Home ದಾವಣಗೆರೆ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ‘ಇಗ್ನಿಟ್ರಾನ್ 2K26’ಕ್ಕೆ ಚಾಲನೆ: ಡಿ. 3ರಿಂದ 5ರವರೆಗೆ ಮಹಾಸಂಗಮ
ದಾವಣಗೆರೆಬೆಂಗಳೂರು

ಜಿ.ಎಂ. ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ‘ಇಗ್ನಿಟ್ರಾನ್ 2K26’ಕ್ಕೆ ಚಾಲನೆ: ಡಿ. 3ರಿಂದ 5ರವರೆಗೆ ಮಹಾಸಂಗಮ

Share
ವಿಶ್ವವಿದ್ಯಾಲಯ
Share

ದಾವಣಗೆರೆ: ನಗರದ ಪಿ.ಬಿ. ರಸ್ತೆಯಲ್ಲಿರುವ ಜಿ.ಎಂ. ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯ ಮತ್ತು ತಾಂತ್ರಿಕ ಕ್ಲಬ್‌ಗಳ ವತಿಯಿಂದ ಆಯೋಜಿಸಲಾಗಿರುವ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ‘ಇಗ್ನಿಟ್ರಾನ್ 2K26’ (IGNITRON 2K26) ಕಾರ್ಯಕ್ರಮಕ್ಕೆ ನವೆಂಬರ್‌ 16,2026 ರ ಸೋಮವಾರ ಚಾಲನೆ ದೊರೆಯಿತು.

ವಿಶ್ವವಿದ್ಯಾಲಯದ ಎಫ್‌ಇಟಿ ಕ್ವಾಡ್ರಾಂಗಲ್‌ನಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಚ್.ಆರ್. ಮಹಾದೇವಸ್ವಾಮಿ ಅವರು ಆರಂಭಿಕ ಹಂತವಾಗಿ ಉದ್ಘಾಟನೆ ನೆರವೇರಿಸುವ ಮೂಲಕ ಈ ತಾಂತ್ರಿಕ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಸುನೀಲ್‌ ಕುಮಾರ್‌ ಬಿ.ಎಸ್‌, ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಓಂಕಾರಪ್ಪ, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ದೀಪಕ್‌ ಎಸ್.ಡಿ ಹಾಗೂ ಈ ಉತ್ಸವದ ನೇತೃತ್ವ ವಹಿಸಿರುವ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕರಾದ ಡಾ. ಕಿರಣ್ ಕುಮಾರ್ ಎಚ್.ಎಸ್, ಸಹಾಯಕ ನಿರ್ದೇಶಕರಾದ ಇಮ್ರಾನ್ ಖಾನ್, ವಿದ್ಯಾರ್ಥಿ ವ್ಯವಹಾರಗಳ ಅಧ್ಯಕ್ಷ ನೇತ್ರಪಾಲ್ ಎಂ. ಜಾಲಿ ಹಾಗೂ ತಾಂತ್ರಿಕ ಮುಖ್ಯಸ್ಥ ಅರ್ಜುನ್ ಎಂ. ಕೆರೋಡಿ ಸೇರಿದಂತೆ ವಿವಿಧ ವಿಭಾಗಗಳ ದೀನ್‌ಗಳು, ನಿರ್ದೇಶಕರು, ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

‘ಮಾನವನ ಏಳಿಗೆಗಾಗಿ ತಂತ್ರಜ್ಞಾನ’ (Technology for Human Flourishment) ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ತಾಂತ್ರಿಕ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮುಂಬರುವ ಡಿಸೆಂಬರ್ 3, 4 ಮತ್ತು 5 ರಂದು ಮೂರು ದಿನಗಳ ಕಾಲ ಈ ರಾಷ್ಟ್ರಮಟ್ಟದ ತಾಂತ್ರಿಕ ಹಬ್ಬ ನಡೆಯಲಿದ್ದು, ವಿಜೇತರಿಗೆ ಒಟ್ಟು ₹7 ಲಕ್ಷಕ್ಕೂ ಅಧಿಕ ಮೊತ್ತದ ಬಹುಮಾನಗಳನ್ನು ನಿಗದಿಪಡಿಸಲಾಗಿದೆ.

ಪ್ರಮುಖ ಆಕರ್ಷಣೆಗಳು: ಮೂರು ದಿನಗಳ ಈ ಉತ್ಸವದಲ್ಲಿ ದೇಶದ ವಿವಿಧ ಭಾಗಗಳ ತಂತ್ರಜ್ಞಾನ ಆಸಕ್ತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಉತ್ಸವದ ಅಂಗವಾಗಿ ಕೋಡ್ ರಶ್ ಹ್ಯಾಕಥಾನ್, ರೋಬೋ ರೇಸ್, ರೋಬೋ ಸುಮೋ, ಕ್ಯಾಪ್ಚರ್ ದಿ ಫ್ಲ್ಯಾಗ್, ಐಡಿಯಾಥಾನ್, ಸರ್ಕ್ಯೂಟ್ ಡಿಬಗ್ಗಿಂಗ್, ಸ್ಟಾರ್ಟ್‌ಥಾನ್, ಫುಡ್ ಟೆಕ್, ಫಾರ್ಮಾನೋವಾ, ಲೈನ್ ಫಾಲೋವರ್, ಕೋಡಿಂಗ್ ಕೊಲ್ಯಾಬ್, ತಾಂತ್ರಿಕ ಪ್ರಬಂಧ ಮಂಡನೆ ಹಾಗೂ ಚರ್ಚಾ ಸ್ಪರ್ಧೆಗಳು ಸೇರಿದಂತೆ 25ಕ್ಕೂ ಹೆಚ್ಚು ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles