(Gruhalakshmi scheme-:) ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 2000 ಹಣ 11 ಮತ್ತು 12 ನೇ ಕಂತಿನ ಹಣ ಜಮಾ ಆಗಲು ಬಾಕಿ ಉಳಿಸಿಕೊಂಡಿದೆ. ಈ ಕುರಿತು ಹಣ ಜಮಾ ಯಾವಾಗ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಹೌದು, ಗೃಹಲಕ್ಷ್ಮಿ ಯೋಜನೆಯ 11 ಮತ್ತು 12 ನೇ ಕಂತಿನ ಹಣ ಇಂದು ಸಂಜೆಯೊಳಗೆ ಅರ್ಹ ಫಲಾನುಭವಿಗಳಿಗೆ ಜಮಾ ಆಗಲಿದೆ ಎಂದು ತಿಳಿದು ಬಂದಿದೆ.
ಇನ್ನು ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗೋದಕ್ಕಿಂತ ಮುಂಚೆ ನಿಮ್ಮ ಅಕೌಂಟ್ ಸರಿಯಾದ ರೀತಿಯಲ್ಲಿ ಇದೇ ಅನ್ನೋದನ್ನ ಮೊದಲು ನೀವು ಖಾತ್ರಿಪಡಿಸಿಕೊಳ್ಳಿ. ಯಾಕೆಂದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇ-ಕೆವೈಸಿ ಪ್ರಕ್ರಿಯೆ ಹಾಗೂ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಸೀಡಿಂಗ್ ಮಾಡಿಸುವಂತೆ ಸೂಚಿಸಲಾಗಿದೆ.
ಈ 14 ಜಿಲ್ಲೆಯವರಿಗೆ ಮೊದಲನೇ ಹಂತದ ಹಣ ಬಿಡುಗಡೆ:
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ತುಮಕೂರು
- ದಾವಣಗೆರೆ
- ದಕ್ಷಿಣ ಕನ್ನಡ
- ಚಿತ್ರದುರ್ಗ
- ಬಳ್ಳಾರಿ
- ಚಿಕ್ಕಮಗಳೂರು
- ರಾಯಚೂರು
- ಶಿವಮೊಗ್ಗ
- ಉತ್ತರ ಕನ್ನಡ
- ಕಲ್ಬುರ್ಗಿ
- ವಿಜಯಪುರ
- ಉಡುಪಿ
- ಈ 14 ಜಿಲ್ಲೆಯವರೆಗೆ ಮೊದಲ ಹಂತದಲ್ಲಿ ಹಣ ವರ್ಗಾವಣೆ ಮಾಡಲಾಗುತ್ತದೆ ಎನ್ನಲಾಗಿದೆ.