ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅನ್ನದಾತರಿಗೆ ಭರ್ಜರಿ ಸಿಹಿ ಸುದ್ದಿ: ಸರ್ಕಾರದಿಂದ ಬಂತು ಹೊಸ ಯೋಜನೆ ಏನಿದು?

On: June 13, 2024 12:15 PM
Follow Us:
---Advertisement---

ನಮ್ಮ ರಾಜ್ಯದಲ್ಲಿ ರೈತರಿಗೆ ಅನುಕೂಲವಾದ ಮಾಡಿಕೊಡಲು ರಾಜ್ಯ ಸರ್ಕಾರವು ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೆಲವೊಮ್ಮೆ ಸಮಯಕ್ಕೆ ಮಳೆಯು ಬೆಳೆಯು ಆಗದೇ ರೈತರು ಕಷ್ಟಪಡಬಾರದು, ಕೃಷಿಗೆ ಹಾಗೂ ಬೆಳೆಯುವ ಬೆಳೆಯಿಂದ ನಷ್ಟ ಆಗದೆ ಇರುವ ಹಾಗೆ ಹಾಗೂ ಕೃಷಿ ಕೆಲಸಗಳನ್ನು ಯಾವುದೇ ಸಮಸ್ಯೆ ಇಲ್ಲದೇ ನಿರ್ವಹಿಸುವ ಸಲುವಾಗಿ ರೈತರಿಗೆ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈಗಾಗಲೇ ಇರುವಂತಹ ಯೋಜನೆಗಳ ಜೊತೆಗೆ ಹೊಸದೊಂದು ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಸರ್ಕಾರ.

ರೈತರಿಗಾಗಿ ಹೊಸ ಯೋಜನೆ

ಇದೀಗ ರಾಜ್ಯ ಸರ್ಕಾರವು ರೈತರಿಗೆ ಹಣಕಾಸಿನ ವಿಚಾರದಲ್ಲಿ ಆಗುತ್ತಿರುವಂತಹ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅದಕ್ಕಾಗಿಯೇ ಸಪೋರ್ಟ್ ಮಾಡುವ ಸಲುವಾಗಿ ಹೊಸದಾದ ಯೋಜನೆ ಒಂದನ್ನು ಜಾರಿಗೆ ತಂದಿದ್ದು, ನಮ್ಮ ರಾಜ್ಯಕ್ಕೆ ಸೇರಿದ ಎಲ್ಲಾ ರೈತರು ಸಹ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದರಿಂದಾಗಿಯೇ ರೈತರಿಗೆ ಅನುಕೂಲ ಸಹ ಸಿಗುತ್ತದೆ, ಹೆಚ್ಚಿನ ಚಿಂತೆ ಇಲ್ಲದೇ ವ್ಯವಸಾಯವನ್ನು ಮಾಡಿಕೊಂಡು ಹೋಗಬಹುದು.

ರೈತರ ಅನುಕೂಲಕ್ಕೆ ಸರ್ಕಾರದಿಂದ ಹೊಸ ನಿರ್ಧಾರ

ನಮ್ಮ ರಾಜ್ಯದ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ರೈತರಿಗೆ ಅನುಕೂಲ ಆಗಬೇಕು. ರೈತರು ಸಮಸ್ಯೆಗಳಿಗೆ ಸರ್ಕಾರ ಪರಿಹಾರವನ್ನು ನೀಡಬೇಕು ಎನ್ನುವ ಕಾರಣದಿಂದ ಹೊಸದೊಂದು ನಿಯಮವನ್ನು ಜಾರಿಗೆ ತಂದಿದ್ದು, ಇನ್ನುಮುಂದೆ ಪ್ರತಿ ಸೋಮವಾರ ಖಡಾಖಂಡಿತವಾಗಿ ಎಲ್ಲಾ ಆಡಳಿತಾಧಿಕಾರಿಗಳು ಹಾಗೂ ಕೆಲಸಗಾರರು ಕಚೇರಿಗೆ ಬರಲೇಬೇಕು ಎಂದು ಆದೇಶ ನೀಡಿದ್ದಾರೆ. ಈ ಬಗ್ಗೆ ಆಡಳಿತದ ಸುಧಾರಣಾ ಇಲಾಖೆ ಸರ್ಕಾರದ ಅಧೀನದಲ್ಲಿ ಕಾರ್ಯದರ್ಶಿ ವಿಮಲಾಕ್ಷಿ ಬಿ ಅವರು ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ಕಚೇರಿಗಳಿಗೆ ಆದೇಶವನ್ನು ಕೂಡ ಹೊರಡಿಸಿದ್ದಾರೆ.

