SUDDIKSHANA KANNADA NEWS/ DAVANAGERE/ DATE_11-07_2025
ದಾವಣಗೆರೆ: ಹರಿಹರ ಸಮೀಪದ ತುಂಗಾಭದ್ರಾ ನದಿ ಸೇತುವೆಯ ಮೇಲೆ ರೈಲಿಗೆ ತಲೆಕೊಟ್ಟು ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
READ ALSO THIS STORY: ಮತಾಂತರಗೊಂಡ ಬ್ರಾಹ್ಮಣ ಮಹಿಳೆಯರಿಗೆ ರೂ. 16 ಲಕ್ಷ, ಒಬಿಸಿಗೆ ರೂ.12 ಲಕ್ಷ, ಇತರೆ ರೂ. 10 ಲಕ್ಷ: ಇದು ಛಂಗೂರ್ ಬಾಬಾ ಫಿಕ್ಸ್ ಮಾಡಿದ್ದ ರೇಟ್!
ಹರಿಹರ ತಾಲೂಕಿನ ಗಂಗರಸಿ ಗ್ರಾಮದ ಸುವರ್ಣಮ್ಮ (60) ಹಾಗೂ ಪುತ್ರಿ ಗೌರಮ್ಮ (30) ಆತ್ಮಹತ್ಯೆಗೆ ಶರಣಾದವರು ಎಂದು ಗುರುತಿಸಲಾಗಿದೆ.
ಮೈಕ್ರೋ ಫೈನಾನ್ಸ್ ಗಳಲ್ಲಿ ಪಡೆದಿದ್ದ ಸಾಲ ಮರು ಪಾವತಿ ಮಾಡಲು ಸಾಧ್ಯವಾಗದ ಕಾರಣ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸುವರ್ಣಮ್ಮ ಮತ್ತು ಆಕೆಯ ಪುತ್ರಿ ಗೌರಮ್ಮ ಮೈಕ್ರೋ ಫೈನಾನ್ಸ್ ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದರು. ತಿಂಗಳು ಮತ್ತು ವಾರಕ್ಕೆ ಹಣದ ಕಂತು ಕಟ್ಟಬೇಕಿತ್ತು. ಇದು ಸಾಧ್ಯವಾಗುತ್ತಿರಲಿಲ್ಲ. ಕೆಲ ವರ್ಷಗಳ ಹಿಂದೆ ಸುವರ್ಣಮ್ಮ ಪತಿ ಕಳೆದುಕೊಂಡಿದ್ದರು. ಮೂವರು ಪುತ್ರಿಯರಲ್ಲಿ ಇಬ್ಬರ ಮದುವೆ ಆಗಿದೆ. ಗೌರಮ್ಮ ಮಾತ್ರ ತಾಯಿಯೊಂದಿಗೆ ಗಂಗರಸಿ ಗ್ರಾಮದಲ್ಲಿ ವಾಸವಾಗಿದ್ದರು.
ಕೂಲಿ ಕೆಲಸ ಮಾಡಿಕೊಂಡಿದ್ದ ಸುವರ್ಣಮ್ಮರಿಗೆ ಹಣಕಾಸಿನ ತೊಂದರೆಯೂಇತ್ತು. ಸುವರ್ಣಮ್ಮ ಸ್ವ ಸಹಾಯ ಸಂಘಗಳ ಮೂಲಕ 3 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿದ್ದರು. ಮಾಸಿಕ ಕಂತು ಪಾವತಿ ಕಷ್ಟಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಜುಲೈ 1 ರಂದು ಗ್ರಾಮ ತೊರೆದಿದ್ದರು. ಆದ್ರೆ, ಗುರುವಾರ ತುಂಗಾಭದ್ರಾ ನದಿ ಸೇತುವೆಯ ರೈಲಿಗೆ ತಲೆಕೊಟ್ಟು ತಾಯಿ ಮಗಳು ಆತ್ಮಹತ್ಯೆ ಮಾಡಿದ್ದಾರೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.