ಬ್ರಿಸ್ಬೇನ್ ಗಾಬಾದಲ್ಲಿ ನಡೆದ ಬಾರ್ಡ್ರ್ ಗವಾಸ್ಕರ್ ಟ್ರೋಫಿ ಮೂರನೇ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರು ಮತ್ತೋಮ್ಮೆ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಡುತ್ತಿರುವ ರೋಹಿತ್ ದೊಡ್ಡ ಮೊತ್ತ ಕಲೆಹಾಕುವಲ್ಲಿ ಮತ್ತೊಮ್ಮೆ ವಿಫಲವಾಗಿದ್ದಾರೆ, 27ಎಸೆತಗಳಲ್ಲಿ ಎರಡು ಬೌಂಡರಿ ಮುಖೇನ ಕೇವಲ 10ಗಳಿಸುವಲ್ಲಿ ಶಕ್ತರಾದರು, ನಂತರ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ವಿಕೆಟ್ ಒಪ್ಪಿಸುವ ಮುಖೇನ ಪೆವಿಲಿಯನ್ ದಾರಿ ಹಿಡಿದ ರೋಹಿತ್ ತಮ್ಮ ಕೈಗ್ಲೌಸ್ ಗಳನ್ನು ಎಸೆದ ಪರಿಣಾಮ ಎರಡು ಗ್ಲೌಸ್ ಗಳು ಬುಲೆಟಿನ್ ಬೋರ್ಡ್ ಹಿಂದೆ ಬಿದ್ದಿದೆ, ಇದರಿಂದ ಅಭಿಮಾನಿಗಳು, ಕ್ರಿಕೆಟ್ ಪ್ರೇಮಿಗಳು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.