ಸೋಮವಾರ ಕೃಷಿ ಕಚೇರಿಗಳಲ್ಲಿ ಅಧಿಕಾರಿಗಳು ಇರಲೇಬೇಕು!

ನಮಗೆಲ್ಲ ಗೊತ್ತಿರುವ ಹಾಗೆ ಪ್ರತಿ ವಾರದ ಸೋಮವಾರದ ದಿನದಂದು ಎಲ್ಲಾ ರೈತರು ತಮ್ಮ ಕೆಲಸದಿಂದ ಒಂದು ದಿನ ಬಿಡುವು ತೆಗೆದುಕೊಂಡು, ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಆಫೀಸ್ ಗಳಿಗೆ ಹೋಗಿಯೇ ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಳ್ಳುವುದು ಮತ್ತು ವ್ಯವಸಾಯಕ್ಕೆ ಸಂಬಂಧಿಸಿದ ಹಾಗೆ ಏನಾದ್ರೂ ತರುವುದು ಇದ್ರೆ, ತೆಗೆದುಕೊಂಡು ಬರುವುದು ಇದನ್ನೆಲ್ಲ ಮಾಡುತ್ತಾರೆ.

ಈ ಕಾರಣಕ್ಕೆ ಸೋಮವಾರದ ದಿವಸ ಕಚೇರಿಗಳಿಗೆ ರೈತರು ಬರುವ ಕಾರಣಕ್ಕೆ ತಾಲ್ಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಕಚೇರಿಗಳಲ್ಲಿ ಸೋಮವಾರದ ದಿವಸ ಅಧಿಕಾರಿಗಳು ಕಚೇರಿಗೆ ಬಂದು ರೈತರ ಕೆಲಸಗಳನ್ನು ಮಾಡಿಕೊಡುತ್ತಿದ್ದರು.

ಹಾಗಾಗಿ ಇನ್ನುಮುಂದೆ ಕೂಡ ಈ ಒಂದು ಕೆಲಸ ತಪ್ಪದೇ ನಡೆಯಬೇಕು, ರೈತರಿಗೆ ಅನುಕೂಲ ಮಾಡಿಕೊಡಬೇಕು, ಅವರ ಕೆಲಸಗಳನ್ನು ಅಧಿಕಾರಿಗಳು ಮಾಡಿಕೊಡಬೇಕು, ಸೋಮವಾರದ ದಿವಸ ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳು ಇರಬೇಕು ಎಂದು MLC ಹೆಚ್.ವಿಶ್ವನಾಥ್ ಅವರು ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿಕೊಂಡಿದ್ದು, ಸಿಎಂ ಅವರು ಇದಕ್ಕೆ ಪಾಸಿಟಿವ್ ಆಗಿಯೇ ಸ್ಪಂದಿಸಿದ್ದಾರೆ. ಹಾಗಾಗಿ ರೈತರಿಗೆ ಸಹಾಯ ಆಗುವ ಹೊಸ ಆದೇಶವನ್ನು ಹೊರಡಿಸಲಾಗಿದೆ.

Join WhatsApp

Join Now

Join Telegram

Join Now

Leave a Comment