ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಆ. 29ಕ್ಕೆ ಹಳೇಕುಂದುವಾಡಕ್ಕೆ ಹಿಂದೂ “ಫೈರ್” ಬಾಂಡ್ ಹಾರಿಕಾ ಮಂಜುನಾಥ್: ಯುವಕರಲ್ಲಿ ದೇಶಭಕ್ತಿ, ಸಂಸ್ಕೃತಿ ಮೂಡಿಸುವುದು ಹೇಗೆ? ವಿಷಯದ ಬಗ್ಗೆ ದಿಕ್ಸೂಚಿ ಭಾಷಣ

On: August 28, 2025 8:21 PM
Follow Us:
ಹಿಂದೂ
---Advertisement---

SUDDIKSHANA KANNADA NEWS/ DAVANAGERE/DATE:28_08_2025

ದಾವಣಗೆರೆ: ದಾವಣಗೆರೆಯ ಹಳೇ ಕುಂದುವಾಡ ಹಿಂದೂ ಯುವ ಸೇನಾ ವತಿಯಿಂದ ಆಗಸ್ಟ್ 29ರಂದು 79ನೇ ಸ್ವಾತಂತ್ರ್ಯ ವರ್ಷ, ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಗಣೇಶ ಹಬ್ಬದ ಅಂಗವಾಗಿ ಏರ್ಪಡಿಸಿರುವ ರ್ಯಕ್ರಮದಲ್ಲಿ ಖ್ಯಾತ ವಾಗ್ಮಿ, ಹಿಂದೂ ಫೈರ್ ಬ್ರಾಂಡ್ ಹಾರಿಕಾ ಮಂಜುನಾಥ್ ಭಾಗವಹಿಸಲಿದ್ದಾರೆ.

READ ALSO THIS STORY: ವಿದ್ಯುತ್ ಪ್ರವಹಿಸಿ ದಾವಣಗೆರೆ ಸರ್ಕಾರಿ ಕಾಲೇಜಿನ ಉಪನ್ಯಾಸಕ ದುರ್ಮರಣ: ಹಬ್ಬದ ಮನೆಯಲ್ಲೀಗ ಸೂತಕ!

ಸ್ವಾತಂತ್ರ್ಯ ಹೋರಾಟದಲ್ಲಿ ವಿನಾಯಕ ಚತುರ್ಥಿ ಹಾಗೂ ಸಂಗೊಳ್ಳಿ ರಾಯಣ್ಣರ ಪಾತ್ರ ಹಾಗೂ ಯುವಕರಲ್ಲಿ ದೇಶಭಕ್ತಿ, ಸಂಸ್ಕೃತಿ ಮೂಡಿಸುವುದು ಹೇಗೆ..! ಎಂಬ ಕುರಿತಂತೆ ಅಂದು ಸಂಜೆ ಆರು ಗಂಟೆಗೆ ಹಳೇ ಕುಂದುವಾಡ ಸರ್ಕಲ್ ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರವಾಗಿರುವ ಯುವ ವಾಗ್ಮಿ, ಲೇಖಕಿ ಹಾರಿಕಾ ಮಂಜುನಾಥ್ ಭಾಷಣಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ದೇಶ ಭಕ್ತಿ, ರಾಷ್ಟ್ರ ಹಿತ, ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆಯ
ಬಗ್ಗೆ ನಿರರ್ಗಳವಾಗಿ ಮಾತನಾಡುವ ಹಾರಿಕಾ ಮಂಜುನಾಥ್ ಹಳೇ ಕುಂದುವಾಡಕ್ಕೆ ಆಗಮಿಸುತ್ತಿರುವುದು ಯುವ ಸಮುದಾಯ ಪುಳಕಿತಗೊಂಡಿದ್ದು, ದಿಕ್ಸೂಚಿ ಭಾಷಣಕ್ಕೆ ಕಾತರವಾಗಿದೆ.

ಹಾರಿಕಾ ಮಂಜುನಾಥ್ ಪರಿಚಯ:

ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಅವರ ತಂದೆ ಮಂಜುನಾಥ್ ವೃತ್ತಿಯಲ್ಲಿ ಆಟೋಚಾಲಕರು. ತಾಯಿ ರುಕ್ಮಿಣಿ ಗೃಹಿಣಿ. ಕೇವಲ 11 ವರ್ಷಕ್ಕೆ ಹಾರಿಕಾ ಮಂಜುನಾಥ್ ಸಾಧನೆ ಮೆಚ್ಚುವಂಥದ್ದು.

ಕೇವಲ ಹನ್ನೊಂದು ವರ್ಷದ ಬಾಲಕಿಯಾಗಿದ್ದಾಗಲೇ ಬೆಂಗಳೂರಿನ ವಿವಿಧ ಶಾಲೆಗಳಿಗೆ ಹೋಗಿ ಭಾಷಣ ಮಾಡುತ್ತಿದ್ದಳು. ರಸ್ತೆಗೆ ಇಳಿದು ರಿಕ್ಷಾಚಾಲಕರು, ಅಂಗಡಿಯವರಿಗೆ ಆನ್ ಲೈನ್ ನಲ್ಲಿ ವ್ಯವಹಾರ ಮಾಡುವುದು
ಹೇಗೆ ಎಂದು ಕಲಿಸುತ್ತಿದ್ದಳು. ಪ್ರಧಾನಿ ನರೇಂದ್ರ ಮೋದಿಯವರ ಕ್ಯಾಶ್ ಲೆಸ್ ಎಕಾನಮಿಯ ಲಾಭಗಳಿಂದ ಹಿಡಿದು ಸ್ವಾಮಿ ವಿವೇಕಾನಂದ, ಸೋದರಿ ನಿವೇದಿತಾ ಜೀವನ ಚರಿತ್ರೆಯ ತನಕ ವಿವಿಧ ವಿಷಯಗಳ ಮೇಲೆ ನಿರರ್ಗಳವಾಗಿ ಮಾತನಾಡುತ್ತಿದ್ದ ಈಕೆ ಆಗಲೇ ಎಲ್ಲರ ಮನಸೂರೆಗೊಂಡಾಕೆ.

ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ಅಶ್ರಫುಲ್ಲಾ ಖಾನ್ ನಂತರ ಸ್ವಾತಂತ್ರ್ಯ ಯೋಧರ ಬಗ್ಗೆ ಪುಸ್ತಕಗಳನ್ನು ಓದಿದವರು. ಇದರಲ್ಲಿರುವ ದೇಶದ ಕಿಚ್ಚಿನ, ದೇಶಕ್ಕಾಗಿ ನಡೆದ ಕೆಚ್ಚೆದೆ ಹೋರಾಟದ ಹೆಜ್ಜೆ ಗುರುತು, ದೇಶಪ್ರೇಮಕ್ಕಾಗಿ
ಪ್ರಾಣ ತ್ಯಾಗ ಮಾಡಿದವರು ಸೇರಿದಂತೆ ಎಲ್ಲಾ ವಿಚಾರಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದಳು. ಆಗಲೇ 20 ಶಾಲೆಗಳಲ್ಲಿ ಭಾಷಣ ಮಾಡಿದ್ದಾಕೆ. ಒಂದೊಂದು ಕಡೆ ಸರಾಸರಿ 20 ನಿಮಿಷ ಮಾತನಾಡುತ್ತಿದ್ದಳು.

ಹಾರಿಕಾ ಮಂಜುನಾಥ್ ಅವರ ತಂದೆ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ಅಭಿಮಾನಿ. ಚಕ್ರವರ್ತಿ ಸೂಲಿಬೆಲೆ ಮಾತುಗಳನ್ನು ಹಾರಿಕಾ ಮಂಜುನಾಥ್ ಚಿಕ್ಕವಯಸ್ಸಿನಿಂದಲೇ ಕೇಳುತ್ತಿದ್ದಳು, ತನಗೆ ಅರ್ಥವಾಗದ ವಿಷಯಗಳ
ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದಳು. ಬರಬರುತ್ತಾ ಬೆಂಗಳೂರಿನಲ್ಲಿ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮ ಎಲ್ಲೇ ನಡೆದರೂ ಆಕೆಯೂ ತಂದೆ ಜೊತೆಗೆ ಹೋಗುತ್ತಿದ್ದಳು.

ಚಕ್ರವರ್ತಿ ಸೂಲಿಬೆಲೆ ಅವರ ಪರಿಚಯವಾದ ಬಳಿಕ ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಅವಳು ಪ್ರಥಮ ಬಾರಿಗೆ ಭವ್ಯ ವೇದಿಕೆಯಲ್ಲಿ ಮಾತನಾಡಿದಳು. ನಂತರ ನಡೆದದ್ದು ಪವಾಡ. ಅವಳ ಭಾಷಣದ ಕಾರ್ಯಕ್ರಮಕ್ಕಾಗಿ ಬೇರೆ ಬೇರೆ ಶಾಲೆಗಳ ಮುಖ್ಯೋಪಾಧ್ಯಾಯರು ಆಕೆಯನ್ನು ಸಂಪರ್ಕಿಸಿದರು. ಇದು ಆಕೆ ಭಾಷಣದ ಹೆಗ್ಗುರುತು.

ಹಾರಿಕಾ ಮಂಜುನಾಥ್ ಭಾಷಣ ಮಾಡಿದ ಕಡೆ ಹೆಚ್ಚಾಗಿ ಪುಸ್ತಕಗಳೇ ಬಹುಮಾನವಾಗಿ ಸಿಗುತ್ತಿರುವುದರಿಂದ ಅದು ಅವಳ ಓದಿಗೆ ಮತ್ತು ಮುಂದಿನ ಭಾಷಣಕ್ಕೂ ಅನುಕೂಲವಾಗಿತ್ತು. ಮೈಸೂರಿನ ನೆಲೆ ಎಂಬ ಸಂಸ್ಥೆಯವರು ಕಾರ್ಯಕ್ರಮ ಮಾಡುವಾಗ ಅಶ್ವಿನಿ ಅಂಗಡಿ ಹಾಗೂ ಹಾರಿಕಾ ಅವರನ್ನು ಕರೆದಾಗ ಒಂದೇ ವೇದಿಕೆಯಲ್ಲಿ ತಮಗೆ ಅಶ್ವಿನಿ ಅವರೊಂದಿಗೆ ಭಾಷಣ ಮಾಡಲು ಸಿಕ್ಕ ಅವಕಾಶದ ಬಗ್ಗೆ ಹೇಳುವಾಗ ಹಾರಿಕಾ ಕಣ್ಣಲ್ಲಿ ಖುಷಿಯ ಮಿಂಚು ಹರಿದಿತ್ತು.

ಕೇವಲ ಭಾಷಣ ಮಾತ್ರವಲ್ಲ ಹಾರಿಕಾ ಛದ್ಮವೇಷ ಸ್ಪರ್ಧೆಯಲ್ಲಿ ರಾಣಿ ಕಿತ್ತೂರು ಚೆನ್ನಮ್ಮ ವೇಷ ಧರಿಸಿ ಸಭಿಕರನ್ನು ತನ್ನ ಪ್ರಖರ ಮಾತುಗಳಿಂದ ದಿಗ್ಘಮೆ ಮೂಡಿಸಿದ್ದಾಳೆ. ಭರತನಾಟ್ಯವನ್ನು ಕೂಡ ಕಲಿತಿರುವ ಹಾರಿಕಾ ವಿಭಿನ್ನ
ಬುದ್ಧಿವಂತಿಕೆ, ಕೌಶಲ್ಯ, ವಾಗ್ಛಾತುರ್ಯ ಸೇರಿದಂತೆ ಹಲವು ರಂಗಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿರುವ ಭಾಷಣಕಾರ್ತಿ.

ಹಿಂದೂ ವಿಚಾರ ಬಂದಾಗ ಸಿಡಿದೇಳುವ ಹಾರಿಕಾ ಮಂಜುನಾಥ್ ಭಾಷಣ ಕೇಳಲು ಸಾವಿರಾರು ಜನರು ತುದಿಗಾಲ ಮೇಲೆ ನಿಂತಿದ್ದಾರೆ. ಆಕೆ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿ, ಸನಾತನ ಹಿಂದೂ ಧರ್ಮ ಉಳಿವು, ಹೆಣ್ಣು ಮಕ್ಕಳ ರಕ್ಷಣೆ, ಅನ್ಯಧರ್ಮೀಯರ ಪಿತೂರಿ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಯಾವುದೇ ನಿರ್ಭಯವಿಲ್ಲದೇ ಮಾತನಾಡುವ ಹಾರಿಕಾ ಮಂಜುನಾಥ್ ದಾವಣಗೆರೆಗೆ ಆಗಮಿಸುತ್ತಿದ್ದು, ಹಳೇಕುಂದುವಾಡದಲ್ಲಿ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment