ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕಿಡ್ನ್ಯಾಪ್ ಪ್ರಕರಣದ ಸಂತ್ರಸ್ತೆಯು ತನ್ನನ್ನು ಯಾರೂ ಬಲವಂತವಾಗಿ ಕರೆದೊಯ್ದಿಲ್ಲವೆಂದ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ.
ನಾಪತ್ತೆಯಾಗಿದ್ದ ಸಂತ್ರಸ್ತೆಯ ಈ ಹೇಳಿಕೆಯು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದೆ. ಈ ವಿಡಿಯೋದಲ್ಲಿ ಸಂತ್ರಸ್ತೆ, ನನ್ನನ್ನು ಯಾರೂ ಬಲವಂತವಾಗಿ ಕರೆದೊಯ್ದಿಲ್ಲ. ನನ್ನನ್ನ ಯಾರೂ ಕಿಡ್ನ್ಯಾಪ್ ಮಾಡಿಲ್ಲ. ನಾನೇ ಸಂಬಂಧಿಕರ ಮನೆಗೆ ಹೋಗಿದ್ದೆ. ನನ್ನ ಮಗ ಏನೂ ಗೊತ್ತಿಲ್ಲದಂತೆ ದೂರು ನೀಡಿದ್ದಾನೆ ಎಂದು ಹೇಳಿದ್ದಾರೆ.
ಜನ ಹಿಂಗೆ ಮಾತಾನಾಡುತ್ತಿರುವುದಕ್ಕೆ ಬೇಸರಗೊಂಡು ಸಂಬಂಧಿಕರ ಮನೆಗೆ 4 ದಿನ ಕಾಲ ಕಳೆದುಕೊಂಡು ಬರಲು ಹೋಗಿದ್ದೆ. ಆದರೆ ಇಂದು ಟಿವಿ ನೋಡಬೇಕಾದ್ರೆ ಗೊತ್ತಾಯ್ತು. ಈ ತರ ಎಲ್ಲಾ ಮಾಡ್ತಿದ್ದಾರೆ ಅಂತ. ಅದನ್ನ ನೋಡಿ ಯಾಕಪ್ಪ ಹೀಗೆಲ್ಲಾ ಮಾಡಿದ್ರು ಅಂತ ಯೋಚಿಸಿದೆ. ಆದರೆ ಯಾವ ತೊಂದ್ರೆನೂ ಈಗ ಇಲ್ವಲ್ಲ. ಯಾಕ್ ಹೀಗೆ ಮಾಡ್ತಿದ್ದಾರೆ. ಅಂತ ನಾನೇ ವಿಡಿಯೋ ಮಾಡಿಸಿದೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.