ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಕಾಂಗ್ರೆಸ್ ಸರ್ಕಾರ ಸಾರಿಗೆ ಇಲಾಖೆಯನ್ನು ಸಂಪೂರ್ಣ ನೆಲಸಮ ಮಾಡಿದೆ ಎಂದು ಆರೋಪಿಸಿದರು.
ಸುದ್ದಿಗೊಷ್ಠಿಯಲ್ಲಿ ಇಂದು ಮಾತನಾಡಿದ ಅವರು ಸಾರಿಗೆ ಇಲಾಖೆಯ ನೌಕರರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ.ಸಾರಿಗೆ ಇಲಾಖೆಯವರಿಗೆ ತಮ್ಮ ಆರ್ಥಿ ಸ್ಥಿತಿಗತಿಗಳ ಬಗ್ಗೆ ಇನ್ನು ಅರಿವಗಿಲ್ಲ, ಇಲಾಖೆ ಲಾಭದಲ್ಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ.ಐಎಎಸ್ ಅಧಿಕಾರಿ ಉಪೇಂದ್ರ ತ್ರಿಪಾಠಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅವಧಿಯಲ್ಲಿ 700ಕೋಟಿ ಠೀವಣಿ ಇಡುವ ಮೂಲಕ ಸಂಸ್ಥೆಯನ್ನು ಲಾಭಕ್ಕೆ ತಂದಿದ್ದರು.ಅಂತಹ ಆಸ್ತಿಯನ್ನು ಸರ್ಕಾರ ಇಂದು ಮಾರಾಟ ಮಾಡಲು ಹೊರಟಿದೆ ಎಂದು ದೂರಿದರು.
ಸಾರಿಗೆ ಇಲಾಖೆಗೆ ಡಿಸೆಂಬರ್ ಅಂತ್ಯಕ್ಕೆ 7401ಕೋಟಿ ರೂ ಕೊಡಬೇಕಿದೆ, ಭವಿಷ್ಯ ನಿಧಿಗೆ 2500ಕೋಟಿ, ನಿವೃತ್ತ ನೌಕರರ ಬಾಕಿ 362ಕೋಟಿ, ಸಿಬ್ಬಂದಿ ಬಾಕಿ ಪಾವತಿ,ಸರಬದಾರರ ಬಿಲ್, ಇಂಧನ ಬಾಕಿ ಸೇರಿ 1000ಕೋಟಿ, ರಜೆ ನಿಗದಿಕರಣ 700 ಕೋಟಿ, ಒಟ್ಟು ಸಾಲದ ಬಾಕಿ ಹೊಣೆಗಾರಿಗೆ ಸೇರಿ,5614ಕೋಟಿ ಆಗುತ್ತದೆ.ಬಾಕಿ ಮೊತ್ತ ಶೇ.10.5ರಷ್ಟು ಬಡ್ಡಿ ಕಟ್ಟಬೇಕಿದೆ ಎಂದು ವಿವರಿಸಿದರು.
ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದ ಸಭೆಯಲ್ಲಿ 3650ಕೋಟಿ ಹೊರೆಯಾಗುತ್ತಿದೆ ಎಂದು ಅಧಿಕಾರಿಗಳೆ ಒಪ್ಪಿಕೊಂಡಿದ್ದಾರೆ, ಶೇ.15ರಷ್ಟು ಪ್ರಯಾಣದರ ಹೆಚ್ವಳಕ್ಕೆ ಸಭೆ ನಿರ್ಣಯಿಸಿದೆ.ದರ ಪರಿಕ್ಷಣೆಯಾದರೂ ನಿಗಮಗಳು 1800ಕೋಟಿ ರೂ ನಷ್ಟ ಅನುಭವಿಸುತ್ತದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.