SUDDIKSHANA KANNADA NEWS/ DAVANAGERE/ DATE:13-12-2023
ಬೆಂಗಳೂರು: ಹೈನುಗಾರಿಕೆ ಮಾಡುವವರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಪಶು ಸಂಗೋಪನೆ ಯೋಜನೆಯಡಿ ಸಾಕುವಂತ ಪ್ರಾಣಿಗಳು ಅಸುನೀಗಿದರೆ ಮಾಲೀಕರು ಪರಿಹಾರ ಪಡೆಯುವ ಸಲುವಾಗಿ ಯೋಜನೆಯೊಂದನ್ನು ಜಾರಿಗೊಳಿಸಲಾಗಿದೆ.
ಈ ಯೋಜನೆಯ ಹೆಸರು ಅನುಗ್ರಹ. ಕುರಿ ಮತ್ತು ಮೇಕೆ ಸತ್ತರೆ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗುತ್ತದೆ. ಕರ್ನಾಟಕ ಬಜೆಟ್ 2023- 24 ರ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದೆ. ಪಶುಸಂಗೋಪನೆ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮಾತ್ರವಲ್ಲ, ಅಭಿವೃದ್ಧಿಗಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಒತ್ತು ನೀಡಿದ್ದಾರೆ. ಹಿಂದಿನ ಬಾರಿ ಸಿದ್ದರಾಮಯ್ಯ ಅವರ ಸರಕಾರವಿದ್ದಾಗ ಅನುಗ್ರಹ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನುಗ್ರಹ ಯೋಜನೆ ಕೈ ಬಿಡಲಾಗಿತ್ತು. ಈಗ ಮತ್ತೆ ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ರೈತರಿಗೆ ಅನುಕೂಲವಾಗಲೆಂದು ಪಶು ಸಂಗೋಪನೆ ಕಾರ್ಯವನ್ನು ಅದರ ಜೊತೆ ನಂದಿನಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಕೆಳಗಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಏನಿದು ಅನುಗ್ರಹ ಯೋಜನೆ?
ಪಶು ಸಂಗೋಪನೆಯಡಿಯಲ್ಲಿ ಸಾಕುವಂತಹ ಪ್ರಾಣಿಗಳು ಸಾವನ್ನಪ್ಪಿದಾಗ ಮಾಲೀಕರಿಗೆ ಪರಿಹಾರ ಕೊಡುವುದಕ್ಕಾಗಿ ಅನುಗ್ರಹ ಯೋಜನೆ ಜಾರಿಗೊಳಿಸಲಾಗಿತ್ತು. ಈ ಯೋಜನೆಯಿಂದ ಗೋವುಗಳು, ಕುರಿಗಳು, ಮೇಕೆಗಳು, ಹಸು ಹೆಮ್ಮೆ
ಎತ್ತು ಮರಣ ಹೊಂದಿದರೆ ಅವುಗಳ ಮಾಲೀಕರಿಗೆ ಸರ್ಕಾರದರಿಂದ ಪರಿಹಾರ ದೊರೆಯಲಿದೆ.
ಅಷ್ಟೇ ಅಲ್ಲದೆ ಚರ್ಮರೋಗದಿಂದ ಮೃತಪಟ್ಟ ಹಸುಗಳಿಗೂ ಕೂಡ ಪರಿಹಾರ ಧನ ಕೊಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಒಟ್ಟು 32000 ಜಾನುವಾರುಗಳು ಈ ಚರ್ಮರೋಗದಿಂದ ತುತ್ತಾಗಿದ್ದವು ಅದರಲ್ಲಿ 25000 ಗೋ ಗಳಿಗೆ 53 ಕೋಟಿ ರೂಪಾಯಿಗಳನ್ನು ಪರಿಹಾರ ನೀಡಿದೆ. ಉಳಿದ ಪ್ರಾಣಿಗಳು ಕೂಡ 12 ಕೋಟಿ ಪರಿಹಾರವನ್ನು ಮೀಸಲಿಟ್ಟಿದೆ.
ಸರ್ಕಾರದಿಂದ ಈ ಯೋಜನೆಯಡಿ ಎಷ್ಟು ಪರಿಹಾರ ಧನ ಸಿಗುತ್ತದೆ?
ಮೇಕೆ, ಕುರಿ ಅಸುನೀಗಿದರೆ ತಲಾ ಮೇಕೆ – ಕುರಿಗೆ 5 ಸಾವಿರ ರೂ. ಪರಿಹಾರ ಸಿಗುತ್ತದೆ. ಗೋವುಗಳು (ಹಸು-ಎಮ್ಮೆ-ಎತ್ತು) ಮರಣ ಹೊಂದಿದರೆ ತಲಾ 10,000 ರೂ. ಪರಿಹಾರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಆದಕಾರಣ ರೈತರು ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಪ್ರಾಣಿಗಳು ಸಾವನ್ನಪ್ಪಿದರೆ ಈ ಕೆಳಗಿನ ರೀತಿ ಅರ್ಜಿಯನ್ನು ಸಲ್ಲಿಸಿ ಈ ಪರಿಹಾರ ಧನವನ್ನು ಪಡೆದುಕೊಳ್ಳಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಬಳಿ ಇರುವ ಕುರಿ ಮೇಕೆ ಮೃತಪಟ್ಟರೇ ನೀವು ಮೊದಲು ನಿಮ್ಮ ಹತ್ತಿರದ ಪಶು ಸಂಗೋಪನೆ ಇಲಾಖೆಯಲ್ಲಿ ಪಶು ವೈದ್ಯರನ್ನು ಭೇಟಿ ಮಾಡಿ ಮರಣೋತ್ತರ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಆ ಪ್ರಾಣಿಗಳ ಮಾಲೀಕರು ಬೇಕಾಗುವ ಎಲ್ಲ ದಾಖಲಾತಿಗಳನ್ನು ಅಂದರೆ ನಿಮ್ಮ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಎಲ್ಲವನ್ನು ತೆಗೆದುಕೊಂಡು ಅಧಿಕಾರಿಗಳಿಗೆ ತಲುಪಿಸಬೇಕು.
ಹೈನುಗಾರಿಕೆ ಮಾಡುವವರೇ ಇತ್ತ ಗಮನಿಸಿ:
ಮುಂಗಾರು ಸಮಯದಲ್ಲಿ ಸರಿಯಾಗಿ ಮಳೆ ಆಗದೆ ಇರುವುದಕ್ಕಾಗಿ ರೈತರು ಪರದಾಡುತ್ತಿದ್ದು ಮೇವಿನ ಸಮಸ್ಯೆಯಿಂದ ರೈತರು ಮಾರುತಿದ್ದಕ್ಕಾಗಿ ಹಾಲಿನ ಬೆಲೆಯಲ್ಲಿ ಕೊಂಚಮಟ್ಟಿಗೆ ಬೆಲೆ ಏರಿಕೆಯಾಗಿದೆ ಮೊದಲು ಒಂದು ಲೀಟರ್ಗೆ 35 ನೀಡುತ್ತಿದ್ದರು ಇದೀಗ 36 ರುಪಾಯಿವರೆಗೂ ಒಂದು ಲೀಟರ್ಗೆ ನೀಡುತ್ತಿದ್ದು ಒಂದು ಲೀಟರ್ಗೆ ಒಂದು ರೂಪಾಯಿ ಜಾಸ್ತಿಯಾಗಿದೆ.
ಹಾಗೆ ಹಾಲಿನ ಬೆಲೆಯೂ ಫ್ಯಾಟ್ ಮುಖಾಂತರ ಗುರುತಿಸುತ್ತಿದ್ದು ನಿಮ್ಮ ಹಾಲಿನ ಫ್ಯಾಟ್ ಸರಿಯಾಗಿ ಇದ್ದರೆ ಅತಿಹೆಚ್ಚಿನ ಮೊತ್ತದ ಹಣವನ್ನು ನೀವು ಪಡೆಯುತ್ತೀರಿ. ಹೈನುಗಾರಿಕೆ ಮಾಡಲು ಬಯಸುತ್ತಿದ್ದರೆ ಹೈನುಗಾರಿಕೆ ಆಧಾರದ ಮೇಲೆ ಸಾಲವನ್ನು ಪಡೆದುಕೊಳ್ಳಿ
ಹೈನುಗಾರಿಕೆ ಸಾಲ ಪಡೆಯುವುದು ಹೇಗೆ…?
ಕರ್ನಾಟಕ ರಾಜ್ಯ ಸರ್ಕಾರವು ಹೈನುಗಾರಿಕೆಗೆ ಮಹತ್ವವನ್ನು ನೀಡಿದ್ದು ಹಾಗೆ ಕೆಎಂಎಫ್ ನಿಂದ ರೈತರಿಗೆ ಅತಿ ಹೆಚ್ಚಿನ ಲಾಭವು ದೊರೆಯುತ್ತಿದ್ದು ಈಗ ಈ ಸಾಲವನ್ನು ಹೇಗೆ ಪಡೆದುಕೊಳ್ಳಬೇಕೆಂಬುದನ್ನು ತಿಳಿದುಕೊಳ್ಳಿ.
ಈ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಿಮಗೆ ಎರಡು ಅವಕಾಶಗಳಿರುತ್ತದೆ. ಒಂದು ನೇರವಾಗಿ ಬ್ಯಾಂಕ್ನಿಂದ ಪಡೆದುಕೊಳ್ಳಬಹುದು ಅಥವಾ ನೀವು ಹಾಲು ಹಾಕುವ ಹಾಲಿನ ಡೈರಿ ವತಿಯಿಂದ ಪಡೆದುಕೊಳ್ಳಬಹುದು.
ಎರಡು ಸಾಲವನ್ನು ನೀಡುತ್ತವೆ. ಆದರೆ ಎರಡು ಬ್ಯಾಂಕ್ ಮುಖಾಂತರ ಸಾಲವನ್ನೇ ನೀಡುತ್ತಿದ್ದು ಅದಕ್ಕೆ ಡಿಸಿಸಿ ಬ್ಯಾಂಕ್ ಅಂದರೆ ಡಿಸ್ಟ್ರಿಕ್ಟ್ ಕೋಆಪರೇಟಿವ್ ಬ್ಯಾಂಕ್ ಮುಖಾಂತರ ಸಾಲವನ್ನು ಪಡೆದುಕೊಳ್ಳುವುದು ಉತ್ತಮ.
ಕೇವಲ ಎರಡು ಪರ್ಸೆಂಟ್ ನಷ್ಟು ಮಾತ್ರ ಬಡ್ಡಿದರ ಇದ್ದು ನಿಮಗೆ 3,00,000 ವರೆಗೂ ಹೈನುಗಾರಿಕೆಗೆ ಸಾಲವು ಸಿಗುತ್ತಿದ್ದು ಈ ಸಾಲವನ್ನು ಡಿಸಿಸಿ ಅಂದರೆ ಡಿಸ್ಟ್ರಿಕ್ಟ್ ಕೋಆಪರೇಟಿವ್ ಬ್ಯಾಂಕ್ ಮುಖಾಂತರ ಪಡೆದುಕೊಳ್ಳಬಹುದು.