ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಪ್ರತಿದಿನ ಒಂದು ಕಪ್ ‘ಗ್ರೀನ್ ಟೀ’ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

On: August 4, 2024 11:01 AM
Follow Us:
---Advertisement---

ನಮ್ಮಲ್ಲಿ ಹೆಚ್ಚಾಗಿ ಕಾಫಿ, ಟೀ ಕುಡಿಯುತ್ತಾರೆ. ಆದರೆ ಗ್ರೀನ್ ಟೀ ಕುಡಿಯುವುದು ತೀರಾ ಅಪರೂಪ. ಕಹಿ ಅಥವಾ ಹೆಚ್ಚು ಒಗರಿನಿಂದಿರುವ ಕಾರಣಕ್ಕೆ ಅನೇಕರು ಗ್ರೀನ್​ ಟೀ ಅನ್ನು ಇಷ್ಟಪಡುವುದಿಲ್ಲ. ಆದರೆ ಇದು ಆರೋಗ್ಯದ ಸಮಸ್ಯೆಗೆ, ಸೌಂದರ್ಯ ವೃದ್ಧಿಗೆ, ಹೀಗೆ ನಾನಾ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ನಿವಾರಿಸುತ್ತದೆ.

ಗ್ರೀನ್ ಟೀಯಲ್ಲಿರುವ ಪೋಷಕಾಂಶಗಳು, ಅಂಟಿ ಆಕ್ಸಿಡೆಂಟ್‌ಗಳು ಮತ್ತು ಇತರ ಖನಿಜಗಳ ಪ್ರಮಾಣವನ್ನು ಪರಿಗಣಿಸಿದರೆ ಇದೊಂದು ಅತ್ಯುತ್ತಮವಾದ ಪಾನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಗ್ರೀನ್ ಟೀ ನೋಡಲು ಮಾತ್ರ ಹಸಿರಾಗಿರದೆ ದೇಹವನ್ನೂ ಹಸಿರುಗೊಳಿಸಲು ಸಮೃದ್ಧವಾಗಿದೆ.

ಇದರಲ್ಲಿರುವ ಫ್ಲೇವನಾಯ್ಡ್, ಕ್ಯಾಟೆಚಿನ್ ಎಂಬ ಪಾಲಿಫಿನಾಲ್​ಗಳು ಪ್ರಬಲವಾದ ಆಂಟಿ ಆಕ್ಸಿಡೆಂಟುಗಳಂತೆ ಕೆಲಸ ಮಾಡುತ್ತವೆ. ಇದು ಜೀವಕೋಶಗಳ ಸವೆತ ತಡೆಯುವುದು ಮತ್ತು ಹೊರಪದರಗಳಿಗೆ ಬಲಿಷ್ಟತೆಯನ್ನು ನೀಡುವ ಕಾರಣ ಅತ್ಯಂತ ತಳಮಟ್ಟದಿಂದ ಆರೋಗ್ಯವನ್ನು ವೃದ್ಧಿಸುತ್ತದೆ.

ಮನಸ್ಸಿಗೆ  ಚೈತನ್ಯ ತುಂಬುತ್ತದೆ
ಗ್ರೀನ್ ಟೀಯಲ್ಲಿ ಶೇ.2-4 ಕೆಫೀನ್ ಅಂಶ ಇದ್ದು, ಇದು ನಮ್ಮ ಮನಸ್ಸನ್ನು ಜಾಗರೂಕತೆಯಿಂದ ಇರಿಸುತ್ತದೆ. ರೋಗ ನಿರೋಧಕ ಶಕ್ತಿ ಜೊತೆಗೆ ಮೆದುಳಿನ ಕಾರ್ಯಚಟುವಟಿಕೆಯನ್ನು ಸುಧಾರಿಸಲು ಸಹ ಕೆಲಸ ಮಾಡುತ್ತದೆ. ಸ್ವಲ್ಪ ಕೆಲಸ ಮಾಡಿದ ನಂತರ ಮಾನಸಿಕವಾಗಿ ಸುಸ್ತಾಗುತ್ತಿದ್ದರೆ ಈ ಗ್ರೀನ್ ಟೀ ಆಯಾಸವನ್ನು ದೂರಾಗಿಸುತ್ತದೆ.

ಉರಿಯೂತದ ಸಮಸ್ಯೆ ನಿವಾರಣೆ
ಪ್ರತಿ ದಿನ ಬೆಳಗ್ಗೆ ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದರಿಂದ ದೀರ್ಘ ಕಾಲದಿಂದ ಬಳಲುತ್ತಿರುವ ಉರಿಯೂತದ ಸಮಸ್ಯೆಯ ಜೊತೆಗೆ ಇನ್ನಿತರ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. ಮೆದುಳಿಗೆ ಚುರುಕುತನದ ಪ್ರಭಾವ ಉಂಟಾಗುವುದರಿಂದ ಚಟುವಟಿಕೆಯಿಂದ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಲು ಸಹಾಯವಾಗುತ್ತದೆ.

ತ್ವಚೆಯ ಆರೋಗ್ಯಕ್ಕೆ ಉತ್ತಮ
ನಮ್ಮ ತ್ವಚೆಯ ಕಾಂತಿ ನಮ್ಮ ಸೌಂದರ್ಯವನ್ನು ಬಿಂಬಿಸುತ್ತದೆ. ನಮ್ಮ ದೇಹದ ಚರ್ಮ ಆರೋಗ್ಯ ಭರಿತವಾದರೆ ಹಲವಾರು ಚರ್ಮ ವ್ಯಾಧಿಗಳಿಂದ ನಾವು ದೂರ ಉಳಿಯಬಹುದು. ನಿರ್ಜಲೀಕರಣದ ಸಮಸ್ಯೆ ಹೊಂದಿಲ್ಲದಿದ್ದರೆ ನಮ್ಮ ಚರ್ಮ ಆರೋಗ್ಯದಿಂದಲೇ ಕೂಡಿರುತ್ತದೆ. ಸೀಮಿತವಾದ ಗ್ರೀನ್ ಟೀ ಸೇವನೆಯ ಅಭ್ಯಾಸ ನಮ್ಮದಾದರೆ ಅದರಲ್ಲಿರುವ ಬಹಳಷ್ಟು ಬಗೆಯ ಪೌಷ್ಟಿಕ ಸತ್ವಗಳು ಮತ್ತು ಆಂಟಿ – ಆಕ್ಸಿಡೆಂಟ್ ಅಂಶಗಳು ನಮ್ಮ ಚರ್ಮಕ್ಕೆ ಪೋಷಕಾಂಶಗಳನ್ನು ಒದಗಿಸಿ ಆರೋಗ್ಯಕರವಾದ ತ್ವಚೆಯನ್ನು ನಮ್ಮದಾಗಿಸುತ್ತದೆ.

ಕೊಬ್ಬು ನಿವಾರಣೆಗೆ ಸಹಾಯ
ಗ್ರೀನ್ ಟೀನಲ್ಲಿ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ (ಇಜಿಸಿಜಿ ಕ್ಯಾಟೆಚಿನ್ಸ್) ಎಂಬ ಕೆಲವು ರೀತಿಯ ಫ್ಲೇವನಾಯ್ಡ್​ಗಳಿವೆ. ಇದು ದೇಹದ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ ಮತ್ತು ಕೊಬ್ಬಿನ ಉತ್ಕರ್ಷಣವನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಹೆಚ್ಚುವರಿ ಕೊಬ್ಬು ಹೆಚ್ಚಾಗಿ ಮಧುಮೇಹಕ್ಕೆ ಕಾರಣವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲಾಗದೆ ಏರುತ್ತಿದ್ದರೆ ಮಧುಮೇಹದ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ ಗ್ರೀನ್ ಟೀ ಸೇವಿಸುವುದರಿಂದ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುವ ಅಡ್ರಿನಾಲಿನ್ ಹಾರ್ಮೋನ್ ಉತ್ಪಾದನೆಯು ಕಡಿಮೆಯಾಗುತ್ತದೆ.

ಜೀರ್ಣ ಕ್ರಿಯೆಗೂ ಸಹಾಯಕ
ಗ್ರೀನ್ ಟೀ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವ ಸಾಮರ್ಥ್ಯಕ್ಕೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ ಜೊತೆಗೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಒತ್ತಡ, ಖಿನ್ನತೆ ಅಥವಾ ಆತಂಕಕ್ಕೆ ಸಂಬಂಧಿಸಿದ ಯಾವುದೇ ರೋಗಲಕ್ಷಣಗಳಿಂದ ನಿಮ್ಮನ್ನು ತಡೆಯುತ್ತದೆ. ಮಧುಮೇಹ ಹೊಂದಿರುವವರಿಗಂತೂ ಈ ಗ್ರೀನ್ ಟೀ ಪರಿಣಾಮಕಾರಿಯಾಗಿದೆ.

Join WhatsApp

Join Now

Join Telegram

Join Now

Leave a Comment