SUDDIKSHANA KANNADA NEWS/ DAVANAGERE/ DATE:06-08-2024
ದಾವಣಗೆರೆ: ಹರಿಹರ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎಲ್ಲಾ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗಾವಕಾಶ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ.
ಎಸ್.ಎಸ್.ಎಲ್.ಸಿ., ಪಿ.ಯು.ಸಿ , ಐ.ಟಿ.ಐ , ಡಿಪ್ಲೋಮ , ಬಿ.ಇ, ಮತ್ತು ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳಿಗೆ ಸಿ.ಎನ್.ಸಿ ಆಪರೇಟರ್ ಟರ್ನರ್, ಸಿ.ಎನ್.ಸಿ ಪ್ರೋಗ್ರಾಮರ್, ಸಿ.ಎನ್.ಸಿ ಮಿಲ್ಲಿಂಗ್ ಮಷಿನ್ ಆಪರೇಟರ್, ಡಿಸೈನರ್-ಮೆಕಾನಿಕಲ್, ಇಂಡಸ್ಟ್ರಿಯಲ್ ಆಟೋಮೇಷನ್ ಸ್ಪೆಷಲಿಸ್ಟ್, ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ ಟೆಕ್ನಿಷಿಯನ್, ಇಂಟರ್‌ನೆಟ್ ಆಪ್ ಥಿಂಗ್ , ಸಿ.ಎನ್.ಸಿ ಪ್ರೋಗ್ರಾಮಿಂಗ್. ಕನ್ವೆನ್ಸನಲ್ ಮಿಲ್ಲಿಂಗ್ ಮಷಿನ್, ಪ್ರೊಡಕ್ಷನ್ ಇಂಜಿನಿಯರ್, ಆಟೋಮೇಷನ್ ಅಂಡ್ ಕಂಟ್ರೋಲ್, ರಿವರ್ಸ್ ಇಂಜಿನಿಯರಿಂಗ್, 3 ಡಿ ಪ್ರಿಂಟಿಂಗ್ , ಸಿ.ಎನ್.ಸಿ ಮ್ಯಾನುಫ್ಯಾಕ್ಟರಿಂಗ್ ಅಂಡ್ ಮಷಿನಿಂಗ್, ವ್ಯಾಲಿಡೇಷನ್ ಲ್ಯಾಬ್, ರಿಯಾಲಿಟಿ ಲ್ಯಾಬ್, 4 ಪ್ರೊಡಕ್ಟ್ ಡಿಸೈನ್ ಅಂಡ್ ಡೆವೆಲಪ್‌ಮೆಂಟ್ ಮತ್ತು ಆಪರೇಷನ್, ಮಿಲ್ಲರ್, ಡ್ರೈಂಡರ್, ಟೂಲ್ ರೂಮ್ ಮಷಿನ್ಸ್ ಕೋರ್ಸ್ಗಳಗೆ ಅಲ್ಪಾವಧಿ ತರಬೇತಿಗಳನ್ನು ಉಚಿತವಾಗಿ ನೀಡಲಾಗುವುದು. ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ತಿಷ್ಯವೇತನ ನೀಡಲಾಗುವುದು.
ಆಸಕ್ತರು 18 ರಿಂದ 35 ವರ್ಷದೊಳಗಿನವರಾಗಿರಬೇಕು, ಅರ್ಜಿ ಸಲ್ಲಿಸಲು ಆಗಸ್ಟ್ 23 ರಂದು ಕೊನೆ ದಿನವಾಗಿದೆ. ಹೆಚ್ಚಿನ ವಿವರಗಳಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ 22 ಸಿ & ಡಿ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯ ಹರ್ಲಾಪುರ, ಕೆ.ಎಸ್.ಆರ್.ಟಿ.ಸಿ ಡಿಪೋ ಹತ್ತಿರ ಹರಿಹರ ಅಥವಾ ದೂ.ಸಂ 9035372971 9611025932, 8884488202, 9164369670 ಗೆ ಸಂಪರ್ಕಿಸಬಹುದು ಎಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಪ್ರಾಂಶುಪಾಲರು ತಿಳಿಸಿದ್ದಾರೆ.