SUDDIKSHANA KANNADA NEWS/ DAVANAGERE/DATE:10_09_2025
ಶಿವಮೊಗ್ಗ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ಬೆಂಗಳೂರು ಇಲ್ಲಿ ಐಟಿಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
READ ALSO THIS STORY: 8 ತಿಂಗಳಲ್ಲಿ 56 ಸೈಬರ್ ಕೇಸ್, ದಾವಣಗೆರೆಯಲ್ಲಿ ರೂ. 1 ಕೋಟಿಗೂ ಹೆಚ್ಚು ವಂಚನೆ: ಸೈಬರ್ ಅಪರಾಧ ಡಿವೈಎಸ್ಪಿ ನಾಗಪ್ಪ
ಎಸ್‌ಎಸ್‌ಎಲ್‌ಸಿ + ಐಟಿಐ ಪಾಸಾದವರು ಫಿಟ್ಟರ್, ಟರ್ನರ್, ಮಷಿನಿಸ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, ಸಿಒಪಿಎ, ಕಾರ್ಪೆಂಟರ್, ಫೌಂಡ್ರಿಮನ್, ಶೀಟ್ ಮೆಟಲ್ ವರ್ಕರ್, ಟೂಲ್ ಆಂಡ್ ಡೈಮೇಕರ್, ಸಿಎನ್‌ಸಿ ಪ್ರೋಗ್ರಾಮರ್
ಕಂ ಆಪರೇಟರ್ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದು.
ಆಸಕ್ತರು ತಮ್ಮ ಎಸ್‌ಎಸ್‌ಎಲ್‌ಸಿ+ ಐಟಿಐ ಅಂಕಪಟ್ಟಿ, ಜಾತಿ /ಪಿಡಬ್ಲ್ಯೂಯಡಿಪ್ರಮಾಣ ಪತ್ರ, ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಈ ಎಲ್ಲಾ ದಾಖಲೆಗಳ ಮೂಲ ಪ್ರತಿ ಹಾಗೂ 2 ಸೆಟ್ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ, ಗುತ್ಯಪ್ಪ ಕಾಲೋನಿ, ಪಂಪಾ ನಗರ, 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿಗೆ ದಿ:26/09/2025 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ, ದೂ.ಸಂ: 08182-255293, 9380663606/ 9901914601 ನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.