಗೂ ಕೆಪಿಎಸ್ಸಿ ಕೋಲಾಹಲ: ಮಿದುಳು, ನಾಲಿಗೆ ಹಾಗೂ ವಿವೇಕ ಕಳೆದುಕೊಂಡಿರುವ ಸಚಿವರು ರಾಜ್ಯದ ಆಡಳಿತಕ್ಕೆ ಗ್ರಹಣ ಹಿಡಿಸಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
ರಾಜಕೀಯ ಷಡ್ಯಂತ್ರದ ವಾಗ್ದಾಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ಖರ್ಗೆ ಕುಟುಂಬ ಮತ್ತು ಹೈಕಮಾಂಡ್ ಕುಮ್ಮಕ್ಕಿನಿಂದಲೇ ಒಳರಾಜಕೀಯ ನಡೆಯುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಕನ್ನಡ ಸಮ್ಮೇಳನ ಹಾಗೂ ವೈಯಕ್ತಿಕ ಟೀಕೆಗಳ ಕುರಿತು ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ನಡವಳಿಕೆ ಮತ್ತು ನಿಯತ್ತಿಲ್ಲದೆ ಸ್ಟಿಂಗ್ ಸಂಚುಕೋರರ ಜೊತೆ ಶಾಮೀಲಾಗಿರುವವರ ಯೋಗ್ಯತೆಯನ್ನು ಕಾಲವೇ ನಿರ್ಣಯಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.





Leave a comment