ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅಂತರರಾಜ್ಯ ಮನೆ ಕಳ್ಳರ ಬಂಧನ: 39 ಲಕ್ಷ ರೂ. ಮೌಲ್ಯದ 762 ಗ್ರಾಂ ಚಿನ್ನ ವಶ

On: May 5, 2023 12:18 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:05-05-2023

ದಾವಣಗೆರೆ (DAVANAGERE): ಅಂತರಾರಾಜ್ಯ ಮನೆ ಕಳ್ಳರನ್ನು ಬಂಧಿಸಿರುವ ಕೆಟಿಜೆ ನಗರ (KTJ NAGARA) ಪೊಲೀಸರು 39 ಲಕ್ಷ ರೂಪಾಯಿ ಮೌಲ್ಯದ 762 ಗ್ರಾಂ (GRAM) ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯನಗರ (VIJAYANAGARA) ಜಿಲ್ಲೆಯ ಶಿಡ್ಲಗಿ ತಾಲೂಕಿನ ಕುಪ್ಪಿನಕೆರೆ ಗ್ರಾಮದ ಆಟೋ ಚಾಲಕ (DRIVER) ರಾಜ ಅಲಿಯಾಸ್ ಷೋತರಾಜ್ (31), ದಾವಣಗೆರೆ (DAVANAGERE) ನಿಟುವಳ್ಳಿಯ ಕೊರಚರಹಟ್ಟಿಯ ಗಾರೆ ಕೆಲಸಗಾರ ಮನು ಅಲಿಯಾಸ್ ಮನ್ಸೂರ (35), ಚಿಕ್ಕಮಗಳೂರು (CHIKKAMAGALURU) ಜಿಲ್ಲೆಯ ಗಡಬನಹಳ್ಳಿಯ ಗಾರೆ ಕೆಲಸಗಾರರಾದ ಲಕ್ಷ್ಮಣ (22), ಹೆಚ್. ಎಲ್. ಗಿರೀಶ್ (22) ಬಂಧಿತರು.

ರುದ್ರಪ್ಪ ಎಂಬುವವರು ತನ್ನ ಮನೆಯ ಬೀಗವನ್ನು ಹಾಕಿಕೊಂಡು ಶಿವಪ್ಪಯ್ಯ ಕಾಂಪೌಂಡ್ ನಲ್ಲಿ ಕಟ್ಟುತ್ತಿರುವ ಮನೆಗೆ ಹೋಗಿ ವಾಪಸ್ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿತ್ತು. ಯಾರೋ ಕಳ್ಳರು ಮನೆಯ ಒಳಗೆ ಹೋಗಿ
ಬೀರುವಿನಲ್ಲಿಟ್ಟಿದ್ದ 285 ಗ್ರಾಂ ತೂಕದ ಬಂಗಾರದ ಆಭರಣಗಳು, 1,50.000 ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಕೆಟಿಜೆ ನಗರ (KTJ NAGARA) ಪೊಲೀಸ್ ಠಾಣೆ(POLICE STATION)ಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಗಳ ಆರೋಪಿಗಳು ಮತ್ತು ವಸ್ತು ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿರವರ ನಿರ್ದೇಶನದಲ್ಲಿ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ ದೊಡ್ಡಮನಿ ಹಾಗೂ ರುದ್ರೇಶ ಎ. ಕೆ. ಮಾರ್ಗದರ್ಶನಲ್ಲಿ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಶಿಧರ ಯು ಜೆ ರವರ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದೆ.

ಕೆಟಿಜೆ ನಗರ (KTJ NAGARA) ಪೊಲೀಸ್ (POLCE) ಠಾಣೆಯಲ್ಲಿ ಒಂದು, ಚಿಕ್ಕಮಗಳೂರು ನಗರದಲ್ಲಿ ಎರಡು ಪ್ರಕರಣ , ಹಾಸನದಲ್ಲಿ ಒಂದು ಪ್ರಕರಣ, ಆಂಧ್ರಪ್ರದೇಶ ರಾಜ್ಯದ ಚಿತ್ತೂರು -2 ಟೌನ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಒಂದು ಪ್ರಕರಣವನ್ನು ಪತ್ತೆ ಮಾಡಿ ಕಳ್ಳತನವಾದ ಒಟ್ಟು 850 ಗ್ರಾಂ ಬಂಗಾರದ ಆಭರಣಗಳಲ್ಲಿ 762 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು ಉಳಿದ ಬಂಗಾರದ ಆಭರಣವನ್ನು ವಶಪಡಿಸಿಕೊಳ್ಳಲು ಬಾಕಿಯಿದ್ದು ತನಿಖೆ ಮುಂದುವರಿದಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment