Home ದಾವಣಗೆರೆ ಕೋಚಿಂಗ್ ಇಲ್ಲ, ಚಾಟ್‌ಜಿಪಿಟಿ ಬಳಕೆ: ಹರಿಯಾಣ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 5ನೇ ರ್ಯಾಂಕ್ ಪಡೆದ ಹಿಸಾರ್‌ನ ಛಾವಿ ಸರ್ದಾನ ಯಶೋಗಾಥೆ!
ದಾವಣಗೆರೆನವದೆಹಲಿಬೆಂಗಳೂರು

ಕೋಚಿಂಗ್ ಇಲ್ಲ, ಚಾಟ್‌ಜಿಪಿಟಿ ಬಳಕೆ: ಹರಿಯಾಣ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 5ನೇ ರ್ಯಾಂಕ್ ಪಡೆದ ಹಿಸಾರ್‌ನ ಛಾವಿ ಸರ್ದಾನ ಯಶೋಗಾಥೆ!

Share
ಚಾಟ್‌ಜಿಪಿಟಿ
Share

ಹಿಸಾರ್: ಯಾವುದೇ ದುಬಾರಿ ತರಬೇತಿ ಪಡೆಯದೆ, ಕೇವಲ ಸ್ವಯಂ ಅಧ್ಯಯನ ಹಾಗೂ ಆಧುನಿಕ ತಂತ್ರಜ್ಞಾನವಾದ ಚಾಟ್‌ಜಿಪಿಟಿ (ChatGPT) ಸಹಾಯದಿಂದ ಹರಿಯಾಣ ಸಿವಿಲ್ ಸರ್ವೀಸಸ್ (HCS) ಪರೀಕ್ಷೆಯಲ್ಲಿ 23 ವರ್ಷದ ಯುವತಿ ಛಾವಿ ಸರ್ದಾನ 5ನೇ ರ‍್ಯಾಂಕ್ ಪಡೆದು ಇತಿಹಾಸ ಸೃಷ್ಟಿಸಿದ್ದಾರೆ.

ಹಿಸಾರ್‌ನ ಡೋಗ್ರಾನ್ ಮೊಹಲ್ಲಾದ ನಿವಾಸಿಯಾಗಿರುವ ಇವರು, ತಮ್ಮ ಕುಟುಂಬದಿಂದ ಸರ್ಕಾರಿ ಅಧಿಕಾರಿಯ ಹುದ್ದೆ ಅಲಂಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಟಿಯಾಲದಲ್ಲಿ BA LLB ಪದವಿ ಪೂರ್ಣಗೊಳಿಸಿದ ಛಾವಿ, ಕಾನೂನು ಅಧ್ಯಯನದ ಜೊತೆಗೆ ಸಿವಿಲ್ ಸರ್ವೀಸಸ್ ಕನಸು ಕಂಡು ದಿನಕ್ಕೆ 8 ಗಂಟೆಗಳ ಕಾಲ ಕಠಿಣ ಪರಿಶ್ರಮ ವಹಿಸಿದ್ದರು.

ಪರೀಕ್ಷೆಯ ಆರಂಭಿಕ ಹಂತದಲ್ಲಿ ಸುಮಾರು 60,000ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದು, ವಿವಿಧ ಹಂತಗಳನ್ನು ದಾಟಿ ಅಕ್ಟೋಬರ್ 3 ರಿಂದ 8ರವರೆಗೆ ಪಂಚಕುಲದಲ್ಲಿ ನಡೆದ ಸಂದರ್ಶನದಲ್ಲಿ ಛಾವಿ ಅತ್ಯುತ್ತಮ ಪ್ರತಿಭೆ ಮೆರೆದಿದ್ದಾರೆ. ಸೋಷಿಯಲ್ ಮೀಡಿಯಾದಿಂದ ಸಂಪೂರ್ಣ ದೂರವಿದ್ದು, ಓದುವಿಕೆಯಲ್ಲಿ ಸ್ಪಷ್ಟತೆಗಾಗಿ AI ಉಪಕರಣಗಳನ್ನು ಸದುಪಯೋಗಪಡಿಸಿಕೊಂಡ ಅವರ ಈ ಯಶಸ್ಸು ದೇಶಾದ್ಯಂತ ಸ್ವಯಂ ಅಧ್ಯಯನ ಮಾಡುವ ಆಕಾಂಕ್ಷಿಗಳಿಗೆ ಮಾದರಿಯಾಗಿದೆ.

ಸ್ವಯಂ ಅಧ್ಯಯನ (Self-Study): ಯಾವುದೇ ವೃತ್ತಿಪರ ಕೋಚಿಂಗ್ ಸಂಸ್ಥೆಗಳ ಸಹಾಯವಿಲ್ಲದೆ ಸ್ವಂತ ಪ್ರಯತ್ನದಿಂದಲೇ 385.80 ಅಂಕಗಳನ್ನು ಗಳಿಸಿ ಉನ್ನತ ರ‍್ಯಾಂಕ್ ಪಡೆದಿದ್ದಾರೆ.

ತಂತ್ರಜ್ಞಾನದ ಬಳಕೆ (ChatGPT Integration): ಅಧ್ಯಯನ ಮಾಡುವಾಗ ವಿಷಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ಅಗತ್ಯ ಮಾಹಿತಿ ಸಂಗ್ರಹಿಸಲು ಚಾಟ್‌ಜಿಪಿಟಿ ಬಳಸಿಕೊಂಡಿರುವುದಾಗಿ ಛಾವಿ ತಿಳಿಸಿದ್ದಾರೆ.

ದೃಢ ನಿರ್ಧಾರ ಹಾಗೂ ಶಿಸ್ತು: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಿಂದ ದೂರಳಿD, ಪ್ರತಿದಿನ ಬೆಳಗ್ಗೆ 6 ರಿಂದ 7 ಗಂಟೆಯಿಂದಲೇ ಓದು ಆರಂಭಿಸಿ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ಗುರಿ ಸಾಧಿಸಿದ್ದಾರೆ.

ಕುಟುಂಬಕ್ಕೆ ಹೆಮ್ಮೆ: ಮುದ್ರಣಾಲಯ ನಡೆಸುವ ತಂದೆ ಚಿರಾಗ್ ಸರ್ದಾನ ಹಾಗೂ ಗೃಹಿಣಿ ತಾಯಿ ಸುಮನ್ ಸರ್ದಾನ ಅವರ ಮಗಳ ಸಾಧನೆಗೆ ಇಡೀ ಹಿಸಾರ್ ನಗರದಲ್ಲಿ ಸಂಭ್ರಮ ಮನೆ ಮಾಡಿದ್ದು, ಅಭಿನತ್ಪನೆಗಳ ಮಹಾಪೂರವೇ ಹರಿದುಬರುತ್ತಿದೆ.

ಮುಂದಿನ ದಿನಗಳಲ್ಲಿ ಪಂಜಾಬ್ ಸಿವಿಲ್ ಸರ್ವೀಸಸ್ (PCS) ಹಾಗೂ UPSC ಫಲಿತಾಂಶಗಳನ್ನೂ ಎದುರು ನೋಡುತ್ತಿದ್ದು, ಹರಿಯಾಣದಲ್ಲಿ ಸಿಕ್ಕಿರುವ ಜವಾಬ್ದಾರಿಗೆ ಪ್ರಥಮ ಆದ್ಯತೆ ನೀಡುವುದಾಗಿ ಛಾವಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles