Home ಕ್ರೈಂ ನ್ಯೂಸ್ ಸ್ನೇಹಿತನ ಜೊತೆ ಮಾತನಾಡಿದ್ದಕ್ಕೆ 14 ವರ್ಷದ ಮಗಳ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ: ವಿಡಿಯೋ ಮಾಡಿದ್ದ ತಾಯಿಯೂ ಬಂಧನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಸ್ನೇಹಿತನ ಜೊತೆ ಮಾತನಾಡಿದ್ದಕ್ಕೆ 14 ವರ್ಷದ ಮಗಳ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ: ವಿಡಿಯೋ ಮಾಡಿದ್ದ ತಾಯಿಯೂ ಬಂಧನ!

Share
ತಂದೆ
Share

ಗುಜರಾತ್: ಸ್ನೇಹಿತನೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾಳೆ ಎಂಬ ಕಾರಣಕ್ಕೆ 14 ವರ್ಷದ ಸ್ವಂತ ಮಗಳ ಮೇಲೆಯೇ ತಂದೆ ಸರಣಿ ಲೈಂಗಿಕ ದೌರ್ಜನ್ಯ ಎಸಗಿದ್ದು, ತಾಯಿ ಆಕೆಯ ನಗ್ನ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿರುವ ಪೈಶಾಚಿಕ ಘಟನೆ ಗುಜರಾತ್‌ನ ಕಚ್ ಜಿಲ್ಲೆಯ ಅಂಜಾರ್ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಅಂಜಾರ್ ಪೊಲೀಸರು ಕಾಮುಕ ತಂದೆ ಹಾಗೂ ಆತನಿಗೆ ಸಾಥ್ ನೀಡಿದ ತಾಯಿಯನ್ನು ಬಂಧಿಸಿದ್ದಾರೆ.

ಘಟನೆಯ ವಿವರ:

ಅಂಜಾರ್ ಪ್ರದೇಶದಲ್ಲಿ ವಾಸಿಸುತ್ತಿರುವ ಈ ಕುಟುಂಬ ಮೂಲತಃ ಬೇರೆ ರಾಜ್ಯದವರಾಗಿದ್ದು, ಕಳೆದ ಆರು ವರ್ಷಗಳಿಂದ ಗುಜರಾತ್‌ನಲ್ಲಿ ನೆಲೆಸಿದ್ದರು. ಸೆಪ್ಟೆಂಬರ್ 14 ರಂದು ಬಾಲಕಿ ಆಗ್ರಾದಲ್ಲಿದ್ದ ತನ್ನ ಗಂಡು ಸ್ನೇಹಿತನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ತಾಯಿ ಗಮನಿಸಿದ್ದಳು. ಕೆಲಸದಿಂದ ಮನೆಗೆ ಮರಳಿದ ಪತಿಗೆ ಈ ವಿಷಯ ತಿಳಿಸಿದಾಗ, ಆಕ್ರೋಶಗೊಂಡ ತಂದೆ ಬಾಲಕಿಗೆ ತೀವ್ರವಾಗಿ ಹಲ್ಲೆ ನಡೆಸಿ, ಆಹಾರ ಮತ್ತು ನೀರು ನೀಡದೆ ಮನೆಯಲ್ಲೇ ದಿಗ್ಬಂಧನ ವಿಧಿಸಿದ್ದ.
ಬಳಿಕ ತಾಯಿಯ ಸಮ್ಮುಖದಲ್ಲೇ ತಂದೆಯು ಬಾಲಕಿಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸೆಪ್ಟೆಂಬರ್ 20, ಸೆಪ್ಟೆಂಬರ್ 29 ಮತ್ತು ಅಕ್ಟೋಬರ್ 1 ರಂದು ಈ ಅಮಾನವೀಯ ಕೃತ್ಯ ಮುಂದುವರಿದಿದೆ. ಅಕ್ಟೋಬರ್ 1 ರಂದು ನಡೆಡ ದೌರ್ಜನ್ಯದ ವೇಳೆ ತಾಯಿಯು ಬಾಲಕಿಯ ನಗ್ನ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಶೂಟ್ ಮಾಡಿಕೊಂಡಿದ್ದಾಳೆ.

ಪೊಲೀಸ್ ಸಹಾಯವಾಣಿಗೆ ಕರೆ:

ಸೆಪ್ಟೆಂಬರ್ 29 ರಂದು ಬಾಲಕಿ ತಪ್ಪಿಸಿಕೊಂಡು ಅತ್ತೆಯ ಮನೆಗೆ ತೆರಳಿ ‘112’ ತುರ್ತು ಸಹಾಯವಾಣಿಗೆ ಕರೆ ಮಾಡಲು ಯತ್ನಿಸಿದಾಗ, ಆಕೆಯ ಹೆತ್ತವರು ಫೋನ್ ಕಸಿದುಕೊಂಡು ಮತ್ತೆ ಬಂದೂಕಿನಂತೆ ಮನೆಗೆ ಕರೆತಂದು ದಿಗ್ಬಂಧನದಲ್ಲಿದ್ದರು. ಅಕ್ಟೋಬರ್ 2 ರಂದು ತಂದೆ ಕೆಲಸಕ್ಕೆ ತೆರಳಿದಾಗ ಮತ್ತೆ ಅತ್ತೆಯ ಮನೆಗೆ ಓಡಿಹೋದ ಬಾಲಕಿ, ಪೊಲೀಸರಿಗೆ ಕರೆ ಮಾಡಿ ತನಗಾದ ದೌರ್ಜನ್ಯವನ್ನು ವಿವರಿಸಿದ್ದಾಳೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ರಕ್ಷಿಸಿದ್ದು, ಆಕೆಯ ತಂದೆ ಮತ್ತು ತಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಹೆತ್ತವರ ವಿರುದ್ಧ ಪೋಕ್ಸೋ (POCSO) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ (BNS) ಕಠಿಣ ಪ್ರಕರಣ ದಾಖಲಿಸಲಾಗಿದ್ದು, ಬಾಲಕಿಯನ್ನು ಸರಕಾರಿ ರಕ್ಷಣಾ ಕೇಂದ್ರಕ್ಕೆ ರವಾನಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles